ಜಿಲ್ಲೆ

ಕಾಂಗ್ರೆಸ್ ಸರ್ಕಾರಕ್ಕೆ ಮುತಾಲಿಕ್ ನೇರ ಸವಾಲ್

ಬಾಗಲಕೋಟೆ: ಭಾರತದಲ್ಲಿ ಮುಸ್ಲಿಂರಿಗೆ ಮತದಾನ ಹಕ್ಕು ಹಿಂಪಡೆಯಬೇಕು ಎಂದು ಹೇಳಿಕೆ ನೀಡಿರುವ ಚಂದ್ರಶೇಖರ ಸ್ವಾಮೀಜಿ ಹೇಳಿಕೆಯನ್ನು ಬಾಗಲಕೋಟೆಯಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಸಮರ್ಥಿಸಿಕೊಂಡಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಮುತಾಲಿಕ್,ಸ್ವಾಮೀಜಿ ವಿರುದ್ಧ ಎ-ï‌ಐಆರ್ ಮಾಡಿದ್ದು ಅರ್ಥಹೀನ. ನಿಮಗೆ ತಾಕತ್ತಿದ್ದರೆ ಸ್ವಾಮೀಜಿಯನ್ನು ಬಂಽಸಿ ನೋಡೋಣ ಎಂದು ಕಾಂಗ್ರೆಸ್ ಸರ್ಕಾರಕ್ಕೆ ನೇರ ಸವಾಲ್ ಎಸೆದಿದ್ದಾರೆ.

ಸ್ವಾಮೀಜಿ ಹೇಳಿದ್ದರಲ್ಲಿ ಅಂಥದ್ದೇನು ತಪ್ಪಿದೆ? ನಿಮ್ಮ ಮುಲ್ಲಾ, ಮೌಲ್ವಿಗಳು ಭಾರತದ ಬಗ್ಗೆ ಏನೇನು ಹೇಳಿದ್ದಾರೆ, ಅವರ ಮೇಲೆ ಎಷ್ಟು ಎ-ï‌ಐಆರ್ ಆಗಿವೆ? ವಿಧಾನಸೌಧದಲ್ಲೆ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದನ ಬಂಽಸಲು ಒಂದು ವಾರ ತೆಗೆದುಕೊಂಡಿದ್ದೀರಿ. ಕೂಡಲೇ ಸ್ವಾಮೀಜಿ ವಿರುದ್ಧದ ಎ-ï‌ಐಆರ್ ಹಿಂಪಡೆಯಬೇಕು. ನಮ್ಮ ಸ್ವಾಮೀಜಿಗಳನ್ನು ಬೆದರಿಸುವ ಇಸ್ಲಾಮಿಕ್ ಮಾನಸಿಕತೆ ಹೊಡೆದು ಹಾಕಿ. ಈ ದೇಶದ ಕಾನೂನು, ಸಂವಿಧಾನ ದಿಕ್ಕರಿಸುವ ಒಂದು ಸಮುದಾಯದ ಜನರನ್ನು ಪ್ಲೀಜ್ ಮಾಡಲು ಸ್ವಾಮೀಜಿ ವಿರುದ್ಧ ಎ-ï‌ಐಆರ್ ಮಾಡಿದ್ದಾರೆ ಎಂದು ಕಿಡಿಕಾರಿದರು.

ಚಂದ್ರಶೇಖರ ಸ್ವಾಮೀಜಿ ಅಭಿಪ್ರಾಯದ ಬಗ್ಗೆ ಹೇಳಿಕೆ ನೀಡಿದ್ದ ಕೇಂದ್ರ ಮಾಜಿ ಸಚಿವ ಸಿ.ಎಂ.ಹಿಬ್ರಾಹಿಂ ವಿರುದ್ಧ ತೀವ್ರ ಕೆಂಡಮಂಡಲವಾದ ಮುತಾಲಿಕ್, ಹಿಬ್ರಾಹಿಂ ಮೊದಲು ವಕ್ ಬೋರ್ಡ್ ಆಸ್ತಿ ನುಂಗಿ ಸಾವಿರಾರು ಕೋಟಿ ರೂ. ಆನಂದವಾಗಿ ಅನುಭವಿಸುತ್ತಿದ್ದಾರಲ್ಲ ಅದಕ್ಕೆ ಮೊದಲು ಉತ್ತರ ಕೊಡಲಿ ಎಂದರು.

ಮುಸ್ಲಿಂರು ಈ ದೇಶದ ಬಾಡಿಗೆದಾರರು ಅಲ್ಲ. ಅಕ್ರಮಕೋರರು, ದರೋಡೆಕೋರರು. ಕನಿಷ್ಠ ಬಾಡಿಗೆದಾರರು ಆಗಿದ್ದರೆ ಸ್ವಲ್ಪ ಗೌರವಾದರೂ ಇರುತ್ತದೆ. ನಮ್ಮ ದೇಶಕ್ಕೆ ಲೂಟಿ ಮಾಡಲು ಬಂದವರು. ಇತಿಹಾಸನ್ನು ತೆರೆದು ನೋಡಲಿ. ಈಗ ಹಿಂದು ಸಮಾಜ ಜಾಗೃತವಾಗಿದೆ. ಹಿಂದುಸ್ತಾನದಲ್ಲಿ ಇನ್ನು ನಿಮ್ಮ ಆಕ್ರಮಣ ನಡೆಯಲ್ಲ ಎಂದರು.