ಚಿತ್ರದುರ್ಗ: ಬಿಜೆಪಿ ಜಾರಿಗೊಳಿಸಿದ್ದ ಬಡವರು, ರೈತರು, ಕೂಲಿ ಕಾರ್ಮಿಕರು, ಎಸ್ಸಿ, ಎಸ್ಟಿ ಪರ 18 ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ರದ್ದುಗೊಳಿಸಿ, ಜನ-ರೈತ ವಿರೋಧಿಯಾಗಿ ವರ್ತಿಸುತ್ತಿದೆ ಎಂದು ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಬಿಜೆಪಿ ಸೋಮವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ರೈತರು, ಕೂಲಿ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ನೀಡುತ್ತಿದ್ದ ವಿದ್ಯಾರ್ಥಿ ವೇತನವನ್ನು ನಿಲ್ಲಿಸಿದೆ. ಈ ವಿದ್ಯಾನಿಧಿ ಯೋಜನೆಗೆ ಬಜೆಟ್‌ನಲ್ಲಿ ಇಟ್ಟಿದ್ದ 438 ಕೋಟಿ ರೂ. ಗಳನ್ನು ಹಿಂಪಡೆದಿದೆ. ಗೋಶಾಲೆಗಳು, ಎಪಿಎಂಸಿ ಕಾಯ್ದೆ ತಿದ್ದುಪಡಿ ರದ್ದುಗೊಳಿಸಿರುವ ಕಾಂಗ್ರೆಸ್, ಅವೈಜ್ಞಾನಿಕವಾಗಿ ವಿದ್ಯುತ್ ದರ ಹೆಚ್ಚಿಸಿದೆ ಎಂದು ದೂರಿದರು.
ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ, ಗ್ಯಾರಂಟಿಗಳಿಂದ ಜನರನ್ನು ಮರುಳು ಮಾಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ತುಂಬಾ ದಿನ ಉಳಿಯದೆಂದು ಭವಿಷ್ಯ ನುಡಿದರು.
ಮದ್ಯದ ಮೇಲೆ ಶೇ.20 ತೆರಿಗೆ ವಿಧಿಸಿ ದುಡಿಯುವ ವರ್ಗಕ್ಕೆ ಅನ್ಯಾಯ ಮಾಡಿದೆ. ಎಸ್ಸಿ, ಎಸ್ಟಿ ಅಭಿವೃದ್ಧಿಗೆ ಮೀಸಲಿಟ್ಟಿದ್ದ 11 ಸಾವಿರ ಕೋಟಿ ರೂ. ಗಳನ್ನು ಬೇರೆ ಯೋಜನೆಗಳಿಗೆ ಬಳಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಶೋಷಿತರ ವಿರೋಧಿಯಾಗಿದ್ದಾರೆ ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ಎ.ಮುರಳಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್ ಯಾದವ್ ಮಾತನಾಡಿದರು. ನಗರದ ಶ್ರೀನೀಲಕಂಠೇಶ್ವರಸ್ವಾಮಿ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಎಡಿಸಿ ಬಿ.ಟಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಮುಖಂಡರಾದ ಸುರೇಶ್ ಸಿದ್ದಾಪುರ, ಜಯಪಾಲಯ್ಯ, ನರೇಂದ್ರ ಹೊನ್ನಾಳ್, ಮಲ್ಲಿಕಾರ್ಜುನ್, ಸಂಪತ್, ಚಂದ್ರಿಕಾ ಲೋಕನಾಥ್, ರೇಖಾ, ಬಸಮ್ಮ, ನಂದಿ ನಾಗರಾಜ್, ನಾಗರಾಜ್ ಬೇದ್ರೆ, ನವೀನ್ ಚಾಲುಕ್ಯ, ರೂಪಾ, ಸೂರೇನಹಳ್ಳಿ ವಿಜಯಣ್ಣ, ಸುರೇಶ್, ಕರಿಬಸಪ್ಪ, ಲೋಕೇಶ್, ರಂಗಸ್ವಾಮಿ, ಗುರುಮೂರ್ತಿ, ಕುಮಾರಸ್ವಾಮಿ, ನಾಗರಾಜ್, ಆನಂದ್, ಲಲಿತಾ, ಅರುಣ್ ಕುಮಾರಿ, ಭೋಜರಾಜ್, ನಗರಸಭೆ ಸದಸ್ಯರಾದ ಹರೀಶ್, ಸುರೇಶ್, ಶ್ರೀನಿವಾಸ್ ಇತರರಿದ್ದರು.
(ಸಿಟಿಡಿ 7 ಬಿಜೆಪಿ)
ಕಾಂಗ್ರೆಸ್ ಸರ್ಕಾರದ ವಿರುದ್ಧ ಚಿತ್ರದುರ್ಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಎಡಿಸಿ ಬಿ.ಟಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಶಾಸಕ ಡಾ.ಎಂ.ಚಂದ್ರಪ್ಪ, ಬಸಮ್ಮ, ರೇಖಾ, ರೂಪಾ, ಚಂದ್ರಿಕಾ ಲೋಕನಾಥ್, ನಂದಿನಾಗರಾಜ್, ವೆಂಕಟೇಶ್ ಯಾದವ್, ಎ.ಮುರಳಿ, ನರೇಂದ್ರ ಹೊನ್ನಾಳ್, ಜಯಪಾಲಯ್ಯ, ಮಲ್ಲಿಕಾರ್ಜುನ್, ನಾಗರಾಜ್ ಬೇದ್ರೆ, ನವೀನ್ ಚಾಲುಕ್ಯ ಇದ್ದರು.
==========
ಆತ್ಮಹತ್ಯೆ ತನಿಖೆಗೆ ವೀರಶೈವ ಮಹಾಸಭಾ ಆಗ್ರಹ
ಚಿತ್ರದುರ್ಗ: ಹೊಳಲ್ಕೆರೆ ತಾಲೂಕು ಉಪ್ಪರಿಗೇನಹಳ್ಳಿ ಗ್ರಾಪಂ ಎಸ್‌ಡಿಎ ಎಂ.ತಿಪ್ಪೇಸ್ವಾಮಿ ಆತ್ಮಹತ್ಯೆ ಪ್ರಕರಣದ ಸಮಗ್ರ ತನಿಖೆಗೆ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾ ಘಟಕ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ. ಡೆತ್‌ನೋಟ್‌ನಲ್ಲಿ ಹೆಸರಿರುವ ಶಾಸಕ ಎಂ.ಚಂದ್ರಪ್ಪ ಮತ್ತಿತರರ ಬೆದರಿಕೆ ವಿಚಾರ ಸಹಿತ ಈ ಪ್ರಕರಣವನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು. ಇಲ್ಲವಾದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ, ಪ್ರಧಾನ ಕಾರ‌್ಯದರ್ಶಿ ಜಿ.ಎನ್.ಮಹೇಶ್, ಚಿತ್ರದುರ್ಗ ತಾಲೂಕಾಧ್ಯಕ್ಷ ರುದ್ರೇಶ್ ಐಗಳ್, ಹೊಳಲ್ಕೆರೆ ಅಧ್ಯಕ್ಷ ಕೆ.ಬಿ.ಬಸವರಾಜಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
=====
ರಾಗಿ ಮಾರಾಟದ ಹಣಕ್ಕೆ ರೈತರ ಪಟ್ಟು
ತಾಲೂಕು ಕಚೇರಿ ಆವರಣದಲ್ಲಿ 10ಕ್ಕೆ ಮುಷ್ಕರ ಆರಂಭ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ ರೈತಸಂಘದ ಮುಖಂಡರು.
ವಿಜಯವಾಣಿ ಸುದ್ದಿಜಾಲ ಹೊಸದುರ್ಗ
ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಾಟ ಮಾಡಿರುವ ರೈತರಿಗೆ ಹಣ ಪಾವತಿಸುವಂತೆ ಆಗ್ರಹಿಸಿ ಆ.10ರಿಂದ ತಾಲೂಕು ಕಚೇರಿ ಆವರಣದಲ್ಲಿ ರೈತ ಸಂಘ ಅರ್ನಿಧಿಷ್ಟಾವದಿ ಮುಷ್ಕರ ಹಮ್ಮಿಕೊಂಡಿದೆ.
ಈ ಸಂಬಂಧ ಸೋಮವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ ಮುಖಂಡರು, ರಾಗಿ ಮಾರಾಟ ಮಾಡಿದ 600 ರೈತರಿಗೆ ಅಧಿಕೃತ ಗೈನ್ ಓಚರ್ ನೀಡುವ ಬದಲು ಖರೀದಿ ಕೇಂದ್ರದ ಅಧಿಕಾರಿಗಳು ಬಿಳಿ ಚೀಟಿ ನೀಡಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದರು.
ರೈತರು ರಾಗಿ ಹಣಕ್ಕಾಗಿ ಹೋರಾಟ ನಡೆಸಿದಾಗ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಉಪವಿಭಾಗಾಧಿಕಾರಿಗಳು ಒಂದು ವಾರದಲ್ಲಿ ಬಿಳಿ ಚೀಟಿ ಪಡೆದಿರುವ ರೈತರಿಗೆ ಹಣ ಪಾವತಿ ಮಾಡಲಾಗುವುದು ಎಂದು ತಿಳಿಸಿದ್ದರು. ಆದರೆ, ನಾಲ್ಕು ತಿಂಗಳು ಕಳೆದರೂ ಹಣ ಪಾವತಿಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಈ ಕೂಡಲೇ ರೈತರಿಗೆ ಹಣ ಬಿಡುಗಡೆ ಮಾಡದಿದ್ದರೆ ಗುರುವಾರ ತಾಲೂಕು ಕಚೇರಿ ಆವರಣದಲ್ಲಿ ಅರ್ನಿಧಿಷ್ಟಾವಧಿಯ ಮುಷ್ಕರ ನಡೆಸಲಾಗುವುದು. ಹಣ ಬಿಡುಗಡೆಯಾಗುವರಗೆ ಸ್ಥಳದಲ್ಲೇ ಮೊಕ್ಕಾಂ ಹೂಡಲಾಗುವುದು ಎಂದು ಎಚ್ಚರಿಸಿದರು.
ಧರಣಿ ನಡೆಸುವ ಕುರಿತು ಪೋಲಿಸ್ ಹಾಗೂ ತಾಲೂಕು ಆಡಳಿತಕ್ಕೆ ಲಿಖಿತವಾಗಿ ಮನವಿ ಸಲ್ಲಿಸಲಾಗಿದೆ. ಕೂಡಲೇ ಸರ್ಕಾರ ರೈತರ ನೆರವಿಗೆ ಬಾರದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ತಾಲೂಕು ಅಧ್ಯಕ್ಷ ಬೋರೇಶ್, ಕಾರ್ಯಾಧ್ಯಕ್ಷ ಕೊರಟಿಕೆರೆ ಮಹೇಶ್ವರಪ್ಪ, ನೀರಗುಂದ ರಘು, ಕರಿಸಿದ್ದಯ್ಯ, ರಾಜಪ್ಪ, ಸತೀಶ, ಬಸವರಾಜ, ಚಿತ್ತಯ್ಯ ಇತರರಿದ್ದರು.
ನಾಟ್‌ವ್ಯೆಸ್ (ಎಚ್‌ಎಸ್‌ಡಿ ರೈತ ಸಂಘ 07)
ಹೊಸದುರ್ಗದ ತಾಲೂಕು ಕಚೇರಿಯಲ್ಲಿ ಸೋಮವಾರ ರಾಜ್ಯ ರೈತ ಸಂಘದ ಕಾರ್ಯಕರ್ತರು ಆ.10ರಿಂದ ಅರ್ನಿಧಿಷ್ಟಾವಧಿ ಮುಷ್ಕರ ನಡೆಸುವುದಾಗಿ ತಹಸೀಲ್ದಾರ್ ಪಾಲಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು. ನೀರಗುಂದ ರಘು, ಕರಿಸಿದ್ದಯ್ಯ, ಕೊರಟಿಕೆರೆ ಮಹೇಶ್ವರಪ್ಪ, ರಾಜಪ್ಪ, ಸತೀಶ, ಬೋರೇಶ್ ಇದ್ದರು.
=====
‘ಅನ್ನ ಮುಟ್ಟೆವು-ಹೋರಾಟ ಬಿಡೆವು’
ಬೆಂಗಳೂರಲ್ಲಿ ಬರಿಹೊಟ್ಟೆ ಹೋರಾಟ 14, 15ಕ್ಕೆ ಭೂಮಿ-ವಸತಿ ಹಕ್ಕು ಪಡೆಯಲು ಚಳವಳಿ ಕುಮಾರ್ ಸಮತಳ ಹೇಳಿಕೆ
ವಿಜಯವಾಣಿ ಸುದ್ದಿಜಾಲ ಚಿತ್ರದುರ್ಗ
ಬದುಕಿನ ಸ್ವಾತಂತ್ರೃಕ್ಕಾಗಿ ಭೂಮಿ, ವಸತಿ, ನಿವೇಶನ ವಂಚಿತ ಬಡವರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ಎದುರು ಆ. 14, 15ರಂದು ಬರಿಹೊಟ್ಟೆ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಸಂಚಾಲಕ ಕುಮಾರ್ ಸಮತಳ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಶಕಗಳಿಂದ ತುಂಡು ಭೂಮಿಯ ಮೇಲಿನ ಹಕ್ಕಿಗಾಗಿ, ತಲೆಯ ಮೇಲೊಂದು ಸೂರಿನ ಕನಸಿಗಾಗಿ ಸರ್ಕಾರದ ಹಿಂದೆ ಅಲೆದಲೆದು ಹೈರಾಣಾಗಿರುವ ಲಕ್ಷಾಂತರ ಬಡಜನರಿಗೆ ಸಿಎಂ ಸಿದ್ದರಾಮಯ್ಯ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
40-50 ವರ್ಷದಿಂದ ಸಾಗುವಳಿ ಮಾಡುತ್ತಾ ಅರ್ಜಿ ಸಲ್ಲಿಸಿದವರಿಗೆ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಮಿತಿಯ ಕಾನೂನಿನಡಿ ಭೂ-ರಹಿತರನ್ನು ಒಳಪಡಿಸದೆ ಒಮ್ಮೆಗೆ ಪರಿಹಾರಾತ್ಮಕ ತೀರ್ಮಾನ ಕೈಗೊಳ್ಳಬೇಕು. 5 ಎಕರೆಗಿಂತ ಕಡಿಮೆ ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ, ಅರಣ್ಯ ಭೂಮಿ ವ್ಯಾಪ್ತಿಯಲ್ಲಿನ ಅರ್ಜಿದಾರರನ್ನು ಒತ್ತುವರಿ ಹೆಸರಲ್ಲಿ ತೆರವುಗೊಳಿಸಬಾರದು ಎಂದು ಒತ್ತಾಯಿಸಿದರು.
ಸಿಎಂ ನೇತೃತ್ವದಲ್ಲಿ ಕಂದಾಯ, ಅರಣ್ಯ, ವಸತಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರ, ಹೋರಾಟದ ಪ್ರತಿನಿಧಿಗಳ ಉನ್ನತಮಟ್ಟದ ಸಭೆ ಕರೆಯಬೇಕು. ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಮಂಜೂರಾತಿ ಪ್ರಕ್ರಿಯೆ ತ್ವರಿತವಾಗಿ ಕಾಲಮಿತಿಯೊಳಗೆ ಜಾರಿಗೊಳಿಸಲು ಹೈ ಪವರ್ ಕಮಿಟಿ ರಚಿಸಬೇಕು. ಈವರೆಗೂ ರೈತರ ಮೇಲೆ ದಾಖಲಾದ ಪ್ರಕರಣ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಭೂಮಿ, ವಸತಿ ನಮ್ಮ ಹಕ್ಕಾಗಿದ್ದು, ಭಿಕ್ಷೆಯಲ್ಲ. ನ್ಯಾಯ ಸಿಗುವವರೆಗೂ ‘ಅನ್ನ ಮುಟ್ಟೆವು-ಹೋರಾಟ ಬಿಡೆವು’ ಎಂದು ಸಂದೇಶಧ ಮೂಲಕ ಚಳವಳಿ ಹಮ್ಮಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.
ಮುಖಂಡರಾದ ಸತ್ಯಪ್ಪ ಮಲ್ಲಾಪುರ, ಬೋರಣ್ಣ, ಕಾಟೀಹಳ್ಳಿ ಹನುಮಂತಪ್ಪ, ಸುನಂದಮ್ಮ, ಪ್ರಜಾಶಕ್ತಿ ಬೋರಯ್ಯ ಇತರರಿದ್ದರು.
ಮಗ್‌ಶಾಟ್ 07)
ಕುಮಾರ್ ಸಮತಳ