ಕಲಬುರಗಿ: ರಾಜ್ಯ ಕಾಂಗ್ರೆಸ್ ಸÀರ್ಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸಿ ಮತ್ತು ಭದ್ರತಾ ಇತರ ವೈಫಲ್ಯಗಳನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ವಿರುದ್ಧ ಸಿಡಿದೇಳುವ ಮೂಲಕ ಕೇಸರಿಪಡೆ ಚುನಾವಣೆ ಬಳಿಕ ಮೈಕೊಡವಿಕೊಂಡು ಮೇಲೆದ್ದಿದ್ದು, ಸರ್ಕಾರದ ವಿರುದ್ಧ ಚಾಟಿ ಬೀಸಲು ಸಜ್ಜಾದಂತಿದೆ.
ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಜಮಾಯಿಸಿದ ಗ್ರಾಮಾಂತರ ಜಿಲ್ಲಾ, ಕಲಬುರಗಿ ದಕ್ಷಿಣ ಮತ್ತು ಉತ್ತರ ಮಂಡಲ ಕಾರ್ಯಕರ್ತರು ಹಾಗೂ ಮುಖಂಡರು ಸುಮಾರು ಹೊತ್ತು ಪ್ರತಿಭಟನೆ ನಡೆಸಿದರು. ಬಳಿಕ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಪ್ರತಿಭಟನೆಯನ್ನುz್ದÉÃಶಿಸಿ ಪಕ್ಷದ ರಾಜ್ಯ ವಕ್ತಾರ ರಾಜಕುಮಾರ ಪಾಟೀಲ್ ತೆಲ್ಕೂರ, ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರz್ದÉÃವಾಡಗಿ, ಶಾಸಕ ಬಸವರಾಜ ಮತ್ತಿಮಡು, ಕ್ರೆಡಲ್ ಮಾಜಿ ಅಧ್ಯಕ್ಷ ಚಂದು ಪಾಟೀಲ್ ಇತರರು ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬೆನ್ನಲ್ಲೇ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ತೀವ್ರ ಹದಗೆಟ್ಟಿದೆ. ೪೮ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ೧೨ ಕೊಲೆಯಾಗಿವೆ. ವಿದ್ಯುತ್ ದರ ಸೇರಿ ಜೀವನಾವಶ್ಯಕ ವಸ್ತುಗಳ ಬೆಲೆ ತೀವ್ರ ಹೆಚ್ಚಾಗಿದ್ದು, ಜನರು ಜೀವನ ಮಾಡುವುದೇ ದುಸ್ತರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಬಜೆಟ್ ಅಲ್ಪಸಂಖ್ಯಾತರ ಪರ ಮಾತ್ರವಲ್ಲದೆ ಹಿಂದು, ರೈತರು, ನೀರಾವರಿ ಮತ್ತು ಶಿP್ಷÀಣ ವಿರೋಧಿಯಾಗಿದೆ. ಕೇಂದ್ರ ಸರ್ಕಾರವನ್ನು ತೆಗಳುವ ಬಜೆಟ್ ಇದಾಗಿದೆ. ಗ್ಯಾರಂಟಿ ಯೋಜನೆಗಳ ಸಮರ್ಪಕ ಜಾರಿಯಲ್ಲಿ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದೆ ಎಂದು ಕಿಡಿಕಾರಿದರು.
ವಿಧಾನ ಮಂಡಲ ಕಲಾಪವನ್ನು ಸಭಾಧ್ಯಕ್ಷರು ಸರ್ವಾಧಿಕಾರಿಯಂತೆ ನಡೆಸಿz್ದÁರೆ. ಪ್ರತಿಪP್ಷÀ ಶಾಸಕರನ್ನು ಹತ್ತಿಕ್ಕಿರುವುದು ಸರಿಯಲ್ಲ. ಸಭಾಧ್ಯP್ಷÀರು ಬಿಜೆಪಿಯ ೧೦ ಶಾಸಕರನ್ನು ಅಮಾನತು ಮಾಡಿದ್ದನ್ನು ಖಂಡಿಸಿದರು.
ಮಹಾನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್, ಮುಖಂಡರಾದ ಮಣಿಕಂಠ ರಾಠೋಡ್, ಅರುಣಕುಮಾರ ಪಾಟೀಲ್ ಕೊಡಲಹಂಗರಗಾ, ದಯಾಘನ್ ಧಾರವಾಡಕರ್, ಶರಣಪ್ಪ ತಳವಾರ, ಅವ್ವಣ್ಣ ಮ್ಯಾಕೇರಿ, ಕಲ್ಯಾಣಪ್ಪ ಪಾಟೀಲ್ ಮಳಖೇಡ, ಶಿವಕಾಂತ ಮಹಾಜನ್, ಶಶಿಕಲಾ ಟೆಂಗಳಿ, ವಿದ್ಯಾಸಾಗರ ಕುಲಕರ್ಣಿ, ಪ್ರಹ್ಲಾದಭಟ್ಟ ಪೂಜಾರಿ, ರೇವಣಸಿದ್ದಪ್ಪ ಸಂಕಾಲಿ, ಮಲ್ಲಿಕಾರ್ಜುನ ಉದನೂರ, ಕಲ್ಯಾಣಿ ವಕೀಲ ವಾಗ್ಧರಿ, ಶರಣು ಬೆಳಮಗಿ, ಸಂತೋಷ ಹಾದಿಮನಿ, ಶಿವಾ ಅಷ್ಟಗಿ, ರಾಜುಗೌಡ ನಾಗನಳ್ಳಿ, ಗೌರಿ ಚಿಚಕೋಟಿ, ಮಲ್ಲಿನಾಥ ಪಾಟೀಲ್ ಕಾಳಗಿ, ಈರಣ್ಣ ಹಡಪದ, ಅಂಬಾರಾಯ ಅಷ್ಟಗಿ, ವಿನೋದಕುಮಾರ ಜನೇವರಿ, ಅನಿಲ್ ಜಾಧವ್ ಇತರರು ಪಾಲ್ಗೊಂಡಿದ್ದರು.