???????????? 
ಜಿಲ್ಲೆ

ಕಾಂಗ್ರೆಸ್-ರೈತಸಂಘ ಅಭ್ಯರ್ಥಿಗಳಿಗೆ ಬೆಂಬಲ ನೀಡಿ

ಪಾಂಡವಪುರ: ಮಂಡ್ಯ ಜಿಲ್ಲಾ ಸಹಕಾರ ಬ್ಯಾಂಕ್(ಡಿಸಿಸಿ)ನ ಚುನಾವಣೆಯಲ್ಲಿ ಪಾಂಡವಪುರ ಉಪವಿಭಾಗದ ಹಾಲು ಉತ್ಪಾದಕರ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್-ರೈತಸಂಘದ ಬೆಂಬಲಿತ ಅಭ್ಯರ್ಥಿ ವಿಜಯೇಂದ್ರಮೂರ್ತಿ ಹಾಗೂ ಮಂಡ್ಯ ಉಪವಿಭಾಗದಿಂದ ಸ್ಪರ್ಧಿಸಿರುವ ತೈಲೂರು ಚಲುವರಾಜು ಅವರಿಗೆ ಕ್ಷೇತ್ರದ ಮತದಾರರು ಹೆಚ್ಚಿನ ಮತಕೊಟ್ಟು ಗೆಲ್ಲಿಸಬೇಕೆಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಮನವಿ ಮಾಡಿದರು.

ಮೇಲುಕೋಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್‌ನ ಮಾಜಿ ನಿರ್ದೇಶಕ ವಿಜಯೇಂದ್ರಮೂರ್ತಿ ಅವರು ಪಾಂಡವಪುರ ಉಪ ವಿಭಾಗದ ನಾಲ್ಕು ತಾಲೂಕುಗಳ ಹಾಲು ಉತ್ಪಾದಕರ ಕ್ಷೇತ್ರದಿಂದ ಕಾಂಗ್ರೆಸ್-ರೈತ ಸಂಘದ ಒಮ್ಮತದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದೇವೆ. ಮಂಡ್ಯ ಉಪವಿಭಾಗದ ಹಾಲು ಉತ್ಪಾದಕರ ಕ್ಷೇತ್ರದಿಂದ ತೈಲೂರು ಚಲುವರಾಜು ಹಾಗೂ ಪ್ರಾಥಮಿಕ ಕೃಷಿಪತ್ತಿನ ಮಂಡ್ಯ ಕ್ಷೇತ್ರದಿಂದ ಸಾತನೂರು ಸತೀಶ್ ಸ್ಪರ್ಧಿಸಿದ್ದಾರೆ. ಮೇಲುಕೋಟೆ ವಿಧಾನಸಭಾ ಕ್ಷೇತ್ರ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕುಗಳ ಮತದಾರರು ನಮ್ಮ ಅಭ್ಯರ್ಥಿಗಳಿಗೆ ಕ್ಷೇತ್ರದ ಮತದಾರರು ಹೆಚ್ಚಿನ ಮತಕೊಟ್ಟು ಆಯ್ಕೆ ಮಾಡಲು ಸಹಕರಿಸಬೇಕು. ಸಹಕಾರ ಕ್ಷೇತ್ರಗಳು ಅಭಿವೃದ್ಧಿಯಾದರೆ ಮಾತ್ರ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ತ್ಯಾಗರಾಜು ಮಾತನಾಡಿ, ಡಿಸಿಸಿ ಬ್ಯಾಂಕ್ ಚುನಾವಣೆಗಳಿಗೆ ಅಭ್ಯರ್ಥಿಗಳನ್ನು ಈಗಾಗಲೇ ಸಚಿವ ಎನ್.ಚಲುವರಾಯಸ್ವಾಮಿ ಘೋಷಿಸಿದ್ದಾರೆ. ನಮ್ಮ ಅಭ್ಯರ್ಥಿಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಅಭ್ಯರ್ಥಿಗಳಾದ ವಿಜಯೇಂದ್ರಮೂರ್ತಿ, ತೈಲೂರು ಚಲುವರಾಜು, ಸಾತನೂರು ಸತೀಶ್, ಮೇಲುಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮೇಶ್, ಮುಖಂಡರಾದ ಕನಗೋನಹಳ್ಳಿ ಪರಮೇಶ್, ಚಂದ್ರಶೇಖರ್ ಹಾಜರಿದ್ದರು.