ಜಿಲ್ಲೆ

ಕಾಂಗ್ರೆಸ್​, ಬಿಜೆಪಿ ಒಳಜಗಳದಲ್ಲಿ ಜೆಡಿಎಸ್​ಗೆ ಅಧಿಕಾರ

Kolar
ಕೋಲಾರ ತಾಲೂಕಿನ ರಾಮಾಪುರದಲ್ಲಿ ಆಯೋಜಿಸಿದ್ದ ಜೆಡಿಎಸ್​ ಸಂಟನಾ ಸಮಾವೇಶವನ್ನು ಜೆಡಿಎಸ್​ ರಾಜ್ಯಾಧ್ಯ ಸಿ.ಎಂ.ಇಬ್ರಾಹಿಂ ಉದ್ಘಾಟಿಸಿದರು. ಜೆಡಿಎಸ್​ ರಾಜ್ಯ ಉಪಾಧ್ಯ ಜಮೀರ್​ ಅಹಮದ್​, ಶಶಿ ಇದ್ದರು. ಜೆಡಿಎಸ್​ ಹಿಂದುಳಿದ ರಾಜ ಪ್ರಧಾನ ಕಾರ್ಯದರ್ಶಿ ಪಾಪಣ್ಣ, ಜಿಲ್ಲಾ ಕಾರ್ಯಾಧ್ಯ ಬಣಕನಹಳ್ಳಿ ನಟರಾಜ್​, ಜಿಪಂ ಮಾಜಿ ಸದಸ್ಯ ಬಾಲಾಜಿ ಚನ್ನಯ್ಯ ಇದ್ದರು.

ಕ್ಯಾಲನೂರು
ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್​ ಪಗಳು ಜನರಿಗೆ ಬೇಡವಾಗಿವೆ. ಬಿಜೆಪಿ ಶೇ.40 ಕಮಿಷನ್​ಗೆ ಒಳಗಾಗಿ ವಿಶ್ವಾಸ ಕಳೆದುಕೊಂಡಿದ್ದರೆ, ಕಾಂಗ್ರೆಸ್​ನಲ್ಲಿ ಅಧಿಕಾರದ ಗದ್ದುಗೆಗೆ ಕಚ್ಚಾಟ ಶುರುವಾಗಿದೆ. ಇವರಿಬ್ಬರ ಜಗಳದಲ್ಲಿ ಜೆಡಿಎಸ್​ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಜೆಡಿಎಸ್​ ರಾಜ್ಯಾಧ್ಯ ಸಿ.ಎಂ.ಇಬ್ರಾಹಿಂ ವಿಶ್ವಾಸ ವ್ಯಕ್ತಪಡಿಸಿದರು.
ಕೋಲಾರ ತಾಲೂಕಿನ ಅಮ್ಮನಲ್ಲೂರು ಗ್ರಾಪಂ ವ್ಯಾಪ್ತಿಯ ರಾಮಾಪುರದಲ್ಲಿ ಭಾನುವಾರ ಆಯೋಜಿಸಿದ್ದ ಜೆಡಿಎಸ್​ ಸಂಟನಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯಕ್ಕೆ ಪದೇಪದೇ ಮೋದಿ, ಅಮಿತ್​ ಷಾ ಬರುತ್ತಿದ್ದಾರೆಂದರೆ, ರಾಜ್ಯಾದ್ಯಂತ ಮಾಜಿ ಸಿಎಂ ಸಿದ್ದರಾಮಯ್ಯ ಹೆಚ್ಚು ಓಡಾಡುತ್ತಿದ್ದಾರೆಂದರೆ ಜೆಡಿಎಸ್​ ಪಕ್ಕೆ ಹೆಚ್ಚಿನ ಶಕ್ತಿ ಬಂದಿರುವುದೇ ಕಾರಣ ಎಂದರು.
ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಹಾಗೂ ಕಳೆದ ಚುನಾವಣೆಯಲ್ಲಿ ಬಾದಾಮಿಗೆ ಕರೆದುಕೊಂಡು ಹೋಗಿ ಸಿದ್ದರಾಮಯ್ಯರಿಗೆ ರಾಜಕೀಯ ಜೀವನ ನೀಡಿದ್ದು ನಾನು. ನಾನಲ್ಲ ಎಂದು
ಧೈರ್ಯವಿದ್ದರೆ ಬಂದು ಹೇಳಲಿ. ಕಳೆದ ಚುನಾವಣೆಯಲ್ಲಿ ಸೋಲುವಿರಾ ಎಂದು ಮೊದಲೇ ಹೇಳಿದ್ದೆ. ಜತೆಗೆ ಮೈಸೂರಿನಿಂದ ಬೆಂಗಳೂರುವರೆಗೆ ಒಂದು ಸ್ಥಾನವೂ ಬರಲ್ಲ ಎಂದಿದ್ದೆ.
ಸಾಬರ ಆಡಿದ ಮಾತು ತಪ್ಪಲ್ಲ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ ಸಿದ್ದರಾಮಯ್ಯ ಎಂದು ಪ್ರಶ್ನಿಸಿದರು.
ಪ್ರಧಾನಿ ಮೋದಿ ಅಚ್ಛೇ ದಿನ್​ ಬರುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ, ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಇದರಿಂದ ಜನಸಾಮಾನ್ಯರ ಬದುಕು ದುರ್ಬರವಾಗಿದೆ.ಕೋಟಿ ಕೋಟಿ ಹಣದ ಕಂತೆ ಒಬ್ಬ ಎಮ್ಮೆಲ್ಲೆ ಮಗನ ಸಿಕ್ಕರೆ ಇನ್ನು ಉಳಿದವರ ಹತ್ತಿರ ಎಷ್ಟು ಇರಬಹುದು ಎಂದು ಇಬ್ರಾಹಿಂ ಕುಟುಕಿದರು.


ಶಾಸಕರು ಕಾರ್ಯಕರ್ತರ ನಂಬಿಕೆ ಉಳಿಸಿಕೊಳ್ಳಲಿಲ್ಲ: ಎಂಎಲ್ಸಿ ಇಂಚರ ಗೋವಿಂದರಾಜು ಮಾತನಾಡಿ, ಜೆಡಿಎಸ್​ ಕಾರ್ಯಕರ್ತರು ಕಷ್ಟಪಟ್ಟು ಕ್ಷೇತ್ರದಲ್ಲಿ​ ಶಾಸಕರನ್ನು ಆಯ್ಕೆ ಮಾಡಿದ್ದೆವು. ಆದರೆ ಕಾರ್ಯಕರ್ತರ ನಂಬಿಕೆಯನ್ನು ಅ ಶಾಸಕ ಉಳಿಸಿಕೊಳ್ಳಲಿಲ್ಲ. ರಾಜ್ಯದಲ್ಲಿ ಕುಮಾರಸ್ವಾಮಿ ಅವರ ಪಂಚರತ್ನ ಯೋಜನೆಗಳ ಜತೆಗೆ ಕೋವಿಡ್​ ಸಂದರ್ಭದಲ್ಲಿ ಸಿಎಂಆರ್​ ಶ್ರೀನಾಥ್​ ಅವರೊಂದಿಗೆ ಮನೆ ಮನೆಗೆ ಭೇಟಿ ನೀಡಿ ಸೇವೆ ಮಾಡಿದ್ದೇವೆ. ಎಚ್​ಡಿಕೆ ಸಿಎಂ ಆಗಲು ಹಾಗೂ ಜಿಲ್ಲೆಯ ಅಭಿವೃದ್ಧಿಗಾಗಿ ಜೆಡಿಎಸ್​ ಬೆಂಬಲಿಸುವಂತೆ ಮನವಿ ಮಾಡಿದರು.
ಬೈರೇಗೌಡರ ಸಿದ್ಧಾಂತ ಮರುಕಳಿಸಬೇಕಿದೆ: ಜೆಡಿಎಸ್​ ಅಭ್ಯರ್ಥಿ ಸಿಎಂಆರ್​ ಶ್ರೀನಾಥ್​ ಮಾತನಾಡಿ, ದಿ.ಬೈರೇಗೌಡರ ಆಡಳಿತದ ಕ್ಷೇತ್ರದಲ್ಲಿ ನಾವೇ ಮಾಡಿದ ಸ್ವಯಂ ಅಪರಾಧದಿಂದ ರಾಜಕಾರಣ ಕಲುಷಿತವಾಗಿದ್ದು, ಬೈರೇಗೌಡರ ಸಿದ್ಧಾಂತ ಗತವೈಭವವನ್ನು ಮತ್ತೆ ಮರುಕಳಿಸಲು ಕ್ಷೇತ್ರದ ಜನರು ನೆಮ್ಮದಿ ಹಾಗೂ ಗೌರವಯುತವಾಗಿ ಬದುಕಲು ಜೆಡಿಎಸ್​ ಬೆಂಬಲಿಸಬೇಕೆಂದು ಕೋರಿದರು.


ಎಚ್​ಡಿಕೆ ಸಿಎಂ ಆಗದಿದ್ದರೆ 25 ಕೋಟಿ ಕೊಡುವೆ: ಕೋಲಾರ ಶಾಸಕ ಕೆ.ಶ್ರೀನಿವಾಸಗೌಡರಿಗೆ 1994ರಲ್ಲಿ ಟಿಕೆಟ್​ ನೀಡಿ ಶಾಸಕರನ್ನಾಗಿ ಮಾಡಿದ್ದು ದೇವೇಗೌಡರು. ಅದನ್ನೆಲ್ಲ ಮರೆತು ಕಾಂಗ್ರೆಸ್​ ಜತೆ ಸೇರಿ ನೀನು ಹಾಳಾಗುವುದಲ್ಲದೆ ನಿನ್ನ ಮಗನ ಭವಿಷ್ಯ ಹಾಳು ಮಾಡುತ್ತಿದ್ದೀಯ. ಈ ಬಾರಿ ಕುಮಾರಸ್ವಾಮಿ ಸಿಎಂ ಆಗುವುದು ಶತಃಸಿದ್ಧ. ಒಂದು ವೇಳೆ ಸಿಎಂ ಆಗದಿದ್ದರೆ ನಾನೇ ನಿನಗೆ 25 ಕೋಟಿ ರೂಪಾಯಿ ಕೊಡುತ್ತೇನೆ. ಆದರೆ ಬಿಜೆಪಿಯವರ ಬಳಿ ನೀನು ಪಡೆದಿರುವ 5 ಕೋಟಿ ಹಣವನ್ನು ನನಗೆ ತಂದು ಕೊಡಬೇಕು ಎಂದು ಸಿಎಂ ಇಬ್ರಾಹಿಂ ಷರತ್ತು ಹಾಕಿದರು.


ರೈತರಿಗೆ ಅನುಕೂಲ ಯೋಜನೆ ಜಾರಿ: ಜೆಡಿಎಸ್​ ಅಧಿಕಾರಕ್ಕೆ ಬಂದರೆ ಪ್ರತಿ ಗ್ರಾಪಂ ವ್ಯಾಪ್ತಿಗೆ 30 ಬೆಡ್​ಆಸ್ಪತ್ರೆ ಹಾಗೂ ಮೂರು ವೈದ್ಯರ ಸೇವೆ ಲಭ್ಯವಾಗಲಿದೆ. ಮಹದಾಯಿ ಜೋಡಣೆ ಸೇರಿ ರಾಜ್ಯದ ಎಲ್ಲ ನದಿಗಳ ನೀರನ್ನು ಸಮುದ್ರಕ್ಕೆ ಸೇರದಂತೆ ಶಾಶ್ವತ ನೀರಾವರಿ ಸೌಲಭ್ಯಗಳನ್ನು ಕಲ್ಪಿಸಿ ರೆತರಿಗೆ ಅನುಕೂಲ ಮಾಡಿಕೊಡಲಾಗುವುದು. ಪ್ರತಿ ಪಂಚಾಯತಿ ಮಟ್ಟದಲ್ಲೊಂದು ಅಂತಾರಾಷ್ಟ್ರೀಯ ಶಾಲೆ ಸ್ಥಾಪಿಸಿ 1 ರಿಂದ 12ನೇ ತರಗತಿವರೆಗೆ ಸಂಪೂರ್ಣ ಉಚಿತ ಶಿಣ ಒದಗಿಸುವ ಸಂಕಲ್ಪ ಮಾಡಲಾಗಿದೆ ಎಂದು ಸಿಎಂ ಇಬ್ರಾಹಿಂ ಹೇಳಿದರು.


9ಕ್ಕೆ ಕೋಲಾರಕ್ಕೆ ನಿಖಿಲ್​ : ಮಾ.9ರಂದು ನಿಖಿಲ್​ ಕುಮಾರಸ್ವಾಮಿ ಕೋಲಾರಕ್ಕೆ ಆಗಮಿಸಲಿದ್ದು ಅವರ ಸಮ್ಮುಖದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಜೆಡಿಎಸ್​ಗೆ ಸೇರ್ಪಡೆಯಾಗಲಿದ್ದಾರೆ. ಮಾಜಿ ಜಿ.ಪಂ.ಉಪಾಧ್ಯಕ್ಷ, ಹಾಲಿ ಕೆಎಂಎಫ್​ ನಿರ್ದೇಶಕ ಡಿ.ವಿ.ಹರೀಶ್​ ನೇತೃತ್ವದಲ್ಲಿ ಹುತ್ತೂರು ಹೋಬಳಿಯ ನೂರಾರು ಕಾರ್ಯಕರ್ತರು ಜೆಡಿಎಸ್​ಗೆ ಸೇರ್ಪಡೆಯಾಗಲಿದ್ದಾರೆ ಎಂದು ಮಲ್ಲೇಶ್​ ಬಾಬು ತಿಳಿಸಿದರು.


ರಾಜ್ಯ ಜೆಡಿಎಸ್​ ಹಿಂದುಳಿದ ವರ್ಗಗಳ ಟಕಕ್ಕೆ ರಾಜ್ಯ ಕಾರ್ಯದರ್ಶಿಯಾಗಿ ಜೆಟ್​ ಅಶೋಕ್​, ಜಿಲ್ಲಾಧ್ಯರಾಗಿ ಶಬರೀಶ್​, ಕಾರ್ಯಾಧ್ಯರಾಗಿ ರೋಟರಿ ಸುಧಾಕರ್​, ಜಿಲ್ಲಾ
ಕಾರ್ಯದರ್ಶಿಯಾಗಿ ಬಲಿಜ ಸಂದ ಅಶೋಕ್​, ರಾಜ್ಯ ಎಸ್ಸಿ ಮೋರ್ಚಾ ಕಾರ್ಯದರ್ಶಿಯಾಗಿ ತಿರುಮಲೇಶ್​ ಆಯ್ಕೆಯಾಗಿದ್ದು, ಆದೇಶ ಪತ್ರಗಳನ್ನು ವಿತರಿಸಲಾಯಿತು.
ನಗರಸಭೆ ಸದಸ್ಯ ಮಂಜುನಾಥ್​, ಮುಖಂಡರಾದ ಸಿಎಂಆರ್​ ಹರೀಶ್​, ವಕ್ಕಲೇರಿ ರಾಮು, ಬಾಬು ಮೌನಿ, ಖಾಜಿಕಲ್ಲಹಳ್ಳಿ ಹರೀಶ್​, ಡಾ.ರಮೇಶ್​, ಡಾಬಾ ಶಂಕರ್​, ಲೋಕೇಶ್​ ಮರಿಯಪ್ಪ, ಗ್ರಾಪಂ ಅಧ್ಯ ವೆಂಕಟೇಶ್​, ಮದನಹಳ್ಳಿ ಸೇವಕ ಸೇವಕ ಜಯರಾಮ್​, ಕ್ಯಾಲನೂರು ಸುರೇಶ್​, ಮುಕ್ಕಡ ವೆಂಕಟೇಶ್​, ಕುರುಬರ ಸಂದ ಅಧ್ಯಕ್ಷ ಅಶೋಕ್​ ಇದ್ದರು.