ಬಾಗಲಕೋಟೆ: ಕಾಂಗ್ರೆಸ್ ಒಂದು ಸುಡುವ ಮನೆ, ಎಚ್ಚರವಿರಬೇಕು ಅಂತ ಡಾ.ಬಾಬಾಸಾಹೇಬ ಅಂಬೇಡ್ಕರ ಹೇಳಿದ್ದರು. ಅದನ್ನು ಅರ್ಥಮಾಡಿಕೊಳ್ಳಬೇಕಿದೆ ಅವರ ವಿಚಾರಧಾರೆಗಳ ಕುರಿತಂತೆ ಇಂದಿನಿ0ದ ಏ.೨೫ ವರೆಗೆ ದೇಶವ್ಯಾಪಿ ಡಾ.ಬಾಬಾಸಾಹೇಬ ಅಂಬೇಡ್ಕರ ವಿಚಾರ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ ಹೇಳಿದರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಸೋಮವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ ಅವರ ೧೩೪ನೇ ಜಯಂತಿ ಆಚರಣೆ ಹಾಗೂ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂಬೇಡ್ಕರ ಅವರ ಸಂವಿಧಾನದ ಮೂಲಕ ಭಾರತ ಆಧುನಿಕತೆ ಪಡೆದುಕೊಂಡಿದೆ. ಅಭಿವೃದ್ಧಿ ಪಥದಲ್ಲಿ ದೇಶ ಸಾಗುತ್ತಿದೆ. ಇದಕ್ಕೆ ಕಾರಣ ಅಂಬೇಡ್ಕರ ಅವರ ಸಂವಿಧಾನ. ಸಂವಿಧಾನ ಕೇವಲ ವಕೀಲರ ದಾಖಲೆಗಳಲ್ಲ. ಇದು ಜೀವನದ ಮಾಧ್ಯಮ ಮತ್ತು ಆತ್ಮಯುಗದ ಆತ್ಮವಾಗಿದೆ ಎಂದರು.
ಭಾರತೀಯ ಜನತಾ ಪಾರ್ಟಿ ಡಾ.ಬಿ.ಆರ್.ಅಂಬೇಡ್ಕರವರ ವಿಚಾರ-ಹೋರಾಟಕ್ಕೆ ಮನ್ನನೆ ಕೊಟ್ಟು ಏ.೨೫ ರ ವರೆಗೆ ಯಾತ್ರೆ ಕೈಗೊಂಡಿದೆ. ಅಂಬೇಡ್ಕರ ಅವರು ಅನುಭವಿಸಿದ ಕಷ್ಟ, ಆದಂತಹ ಅವಮಾನ, ಸನ್ಮಾನ ಇವೆಲ್ಲವನ್ನು ದೇಶಾದ್ಯಂತ ಬಿಜೆಪಿ ತಿಳಿಸಲಿದೆ. ಹೀಗಾಗಿ ಬಾಗಲಕೋಟೆಯಲ್ಲಿ ದೀಪೋತ್ಸವ ಕಾರ್ಯಕ್ರಮ ಜರುಗಿದೆ ಎಂದು ಹೇಳಿದರು.
ಮಾಜಿ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ ಸಾಮಾಜಿಕ, ಆರ್ಥಿಕ ಮತ್ತು ಕಾನೂನಿಗೆ ಸಂಬAಽಸಿದ ದೃಷ್ಠಿಕೋನವು ಎಲ್ಲರನ್ನು ಒಳಗೊಂಡ ಸಮಾಜ ನಿರ್ಮಾಣ ಮತ್ತು ರಾಷ್ಟçದ ಉತ್ತಮ ಆಡಳಿತದ ದಿಕ್ಕಿನೆಡೆಗೆ ನಮಗೆ ಯಾವಾಗಲೂ ಮಾರ್ಗದರ್ಶನ ನೀಡುತ್ತದೆ. ೩೭೦ ನೇ ವಿಽ ನಿರ್ಮೂಲನೆನೆಯಾದ ಬಳಿಕ ಒಂದು ರಾಷ್ಟç ಒಂದು ಸಂವಿಧಾನವನ್ನು ಜಾರಿಗೊಳಿಸಲಾಗಿದೆ. ೨೦೧೫ ರಿಂದ ೨೬ ನವೆಂಬರ್ ಸಂವಿಧಾನ ದಿನವಾಗಿ ಆಚರಿಸಲಾಗುತ್ತಿದೆ. ಹಳೆಯ ಸಂಸತ್ ಕಟ್ಟಡಕ್ಕೆ ಸಂವಿಧಾನ ಸದನ ಎಂದು ಹೆಸರಿಸಲಾಗಿದೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿ, ಡಾ.ಬಾಬಾಸಾಹೇಬರ ಬದುಕು ಬರಹಗಳ ಅಧ್ಯಯನ ಮಾಡಿ ಅವರ ಆದರ್ಶಗಳನ್ನು ತಮ್ಮ ಜೀವನಲ್ಲಿ ಕಾರ್ಯಕರ್ತರು ಅಳವಡಿಸಿಕೋಳ್ಳಬೇಕು ಎಂದರು. ಜಗದೀಶ ಹಿರೇಮನಿ ಮಾತನಾಡಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಸಿ.ಟಿ.ಉಪಾಧ್ಯ, ರಾಜು ರೇವಣಕರ, ಡಾ.ಎಂ.ಎಸ್.ದಡ್ಡೆನ್ನವರ, ಹೂವಪ್ಪ ರಾಠೋಡ, ನಗರಸಭೆ ಅಧ್ಯಕ್ಷೆ ಸವಿತಾ ಲಂಕೆನ್ನವರ, ಉಪಾಧ್ಯಕ್ಷೆ ಶೋಭಾ ರಾವ, ಸಭಾಪತಿ ಯಲ್ಲಪ್ಪ ನಾರಾಯಣಿ, ಶಿವು ಸುರುಪುರ ಸೇರಿದಂತೆ ಅನೇಕರು ಇದ್ದರು. ಶಿವಾನಂದ ಟವಳಿ ಸ್ವಾಗತಿಸಿದರು, ಮುತ್ತಣ್ಣ ಬೇಣ್ಣೂರ ವಂದಿಸಿದರು.