ಜಿಲ್ಲೆ

ಕಾಂಗ್ರೆಸ್ ‌ಪಕ್ಷ ಅವಮಾನ‌ ಮಾಡಿದೆ

ಬಳ್ಳಾರಿ ; ಡಾ. ಬಿ. ಆರ್.‌ ಅಂಬೇಡ್ಕರ್ ಅವರನ್ನು ದೇಶದಲ್ಲಿಯೇ ಅತ್ಯಂತವಾಗಿ ಅವಮಾನ‌ ಮಾಡಿದ ಪಕ್ಷ ಎಂದರೆ ಕಾಂಗ್ರೆಸ್ ಎಂದು ಮಾಜಿ ಸಚಿವ ಸುರೇಶ್ ಕುಮಾರ ಹೇಳಿದರು.
ಇಲ್ಲಿನ ಬಾಲಭಾರತಿ ಶಾಲೆಯ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾಜಿಕ ನ್ಯಾಯಕ್ಕಾಗಿ ನಾಗರಿಕರು " ತುರ್ತು ಪರಿಸ್ಥಿತಿ ಸಂವಿಧಾನ ಆಶಯಕ್ಕೆ ಅಪಚಾರ " ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅವರು ಚುನಾವಣೆಯಲ್ಲಿ ಸ್ಪರ್ಧಿಸಿದ ವೇಳೆ ಗೆಲ್ಲಲು ಬಿಡಲಿಲ್ಲ. ಮರಣ ಹೊಂದಿದ ನಂತರ ದೆಹಲಿಯಲ್ಲಿ ಶವಸಂಸ್ಕಾರ ಮಾಡಲು‌‌ ಅನುಮತಿ ನೀಡದೆ ಅತ್ಯಂತ ಹೀನಾಯವಾಗಿ ಕಾಂಗ್ರೆಸ್ ಪಕ್ಷ ನಡೆಸಿಕೊಂಡಿತು. ಪ್ರಧಾನಿ ಇಂದಿರಾ‌ ಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿದ ವೇಳೆ ದೇಶದ ಜನರಿಗೆ ತಿಳಿಯಬಾರೆದೆಂದು ದೇಶಾದ್ಯಂತ ವಿದ್ಯುತ್ ‌ಕಡಿತಗೊಳಿಸಿ ದೇಶವನ್ನೇ ಕತ್ತಲಿಗೆ ತಳ್ಳಿದವರು. ಪತ್ರಕರ್ತರು , ರಾಜಕೀಯ ‌ನಾಯಕರು ಹಾಗೂ ಭಾರತ ಮಾತಾ ಕೀ ಜೈ ಅಂದವರನ್ನು ಜೈಲಿಗೆ‌ ಕಳುಹಿಸಿ ಸಂವಿಧಾನದ ಹಕ್ಕನ್ನು ಕಸಿದುಕೊಂಡಿದ್ದರು. ಪ್ರಧಾನಮಂತ್ರಿ ‌ಇಂದಿರಾ ಗಾಂಧಿ ಅವರು ತುರ್ತು ‌ಪರಿಸ್ಥಿತಿ ವೇಳೆ ಕಾಮನ್‌ವೆಲ್ತ್ ನಿಯೋಗ ದೆಹಲಿಗೆ ಭೇಟಿ‌ ನೀಡಿದ ಸಂದರ್ಭದಲ್ಲಿ ದೇಶದ ‌ಜನರು ತುರ್ತು ಪರಿಸ್ಥಿತಿಯನ್ನು ಸ್ವಾಗತಿಸಿದ್ದರು ಎಂಬ ಹೇಳಿಕೆ‌ ನೀಡಿದ್ದರು ಎಂದರು. ದೇಶದ ಯಾವ ಪ್ರಜೆ ಜಾಗೃಕನಾಗಿ ಇರುವುದಿಲ್ಲವೋ, ಆ ದೇಶದ ಸಂವಿಧಾನಕ್ಕೆ ಭದ್ರತೆ ಇರುವುದಿಲ್ಲ. ಕೆಲವೊಂದು ರಾಜ್ಯಗಳಲ್ಲಿ ನಡೆದ ಸಣ್ಣ ಹೋರಾಟಗಳು ಆಗಿನ ನಾಯಕರ ಖುರ್ಚಿಗಳೆ ಆಲಗಾಡಿವೆ ಎಂದರು.
ಅಂಕಣಕಾರ ಡಾ. ಸುಧಾಕರ ‌ಹೊಸಳ್ಳಿ ತುರ್ತು ಪರಿಸ್ಥಿತಿ ಹಾಗೂ ಸಂವಿಧಾನದ ಬಗ್ಗೆ ವಿಸ್ತಾರವಾಗಿ ಹೇಳಿದರು.