ಜಿಲ್ಲೆ

ಕಾಂಗ್ರೆಸ್ ನಿಂದ ಸರ್ವ ಜನಾಂಗದ ಅಭಿವೃದ್ಧಿ

ಬೀದರ್: ಸರ್ವ ಜನಾಂಗದ ಅಭಿವೃದ್ಧಿ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ. ಬೀದರ್ ದಕ್ಷಿಣ ವಿಧಾನಸಭೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಜನತೆ  ಆಶೀರ್ವದಿಸಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಶಾಸಕ ಅಶೋಕ ಖೇಣಿ ಮನವಿ ಮಾಡಿದರು.

ಅಷ್ಟೂರ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ನಾನು ಶಾಸಕನಾಗಿದ್ದಾಗ ಕ್ಷೇತ್ರಕ್ಕೆ 2231 ಕೋಟಿ ರೂ.ಅನುದಾನ ತಂದು ಹಲವು ಅಭಿವೃದ್ಧಿ ಕೆಲಸ ಮಾಡಿರುವೆ. ಇನ್ನೂ ಸಾಕಷ್ಟು ಕೆಲಸ ಬಾಕಿ ಉಳಿದಿದ್ದು, ಪೂರ್ಣಗೊಳಿಸಲು ಮತದಾರರು ಬೆಂಬಲಿಸಬೇಕು ಎಂದರು.

ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಮೃತರಾವ್ ಚಿಮಕೋಡೆ ಮಾತಾನಾಡಿ, ಖೇಣಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿಪಡಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಸಾಕಷ್ಟು ಭಾಗ್ಯಗಳನ್ನು ನೀಡಿದೆ. ರಾಜ್ಯದಲ್ಲಿ ಮತ್ತೆ ಅಕಾರಕ್ಕೆ ಬಂದರೆ 200 ಯೂನಿಟ್ ಉಚಿತ ವಿದ್ಯುತ್, ಪ್ರತಿ ಮನೆ ಮಹಿಳೆಗೆ ಮಾಸಿಕ 2 ಸಾವಿರ ರೂ.ಸೇರಿ ನಾನಾ ಗ್ಯಾರಂಟಿ ಕಾಂಗ್ರೆಸ್ ನೀಡಿದೆ ಎಂದು ತಿಳಿಸಿದರು.

ಬ್ಲಾಕ್ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ ಚನ್ನಶಟ್ಟಿ, ಕರೀಮ್ ಸಾಬ್ ಕಮಠಾಣ, ರಮೇಶ ಹೌದಖಾನಿ, ವೀರಪ್ಪ ಅಡ್ಡೆ, ಪ್ರಭು ಪಸರಗಿ, ಮಾರ್ಟಿನ್ ಮಾಳಗೆ, ಕುಶಾಲರಾವ್, ಶರಣು ಸ್ವಾಮಿದಾಸ, ಪ್ರಶಾಂತ, ಲಖನ್, ಇಮ್ರಾನ್, ಸುನೀಲ್, ವಿಶ್ವನಾಥ, ದೀಪಕ, ಜಾಕ್ಸನ್ ಇತರರಿದ್ದರು.