ಯಾದಗಿರಿ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಹಿಂದು ಸಂಘಟನೆಗಳ ಕಾರ್ಯಕರ್ತರನ್ನು ಗುರಿಯಾಗಿಸಿ ಸಂಚು ರೂಪಿಸಲಾಗುತ್ತಿದೆ ಎಂದು ಖ್ಯಾತ ವಾಗ್ಮಿ ಹಾಗೂ ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವತರ್ಿ ಸೂಲಿಬೆಲೆ ಆಪಾದಿಸಿದರು.
ಬ್ರಿಗೇಡ್ನಿಂದ ಆಯೋಜಿಸಿರುವ ಜನಗಣಮನ ಬೆಸೆಯೋಣ ಕಾರ್ಯಕ್ರಮದ ನಿಮಿತ್ತ ಭಾನುವಾರ ಸಂಜೆ ಇಲ್ಲಿನ ಎಸ್ಎಲ್ಟಿ ಹೋಟೆಲ್ ಸಭಾಂಗಣದಲ್ಲಿ ಜರುಗಿದ ಸಮಾವೇಶದಲ್ಲಿ ಮಾತನಾಡಿ, ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾಗಲೂ ಸಾಕಷ್ಟು ಹಿಂದುಗಳ ಹತ್ಯೆ ನಡೆದಿತ್ತು. ಹೀಗಾಗಿ ಕಾಂಗ್ರೆಸ್ ಸರಕಾರದ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿಲ್ಲ ಎಂದರು.
ಗೋಹತ್ಯೆ, ಜಾನುವಾರು ಕಳ್ಳತನ ಅವ್ಯಾಹತವಾಗಿ ನಡೆದಿವೆ. ಇದನ್ನು ಪ್ರಶ್ನಿಸಲು ಹೋದವರ ಮೇಲೆ ಸುಳ್ಳು ಮೊಕದ್ದಮೆ ಹಾಕಲಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಬಂದ ನಂತರದಲ್ಲಿ ಮುಸಲ್ಮಾನರು ಚಿಗುರಿಕೊಂಡಿದ್ದಾರೆ. ಅನೇಕ ಕಡೆಗಳಲ್ಲಿ ಗಲಭೆಗಳನ್ನು ಸೃಷ್ಟಿಸಲಾಗುತ್ತಿದೆ. ಶಿವಮೊಗ್ಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಸಲ್ಮಾನರ ಓಲೈಕೆಯಲ್ಲಿ ತೊಡಗಿಕೊಂಡಿದ್ದಾರೆ. ಅಲ್ಲಾಹನ ಕೃಪೆಯಿಂದಲೇ ತಮ್ಮ ಸರಕಾರದ ಬಂದಿದೆ ಎಂದು ಗೃಹ ಸಚಿವ ಜೆ.ಪರಮೇಶ ರ ಒಂದು ಕಡೆ ಹೇಳುತ್ತಾರೆ ಎಂದು ತಿಳಿಸಿದರು.
ಬಿಟ್ಟಿ ಭಾಗ್ಯಗಳಿಂದ ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಈ ಸರಕಾರದ ಅವಧಿ ಮುಗಿಯುವುದರೊಳಗೆ ರಾಜ್ಯ 30 ವರ್ಷ ಹಿಂದೆ ಹೋಗಿರುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ವಿಪಕ್ಷಗಳು ಕಟ್ಟಿ ಹಾಕಲು ನಾನಾ ತಂತ್ರ ಹೆಣೆಯುತ್ತಿವೆ. ಆದರೆ, ಅವರಿಂದ ಏನೂ ಮಾಡಲು ಸಾಧ್ಯವಿಲ್ಲ. ಮೋದಿ ಅವರನ್ನು ಸೋಲಿಸಲು ಸುಮಾರು 28 ಪಕ್ಷಗಳು ಸೇರಿ ಇಂಡಿಯಾ (ಐ.ಎನ್.ಡಿ.ಐ.ಎ) ಒಕ್ಕೂಟ ರಚನೆ ಮಾಡಿಕೊಂಡಿವೆ. ಆದರೆ, ಅವರನ್ನು ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ ಎಂದು ವ್ಯಂಗ್ಯವಾಡಿದರು.