ಕೆಜಿಎಫ್: ಕೆಜಿಎಫ್ ನಗರಸಭೆ ಚುನಾವಣೆಯಲ್ಲಿ ಪ್ರಪ್ರಥಮ ಬಾರಿ ಅವಿರೋಧವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡುವ ಮೂಲಕ ಕಾಂಗ್ರೆಸ್‌ನಿಂದ ಇತಿಹಾಸ ಸೃಷ್ಟಿಯಾಗಿದ್ದು, ಅಧ್ಯಕ್ಷರಾಗಿ 2ನೇ ವಾರ್ಡ್ ಸದಸ್ಯ ವಳ್ಳಲ್‌ಮುನಿಸ್ವಾಮಿ, ಉಪಾಧ್ಯಕ್ಷೆಯಾಗಿ ದೇವಿಗಣೇಶ್ ಆಯ್ಕೆಯಾಗಿದ್ದಾರೆ.
ಶನಿವಾರ ಬೆಳಗ್ಗೆ 8 ಗಂಟೆಗೆ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಆರಂಭವಾಯಿತು. 9 ಗಂಟೆಗೆ ನಗರಸಭೆ ಕಚೇರಿಗೆ ಶಾಸಕಿ ರೂಪಕಲಾ, ಅನುಮೋದಕರು ಹಾಗೂ ಸೂಚಕರೊಂದಿಗೆ ಆಗಮಿಸಿದ ವಳ್ಳಲ್‌ಮುನಿಸ್ವಾಮಿ ಹಾಗೂ ದೇವಿಗಣೇಶ್ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಚುನಾವಣಾಧಿಕಾರಿ ಹಾಗೂ ಎಸಿ ಸೋಮಶೇಖರ್, 12 ಗಂಟೆಗೆ ನಾಮಪತ್ರ ಹಿಂಪಡೆಯಲು ಅವಕಾಶ ನೀಡಿದ ನಂತರ ನಾಮಪತ್ರಗಳ ಕ್ರಮಬದ್ಧತೆ ಪರಿಶೀಲಿಸಿ ಇತರರು ಯಾರೂ ನಾಮಪತ್ರ ಸಲ್ಲಿಸದ ಕಾರಣ ಅಂತಿಮವಾಗಿ ಅವಿರೋಧ ಆಯ್ಕೆ ೋಷಿಸಿದರು.ಕಾಂಗ್ರೆಸ್ ಸದಸ್ಯ ಜಯಪಾಲ್ 1, ಬಿಜೆಪಿ 3, ಆರ್‌ಪಿಐ 2 ಹಾಗೂ ಪಕ್ಷೇತರ 4, ಸೇರಿ 10 ಸದಸ್ಯರು ಗೈರು ಹಾಜರಾಗಿದ್ದರು.
ವಾಜಿ ಶಾಸಕ ದೂರು: ಆರ್‌ಪಿಐ ನಗರಸಭೆ ಸದಸ್ಯೆ ಮಂಜುಳಾದೇವಿ ಪಕ್ಷದ ವಿಪ್ ಉಲ್ಲಂನೆ ವಾಡಿ, ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ರೆಸಾರ್ಟ್‌ಗೆ ತೆರಳಿರುವ ಹಿನ್ನೆಲೆಯಲ್ಲಿ ಸದಸ್ಯತ್ವವನ್ನು ರದ್ದುಪಡಿಸಬೇಕು ಎಂದು ವಾಜಿ ಶಾಸಕ ಎಸ್.ರಾಜೇಂದ್ರನ್ ಎಸಿಗೆ ದೂರು ಸಲ್ಲಿಸಿದರು. ಇದಕ್ಕೂ ಮುನ್ನ ಸರ್ಕಾರಿ ರಜೆ ದಿನಗಳಲ್ಲಿ ಚುನಾವಣೆ ನಡೆಸುವಂತಿಲ್ಲ ಎಂದು ಹೈಕೊರ್ಟ್ ಆದೇಶವಿದೆ. ಹಾಗಾಗಿ ಚುನಾವಣೆ ಮುಂದೂಡುವಂತೆ ಮನವಿ ವಾಡಿದರು.
ಆಯ್ಕೆ ನಂತರ ನೂತನ ಅಧ್ಯಕ್ಷ ವಳ್ಳಲ್‌ಮುನಿಸ್ವಾಮಿ ಹಾಗೂ ಉಪಾಧ್ಯಕ್ಷೆ ದೇವಿಗಣೇಶ್ ಅವರನ್ನು ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು ಸನ್ಮಾನಿಸಿ ಸಿಹಿ ಹಂಚಿ ಸಂಭ್ರಮಿಸಿದರು. ನಂತರ ಮೆರವಣಿಗೆ ಮೂಲಕ ತೆರಳಿ ಶಾಸಕಿ ಹಾಗೂ ನೂತನ ಅಧ್ಯಕ್ಷ, ಉಪಾಧ್ಯಕ್ಷೆ ಅವರಿಂದ ಗಾಂಧಿ, ಕಾಮರಾಜ್ ಪ್ರತಿಮೆ ಹಾಗೂ ನಗರಸಭೆ ಅವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ವಾಲಾರ್ಪಣೆ ಮಾಡಿದರು.
ತಹಸೀಲ್ದಾರ್ ರಮೇಶ್, ನಗರಸಭೆ ಪೌರಾಯುಕ್ತೆ ಸರ್ವರ್‌ಮರ್ಚೆಂಟ್, ವಾಜಿ ನಗರಸಭೆ ಅಧ್ಯಕ್ಷ ರಮೇಶ್‌ಜೈನ್ ಸದಸ್ಯರಾದ ಕರುಣಾಕರನ್, ಸೆಂದಿಲ್, ವಾಣಿಕ್ಯಂ, ಜರ್ಮನ್, ಅನ್ಬುಶಾಂತಿ, ಶಾಲಿನಿ ನಂದಕುವಾರ, ವೇಣುಗೋಪಾಲ್, ಪ್ರವೀಣ್, ಜಯಂತಿರಮೇಶ್ ಹಾಗೂ ಇತರರು ಹಾಜರಿದ್ದರು.
ಬಿಜೆಪಿಗೆ ಮರ್ಮಾಘಾತ: ಬಿಜೆಪಿಯಿಂದ ಅಪರೇಷನ್ ಕಮಲ ನಡೆಯುವ ಸುಳಿವು ಪಡೆದ ಶಾಸಕಿ ರೂಪಕಲಾ ಕಳೆದ 3 ದಿನಗಳಿಂದ ಎಲ್ಲ 26 ನಗರಸಭೆ ಸದಸ್ಯರನ್ನು ಕೋಲಾರದಲ್ಲಿರುವ ರೆಸಾರ್ಟ್‌ವೊಂದರಲ್ಲಿ ವಾಸವ್ಯ ಹೊಡಿದ್ದರು. ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳನ್ನು ಪಡೆಯಲೇಬೇಕು ಎಂದು ಹಠಕ್ಕೆ ಬಿದ್ದಿದ್ದ 1ನೇ ವಾರ್ಡ್ ನಗರಸಭೆ ಸದಸ್ಯ ವಾಣಿಕ್ಯಂ ಹಾಗೂ ಜೈನ್ ವಾರ್ಡ್‌ನ ಸದಸ್ಯ ವಾಜಿ ನಗರಸಭೆ ಅಧ್ಯಕ್ಷ ರಮೇಶ್‌ಜೈನ್, ಜರ್ಮನ್ ಅವರನ್ನು ಮನವೊಲಿಸುವ ಮೂಲಕ ವಳ್ಳಲ್‌ಮುನಿಸ್ವಾಮಿ ಹಾದಿ ಸುಗುಮಗೊಳಿಸಿದರು.
ನಗರದ 35 ವಾರ್ಡ್‌ಗಳಲ್ಲೂ ರಸ್ತೆಗಳು ಯುಜಿಡಿ ಕಾಮಗಾರಿಯಿಂದ ಹದಗೆಟ್ಟಿದ್ದು ಮುಂದಿನ ದಿನಗಳಲ್ಲಿ ರಸ್ತೆಗಳ ದುರಸ್ತಿ ಕಾರ್ಯ ವಾಡಲಾಗುವುದು. ಆಂಡ್ರಸನ್‌ಪೇಟೆ ಬಸ್ ನಿಲ್ದಾಣದಲ್ಲಿ ಸ್ಥಾಪನೆ ವಾಡಲಾಗಿರುವ ರಾಜೀವ್‌ಗಾಂಧಿ ಪ್ರತಿಮೆಯನ್ನು 3 ತಿಂಗಳಲ್ಲಿ ಅನಾವರಣಗೊಳಿಸಲಾಗುವುದು. ರೂಪಕಲಾ, ಶಾಸಕಿ ಶಾಸಕಿ ರೂಪಕಲಾ ಅವರ ಆಶೀರ್ವಾದದಿಂದ ನಗರಸಭೆ ಅಧ್ಯಕ್ಷನಾಗಿ ಆಯ್ಕೆಯಾಗಿದ್ದು, ನಗರಸಭೆ ಸದಸ್ಯರ ಸಹಕಾರದೊಂದಿಗೆ ನಗರದ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ. ಅಧ್ಯಕ್ಷ ವಳ್ಳಲ್‌ಮುನಿಸ್ವಾಮಿ, ಅಧ್ಯಕ್ಷ ನಗರಸಭೆ