ಜಿಲ್ಲೆ

ಕಾಂಗ್ರೆಸ್ ಗ್ಯಾರಂಟಿಗಳು ಅವೈಜ್ಞಾನಿಕ

ಚಿತ್ರದುರ್ಗ: ಪಂಜಾಬ್ ಮತ್ತು ಹೊಸದಿಲ್ಲಿಯಲ್ಲಿ ಆಮ್ ಆದ್ಮಿ ಪಾರ್ಟಿ ಅನುಷ್ಠಾನಗೊಳಿಸಿರುವ ಗ್ಯಾರಂಟಿಗಳು ಅತ್ಯಂತ ವೈಜ್ಞಾನಿಕವಾಗಿವೆ. ಆದ ರೆ ರಾಜ್ಯವಿಧಾನಸಭೆ ಚುನಾವಣೆಯಲ್ಲಿ ಕೇವಲ ಮತಗಳಿಕೆಗೆ ಉದ್ದೇಶದಿಂದ ಕಾಂಗ್ರೆಸ್ ಆತುರ ಆತುರವಾಗಿ ಗ್ಯಾರಂಟಿ ಘೋಷಿಸಿದೆ ಎಂದು ಆಮ್‌ಆದ್ಮಿ ಪಾರ್ಟಿ ರಾಜ್ಯದಕ್ಷಿಣ ವಿಭಾಗದ ಸಂಘಟನಾ ಕಾರ‌್ಯದರ್ಶಿ ಬಿ.ಟಿ.ನಾಗಣ್ಣ ಹೇಳಿದರು.
ನಗರದ ಪಕ್ಷದ ಕಚೇರಿಯಲ್ಲಿ ಸೋಮವಾರ ಕಾರ‌್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು,ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂ ಗ್ರೆಸ್ ಪರಾಮರ್ಶಿಸದೆ ಅವಸರದಲ್ಲಿ ಗ್ಯಾರಂಟಿಗಳನ್ನು ಘೋಷಿಸಿದೆ. ನಮ್ಮ ಸರ್ಕಾರಗಳಿಂದ ಪ್ರೇರಣೆಗೊಂಡು ಘೋಷಿಸಿರುವ ಗ್ಯಾರಂಟಿ ಗಳನ್ನು ರಾಜ್ಯದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಕಾಂಗ್ರೆಸ್ಸಿಗೆ ಸಾಧ್ಯವಾಗದೆಂದರು. ರಾಜ್ಯದಲ್ಲಿ ಮುಂದೆ ಬರುವಂಥ ಎಲ್ಲ ಚು ನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಕಣಕ್ಕೆ ಇಳಿಯಲಿದ್ದಾರೆ ಎಂದರು.
ಪಕ್ಷದ ರಾಜ್ಯಉಪಾಧ್ಯಕ್ಷ ಸುರೇಶ್ ರಾಥೋಡ್,ಮುಖಂಡರಾದ ವಿ.ಜಗದೀಶ್,ಬಿ.ಇ.ಜಗದೀಶ್,ತಿಪ್ಪೇಸ್ವಾಮಿ,ಪಾಪಣ್ಣ,ಮಹಾಂ ತೇಶ್,ರಾಮ,ಲೋಕೇಶ್ವರಪ್ಪ,ತಿಮ್ಮಪ್ಪ,ಗುರುಪ್ರಸಾದ್,ಲಿಂಗರಾಜ್,ತನ್ವೀರ್,ವರಲಕ್ಷ್ಮೀ ಮತ್ತಿತರರು ಇದ್ದರು.