ಬಸವಕಲ್ಯಾಣ: ಉಪ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಿಂದ ನಗರಸಭೆ ಹಾಗೂ 6 ಜಿಪಂ ಕ್ಷೇತ್ರಗಳಿಗೆ ಉಸ್ತುವಾರಿಗಳನ್ನು ನೇಮಿಸಲಾಗಿದೆ.
ಚುನಾವಣೆ ಕಾರ್ಯಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ನಗರಸಭೆ ಹಾಗೂ ಜಿಪಂ ಕ್ಷೇತ್ರ ಉಸ್ತುವಾರಿ ವಹಿಸಲು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಶಿಫಾರಸ್ಸು ಮಾಡಿರುವ ಹಿನ್ನೆಲೆಯಲ್ಲಿ ಈ ನೇಮಕ ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆದೇಶದಲ್ಲಿ ತಿಳಿಸಿದ್ದಾರೆ.
ಬಸವಕಲ್ಯಾಣ ನಗರಸಭೆಗೆ ಶಾಸಕರಾದ ಯು.ಟಿ. ಖಾದರ್, ಜಮೀರ್ ಅಹ್ಮದ್ ಖಾನ್, ರಹೀಮ್ ಖಾನ್, ಯಶವಂತರಾಯ ಗೌಡ ಪಾಟೀಲ್, ಕನೀಜ್ ಫಾತೀಮಾ, ಮಾಜಿ ಸಂಸದ ನರಸಿಂಗರಾವ ಸೂರ್ಯವಂಶಿ ಮತ್ತು ಶರಣು ಮೋದಿ ಕಲಬುರಗಿ ಅವರನ್ನು ನೇಮಕ ಮಾಡಲಾಗಿದೆ.
ಹುಲಸೂರು ಜಿಪಂ ಕ್ಷೇತ್ರಕ್ಕೆ ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಮಾಜಿ ಶಾಸಕ ಬಿ.ಆರ್.ಪಾಟೀಲ್, ತಿಪ್ಪಣ್ಣ ಕಮಕನೂರ, ಕೋಹಿನೂರ ಕ್ಷೇತ್ರಕ್ಕೆ ಮಾಜಿ ಸಚಿವ ಸಂತೋಷ ಲಾಡ್, ಮಾಜಿ ಎಂಎಲ್ಸಿ ಅಲ್ಲಮಪ್ರಭು ಪಾಟೀಲ್, ಮಂಠಾಳ ಕ್ಷೇತ್ರಕ್ಕೆ ಶಾಸಕರಾದ ಅಜಯಸಿಂಗ್, ಎಂ.ವೈ.ಪಾಟೀಲ್, ಎಂಎಲ್ಸಿ ಅರವಿಂದಕುಮಾರ ಅರಳಿ, ಮುಡಬಿ ಕ್ಷೇತ್ರಕ್ಕೆ ಶಾಸಕ ಪ್ರಿಯಾಂಕ್ ಖರ್ಗೆ, ಜಗದೇವಯ್ಯ ಗುತ್ತೇದಾರ, ಮುಖಂಡ ಬಾಬು ಹೊನ್ನನಾಯಕ, ನಾರಾಯಣಪುರ ಕ್ಷೇತ್ರಕ್ಕೆ ಎಂಎಲ್ಸಿ ಡಾ.ಚಂದ್ರಶೇಖರ ಪಾಟೀಲ್, ಶಾಸಕಿ ಸೌಮ್ಯ ರೆಡ್ಡಿ, ಪರತಾಪುರ ಜಿಪಂ ಕ್ಷೇತ್ರಕ್ಕೆ ಎಂಎಲ್ಸಿ ವಿಜಯಸಿಂಗ್, ಶಾಸಕರಾದ ಅಂಜಲಿ ನಿಂಬಾಳಕರ್, ಆನಂದ ನ್ಯಾಮಗೌಡ ಅವರನ್ನು ನೇಮಿಸಲಾಗಿದೆ.