ಜಿಲ್ಲೆ

ಕಾಂಗ್ರೆಸ್ ಕಾರ್ಮಿಕ ವಿಭಾಗಕ್ಕೆ ನೇಮಕ

ಬೀದರ್: ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ವಿವಿಧ ಸ್ಥಾನಗಳಿಗೆ ನೇಮಕ ಮಾಡಲಾಗಿದೆ. ಪಕ್ಷದ ಜಿಲ್ಲಾ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಭಾಗದ ಜಿಲ್ಲಾಧ್ಯಕ್ಷ ರಮೇಶ ಹೌದಖಾನಿ ಕಮಠಾಣ ಅವರು ಆದೇಶ ಪತ್ರ ನೀಡಿದರು.
ಶರಣು ಸಿದ್ಧಾ (ವಿಭಾಗದ ಜಿಲ್ಲಾ ಪ್ರಧಾನ ಕಾರ್ಯದರ್ಶಿ), ರಾಹುಲ್ ನಂದಿ (ಕಾರ್ಯಾಧಕ್ಷ), ಶರಿಫೊದ್ದೀನ್ (ಸಹ ಕಾರ್ಯದರ್ಶಿ), ಶೇಖ್ ಮಹೆಬೂಬ್ (ಸಂಚಾಲಕ), ಖಾಲೀದ್ (ಕಾರ್ಯದರ್ಶಿ), ಸುನೀಲ ಸಿಂಧೆ (ಬೀದರ್ ನಗರಾಧ್ಯಕ್ಷ), ದಯಾನಂದ (ಔರಾದ್ ನಗರಾಧ್ಯಕ್ಷ) ಹಾಗೂ ಅನೀಲ ವಡ್ಡೆ (ಔರಾದ್ ಗ್ರಾಮೀಣ ಅಧ್ಯಕ್ಷ) ಅವರನ್ನು ನೇಮಕ ಮಾಡಿ ಆದೇಶ ಪತ್ರ ನೀಡಲಾಯಿತು.
ಕೆಪಿಸಿಸಿ ಸಾಮಾಜಿಕ ಜಾಲತಾಣದ ದಕ್ಷಿಣ ಕ್ಷೇತ್ರದ ಅಧ್ಯಕ್ಷ ಲೋಕೇಶ ಕನ್ನಶೆಟ್ಟಿ, ಪ್ರಮುಖರಾದ ಅಬ್ದುಲ್ ಹಮೀದ್, ಬಚ್ಚನ್, ಸಂಜುಕುಮಾರ ಡಿ.ಕೆ., ಮಿಸ್ಮಾ ಅಹ್ಮದ್ ಇತರರಿದ್ದರು.