ಜಿಲ್ಲೆ

ಕಾಂಗ್ರೆಸ್ ಕಛೇರಿಯಲ್ಲಿ ಕಾರ್ಗಿಲ್ ವಿಜಯೋತ್ಸವ

ಬಾಗಲಕೋಟೆ: ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಇಂದು ಶ್ರದ್ಧಾಭಕ್ತಿಯಿಂದ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಲಾಯಿತು. 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ದೇಶದ  ಪ್ರಾಣ ತ್ಯಾಗ ಮಾಡಿದ ಹುತಾತ್ಮ ಯೋಧರನ್ನು ಸ್ಮರಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಎಸ್ ಜಿ ನಂಜ್ಯಯನಮಠ, ಶಾಸಕರು,ಬಿಟಿಡಿಎ ಅಧ್ಯಕ್ಷರಾದ ಎಚ್ ವಾಯ್ ಮೇಟಿ ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷರಾದ ನಾಗರಾಜ ಷ. ಹದ್ಲಿ, ಜಿಲ್ಲಾ ವಕ್ತಾರರಾದ ಚಂದ್ರಶೇಖರ ರಾಠೋಡ ಜಿಲ್ಲಾ ಪ.ಜಾ ವಿಭಾಗದ ಜಿಲ್ಲಾಧ್ಯಕ್ಷ ರಾಜು ಮನ್ನಿಕೇರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಬಳ್ಳಾರಿ ನಿವೃತ್ತ ಯೋಧರ ವಿಭಾಗದ ಜಿಲ್ಲಾಧ್ಯಕ್ಷ ಪ್ರಭು ಕಾಳಹಸ್ತಿಮಠ ಮುಖಂಡ ಕುತುಬುದಿನ ಖಾಜಿ ಆನಂದ ಜಿಗಜಿನ್ನಿ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

ಕಾರ್ಗಿಲ್ ವಿಜಯೋತ್ಸವ ಕುರಿತು ಮಾತನಾಡಿದ ಜಿಲ್ಲಾಧ್ಯಕ್ಷ ನಂಜ್ಯಯನಮಠ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸುತ್ತಿರುವುದು ಅತ್ಯಂತ ಗರ್ವದ ಕ್ಷಣವಾಗಿದೆ. 1999 ರಲ್ಲಿ ಕಾರ್ಗಿಲ್ ಯುದ್ಧದಲ್ಲಿ ಭಾರತದ ಭದ್ರತಾ ಪಡೆಗಳ ಸ್ಫೂರ್ತಿದಾಯಕ ವಿಜಯವನ್ನು ಸ್ಮರಿಸುತ್ತಿದ್ದೇವೆ. ನಮ್ಮ ಜವಾನರು ತ್ಯಾಗ, ಧೈರ್ಯ ಮತ್ತು ವೀರಗಾಥೆಯಿಂದ ಆ ಹಿಮಾಲಯದ ಪರ್ವತಗಳಲ್ಲಿ ಪಾಕ್ ಆಕ್ರಮಿತ ಭೂಭಾಗವನ್ನು ಮುಕ್ತಗೊಳಿಸಿದರು.

ಶಾಸಕ ಎಚ್ ವಾಯ್ ಮೇಟಿಯವರು ಮಾತನಾಡಿ, ಈ ವಿಜಯೋತ್ಸವ ನಮ್ಮ ದೇಶಭಕ್ತಿಯ ಸಂಕೇತವಾಗಿದೆ. ದೇಶದ ರಕ್ಷಣೆಗೆ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ವೀರಶಹೀದರಿಗೆ ನಾವು ಶತ ಶತ ನಮನ ಸಲ್ಲಿಸೋಣವೆಂದರೂ. ಚಂದ್ರಶೇಖರ ರಾಠೋಡ ಇಂದು ಯುವ ಪೀಳಿಗೆಗೆ ಈ ಯುದ್ಧದಿಂದ ಧೈರ್ಯ, ತ್ಯಾಗ ಮತ್ತು ಬದ್ಧತೆಯ ಪಾಠ ಕಲಿಯಬೇಕಾಗಿದೆಯೆಂದರು.

ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ನಾಗರಾಜ ಹದ್ಲಿ ಅವರು, ಇಂತಹ ಮಹತ್ವದ ದಿನವನ್ನು ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಆಚರಿಸುತ್ತಿರುವುದು ನಮ್ಮ ದೇಶದ ಸೈನಿಕರ ಬದ್ಧತೆಗೆ ಗೌರವ ಸೂಚಿಸುವಂತಾಗಿದೆ. ಅವರು ನೀಡಿದ ಬಲಿದಾನ ವ್ಯರ್ಥವಾಗದಂತೆ ನಾವು ಒಗ್ಗಟ್ಟಿನಿಂದ ರಾಷ್ಟ್ರನಿರ್ಮಾಣದಲ್ಲಿ ತೊಡಗಿಸೋಣವೆಂದರು.

ನಿವೃತ್ತ ಯೋಧರಾದ ಹಜರತ್ತ ಹಳ್ಳಿ ಅಮರೇಶ ಅಗಸಿಮುಂದಿನ ಮಲ್ಲಪ್ಪ ಹುನಚಗಿ ವೆಂಕನಗೌಡ ಹಗೆದಾಳ ಗ್ಯಾನಪ್ಪ ಪೂಜಾರಿ, ರೇಣುಕಾ ನ್ಯಾಮಗೌಡ ಮಂಜುಳಾ ಭುಸಾರೆ, ದ್ಯಾಮಣ್ಣ ಗಾಳಿ, ಇಬ್ರಾಹಿಂ ಕಲಾದಗಿ ಅಭಿಷೇಕ ತಳ್ಳಿಕೇರಿ ಪ್ರಭು ರುದ್ರಾಕ್ಷಿ ಮಾಬುಬಿ ತುರೆದ ಬಾಬು ಇಟಗಿ ಹಾಜಿಸಾಬ ದಂಡಿನ ಪವಿತ್ರಾ ಜಕ್ಕಪ್ಪನವರ ಮುಂತಾದವರು ಪಾಲ್ಗೊಂಡಿದ್ದರು.