ಮೈಸೂರು: ನಗರ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜೆ.ವಿಜಯಕುಮಾರ್ ಮಾತನಾಡಿ, ಬೇಟೆಯ ಸಂದರ್ಭದಲ್ಲಿ ಕ್ರೌಂಚ ಪಕ್ಷಿಗಳ ವೇದನೆ ನೋಡಿ ವಾಲ್ಮೀಕಿ ಅವರಿಗೆ ಮನಃ ಪರಿವರ್ತನೆಯಾಯಿತು. ಅನೇಕ ವರ್ಷಗಳ ಕಾಲ ಘೋರ ತಪಸ್ಸು ಮಾಡಿ ಆದರ್ಶ ಸಿದ್ಧಿಸಿಕೊಂಡರು. ಬಳಿಕ ರಾಮಾಯಣ ಬರೆದು ಜಗತ್ತಿಗೆ ಶ್ರೀರಾಮನ ಆದರ್ಶವನ್ನು ತಿಳಿಸಿದರು. ಮಹಾತ್ಮ ಗಾಂಧೀಜಿ, ರಾಮನ ಆದರ್ಶಗಳ ಪ್ರಭಾವಕ್ಕೆ ಒಳಗಾಗಿ ತಮ್ಮ ಜೀವನವನ್ನು ಬದಲಾಯಿಸಿಕೊಂಡರು ಹೇಳಿದರು.
ಆದರೆ ರಾಮನನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಂಡಿದೆ. ಅಯ್ಯೋಧೆ ವಿಚಾರ ಇಟ್ಟುಕೊಂಡು ಸಮಾಜದ ಸ್ವಾಸ್ಥೃ ಹಾಳು ಮಾಡಿತು. ನಮಗೆ ಬೇಕಾಗಿರುವುದು ಜಗತ್ತು ಒಪ್ಪಿರುವ ರಾಮನೇ ಹೊರತು ಬಿಜೆಪಿಯ ರಾಮನಲ್ಲ ಎಂದರು.
ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ನಗರಪಾಲಿಕೆ ಮಾಜಿ ಸದಸ್ಯರಾದ ಡಿ.ನಾಗಭೂಷಣ್, ಎಂ. ಪ್ರದೀಪ್‌ಕುಮಾರ್, ಎಂ.ಶಿವಣ್ಣ, ಮಾಜಿ ಮೇಯರ್ ಪುಷ್ಪಲತಾ ಚಿಕ್ಕಣ್ಣ, ಸವಿತಾ ಸಮಾಜದ ನಾಗೇಶ್ ಇತರರು ಇದ್ದರು.