ಜಿಲ್ಲೆ

ಕಾಂಗ್ರೆಸ್​ ಒಪ್ಪಿಕೊಂಡಿದ್ದು ಹೈಕಮಾಂಡ್​ ಕಲ್ಚರ್​

ಪವರ್​ ಶೇರಿಂಗ್​ ಗೊತ್ತಿದ್ರೆ ಸಿಎಂ, ಡಿಸಿಎಂ, ವರಿಷ್ಠರಿಗೆ ಮಾತ್ರ ಎಂದ ಟಿ.ಬಿ.ಜಯಚಂದ್ರ

ತುಮಕೂರು: ಪವರ್​ ಶೇರಿಂಗ್​ ಬಗ್ಗೆ ಯಾರಿಗೂ ಗೊತ್ತಿಲ್ಲ. ಅದು ಏನಾದರೂ ಗೊತ್ತಿದ್ದರೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಹೈಕಮಾಂಡ್​ಗೆ ಮಾತ್ರ ಎಂದು ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಸ್ಪಷ್ಟಪಡಿಸಿದರು.

ನಗರ ದಲ್ಲಿ ಸೋಮವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ಸದ್ಯಕ್ಕಿಲ್ಲ. ಈ ಪ್ರಶ್ನೆ ಸದ್ಯಕ್ಕೆ ಉದ್ಭವಿಸಿಲ್ಲ. ಮುಖ್ಯಮಂತ್ರಿ ಹುದ್ದೆ ಕೂಡ ಖಾಲಿ ಕೂಡ ಇಲ್ಲ. ವರಿಷ್ಠರು ಯಾವಾಗ ಏನು ತೀರ್ಮಾನ ಮಾಡುತ್ತಾರೋ ಗೊತ್ತಿಲ್ಲ. ಕಾಂಗ್ರೆಸ್​ನಲ್ಲಿ ನಾವು ಒಪ್ಪಿಕೊಂಡು ಬಂದಿರೋದು ಹೈಕಮಾಂಡ್​ ಸಂಸತಿ. ಏನೇ ವಿಚಾರಗಳಿದ್ದರೂ ವರಿಷ್ಠರ ಅಭಿಪ್ರಾಯಕೇಳಿಕೊಂಡು ಅವರ ಅಭಿಪ್ರಾಯಕ್ಕೆ ಬದ್ಧರಾಗಿರುತ್ತೇವೆ ಎಂದರು.

ಡಿ.ಕೆ.ಶಿವಕುಮಾರ್​ ರಾಜ್ಯ ಕಾಂಗ್ರೆಸ್​ ಅಧ್ಯಕ್ಷರಾಗಿ ಪಕ್ಷವನ್ನ ಅಧಿಕಾರಕ್ಕೆ ತರಲು ಎಲ್ಲ ರೀತಿಯಲ್ಲೂ ಶ್ರಮಿಸಿದ್ದಾರೆ. ಅವರು ಸಿಎಂ ಆಗುವುದನ್ನು ಬಯಸುವುದು ತಪ್ಪಿಲ್ಲ. ಬದಲಾವಣೆ ಯಾವ ರೀತಿಯಾಗಿ ಮಾಡಬೇಕು ಅನ್ನುವುದನ್ನು ಗಮನಿಸಬೇಕು. ಬದಲಾವಣೆ ಇಡೀ ಪಕ್ಷದ ಮೇಲೆ ಹಾಗೂ ದೇಶದ ಮೇಲೆ ಪರಿಣಾಮ ಬೀಳುತ್ತೆ. ಮುಂದೆ ಚುನಾವಣೆಗಳು ಬರುತ್ತಿದ್ದು, ಅದರ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿರುತ್ತವೆ. ಅದನ್ನ ಲೆಕ್ಕಾಚಾರ ಇಟ್ಟುಕೊಂಡು ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ. ಶಿವಕುಮಾರ್​, ನಾನು ಎಸ್​.ಎಂ.ಕೃಷ್ಣ ಅವರ ಗರಡಿಯಲ್ಲಿ ಬೆಳೆದವರು.

ಸಿದ್ದರಾಮಯ್ಯ ಕೂಡಾ ನನ್ನ ಆತ್ಮೀಯರು. ನಮ್ಮ ಒಲುಮೆ&ಗಿಲುಮೆ ಎನ್ನುವ ಪ್ರಶ್ನೆ ಇಲ್ಲ. ಇಬ್ಬರು ಸರಿಸಮಾನರೇ. ಮೂಲ, ವಲಸಿಗರು ಅನ್ನುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು. ಎಐಸಿಸಿ ಪ್ರಧಾನಕಾರ್ಯದರ್ಶಿ ರಣದೀಪ್​ ಸಿಂಗ್​ ಸುರ್ಜೇವಾಲಾ ಇತ್ತೀಚೆಗೆ 3ದಿನ ಎಲ್ಲರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ನಾಯಕತ್ವದ ಬಗ್ಗೆ ಕೇಳಿಲ್ಲ. ಅಭಿವೃದ್ಧಿ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಕ್ಷೇತ್ರಗಳಲ್ಲಿ ಆಗಬೇಕಿರುವ ಅಭಿವೃದ್ಧಿ ಕೆಲಸಗಳಿಂದ ಪಕ್ಷಕ್ಕೆ ವರ್ಚಸ್ಸು ಬರುತ್ತದೆ ಅನ್ನುವುದನ್ನು ವೈಯಕ್ತಿಕವಾಗಿ ಅಭಿಪ್ರಾಯಪಡೆದು ಸರ್ಕಾರಕ್ಕೆ ಸಮಗ್ರ ವರದಿ ಕೊಡುತ್ತಾರೆ. ಬಹುಷ@ ಅಭಿವೃದ್ಧಿಗೆ ವೇಗ ಸಿಗಬಹುದು ಎಂಬುದು ನನ್ನ ಅನಿಸಿಕೆ ಎಂದು ಹೇಳಿದರು.

ಸಚಿವ ಸ್ಥಾನಕ್ಕೆ ಮನವಿ ಮಾಡಿಲ್ಲ: ನಾನು ಯಾರ ಹತ್ತಿರಾನು ಹೋಗಿ ಸಚಿವ ಸ್ಥಾನಕ್ಕೆ ಮನವಿ ಮಾಡಿಲ್ಲ. ಹಿಂದೆ ಕೂಡ ಮಾಡಿಲ್ಲ. ಮುಂದೆಯು ಮಾಡುವುದಿಲ್ಲ ಎಂದು ಜಯಚಂದ್ರ ತೀಕ್ಷ$$$$್ಣವಾಗಿ ಪ್ರತಿಕ್ರಿಯಿಸಿದರು. ಎಲ್ಲೋ ಒಂದು ಕಡೆ ರಾಜಕೀಯ ಲೆಕ್ಕಾಚಾರದಲ್ಲಿ ವಿಧಾನಸಭೆಯಲ್ಲಿ ನನ್ನ ಕಾರ್ಯಕ್ಷಮತೆ ಗಮದಲ್ಲಿಟ್ಟು ಕೊಂಡು ಬದಲಾವಣೆ ಮಾಡುವ ಸಂದರ್ಭದಲ್ಲಿ ನನ್ನ ಹೆಸರು ಪರಿಗಣಿಸಬಹುದು ಎನ್ನುವ ವಿಶ್ವಾಸ ಇದೆ. ಈಗ ಎರಡು ವರ್ಷ ಆಯಿತು. ಎರಡೂವರೆ ವರ್ಷ ಆದ ಮೇಲೆ ಸಂಪುಟ ಪುನಾರಚನೆ ಆಗಬಹುದು ಎನ್ನುವ ಊಹಾಪೋಹಗಳು ಇವೆ. ಸಚಿವ ಸಂಪುಟ ಬಗ್ಗೆ ಚರ್ಚೆ ಆಗುತ್ತಿದೆ ಎಂದರು.