ಕಲಬುರಗಿ: ಪ್ರದೇಶ ಕಾಂಗ್ರೆಸ್ ಪರಿಶಿಷ್ಟ ಪಂಗಡ ಘಟಕದ ಜಿಲ್ಲಾ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಗುರುರಾಜ ಸುಬೇದಾರ್ ತಿಳಿಸಿದ್ದಾರೆ. ದೇವಿಂದ್ರ ದೋರೆ, ಸುರೇಶ ಹವಾಲ್ದಾರ್ (ಜಿಲ್ಲಾ ಉಪಾಧ್ಯಕ್ಷ), ತಿರುಪತಿ ಸುಬೇದಾರ (ಪ್ರಧಾನ ಕಾರ್ಯದರ್ಶಿ), ಬಸವರಾಜ ದೋರೆ (ಜೇವರ್ಗಿ ಬ್ಲಾಕ್ ಎಸ್ಸಿ ಘಟಕ ಅಧ್ಯಕ್ಷ), ಪ್ರಧಾನ ಕಾರ್ಯದರ್ಶಿಯಾಗಿ ರವಿ ಜಿ. ಹೊಸಮನಿ ಅವರನ್ನು ನೇಮಿಸಲಾಗಿದೆ. ಎಸ್ಸಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಸಚಿವ ಪ್ರಿಯಾಂಕ್ ಖರ್ಗೆ, ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಶಿಫಾರಸ್ಸಿನ ಮೇರೆಗೆ ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.