ಹೊಳೆಹೊನ್ನೂರು ಬಿಜೆಪಿ ಮಂಡಲದಿಂದ ಹಿಂದು ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಖಂಡಿಸಿ ಶಿವಮೊಗ್ಗ - ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ ರಸ್ತೆ ತಡೆ ನಡೆಸಲಾಯಿತು. ಕಿರಣ್‌ಕುಮಾರ್, ಸುಬ್ರಮಣಿ, ಹನುಮಂತ ಪಾಟೀಲ್, ಕೆ.ಪಿ.ಕಿರಣ್ ಕುಮಾರ್ ಇತರರಿದ್ದರು. 
ಜಿಲ್ಲೆ

ಕಾಂಗ್ರೆಸ್ ಆಡಳಿತದಲ್ಲಿ ಹಿಂದುಗಳಿಗೆ ಬೆಲೆಯಿಲ್ಲ

ಟಿ.ಎಚ್.ಸಂತೋಷ್ ಕುಮಾರ್

ಹೊಳೆಹೊನ್ನೂರು: ಹಿಂದು ವಿರೋಧಿ ಕಾಂಗ್ರೆಸ್ ಸರ್ಕಾರದಿಂದಾಗಿ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲೇಶಪ್ಪ ಹೇಳಿದರು.

ಅರಹತೋಳಲು ಕೈಮರದಲ್ಲಿ ಶುಕ್ರವಾರ ಹೊಳೆಹೊನ್ನೂರು ಮಂಡಲದಿಂದ ಸುಹಾಸ್ ಶೆಟ್ಟಿ ಕೊಲೆ ಖಂಡಿಸಿ ಆಯೋಜಿಸಿದ್ದ ಶಿವಮೊಗ್ಗ -ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ ತಡೆ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಿಂದು ಕಾರ್ಯಕರ್ತರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ಹೊಣೆಗೇಡಿ ಸರ್ಕಾರಗಳಿಂದ ನಾಗರೀಕರು ತಲೆ ತಗ್ಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ನಡು ರಸ್ತೆಯಲ್ಲಿ ಲಾಂಗ್, ಮಚ್ಚುಗಳು ಜಳಪಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಹಿಂದುಗಳು ಪಕ್ಷಬೇಧ ಮರೆತು ಒಂದಾಗಿ ದೇಶದ್ರೋಹಿಗಳ ವಿರುದ್ಧ ಹೋರಾಡಬೇಕು. ದೇಶದ್ರೋಹಿಗಳಿಗೆ ಕುಮಕ್ಕು ನೀಡುತ್ತಿರುವ ರಾಜ್ಯ ಸರ್ಕಾರ ದಿಂದ ನರಮೇದಗಳು ಹೆಚ್ಚಾಗುತ್ತಿವೆ. ಹಿಂದುಗಳನ್ನು ಕೆಣಕಿದರೆ ಸುಮ್ಮನಿರುವ ಮಾತಿಲ್ಲ ಎಂದರು.

ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಕಿರಣ್‌ಕುಮಾರ್, ಸುಬ್ರಮಣಿ, ಹನುಮಂತ ಪಾಟೀಲ್, ಕೆ.ಪಿ.ಕಿರಣ್ ಕುಮಾರ್, ಉಜ್ಜಿನಪ್ಪ, ಚಂದ್ರಕುಮಾರ್, ಸಾಗರ್, ವಿಜಯ್‌ರಾವ್, ಶ್ರೀಧರ್‌ಬಿಸೆ, ಕುಮಾರ್‌ನಾಯ್ಡು, ಸತೀಶ್‌ಗೌಡ, ರಂಗಪ್ಪ ಇತರರಿದ್ದರು.