ಜಿಲ್ಲೆ

ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ಸಂಭ್ರಮ ಡಿ.22 ರಂದು

ಬೆಳಗಾವಿ: ಬೆಂಗಳೂರಿನ ಭಾಗವತರು ಸಾಂಸ್ಕೃತಿಕ ಸಂಘಟನೆ ಹಾಗೂ ರಂಗಸಷ್ಟಿ ಸಾಂಸ್ಕೃತಿಕ ಸಂಘಟನೆಯ ಸಂಯುಕ್ತಾಶ್ರಯದಲ್ಲಿ ಮಹಾತ್ಮಾ ಗಾಂಧೀಜಿ ಅಧ್ಯಕ್ಷತೆಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮ ನಗರದ ಕನ್ನಡ ಭವನದಲ್ಲಿ ಡಿ.22 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ವರೆಗೆ ನಡೆಯಲಿದೆ.

ಕಾನೂನು ಮತ್ತು ಪ್ರವಾಸೋಧ್ಯಮ ಸಚಿವ ಎಚ್.ಕೆ.ಪಾಟೀಲ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಆಗಮಿಸಲಿದ್ದು, ಅಧ್ಯಕ್ಷತೆಯನ್ನು ನಿವತ್ತ ಅಧೀಕ್ಷಕ ಅಭಿಯಂತರ ರಮೇಶ ಜಂಗಲ ವಹಿಸಲಿದ್ದು, ಕೆ.ರೇವಣ್ಣ ಉಪಸ್ಥಿತರಿರಲಿದ್ದಾರೆ. ಭಾಗವತರು ಪ್ರಕಾಶನಗೊಳಿಸಿದ ಡಾ.ರಾಮಕಷ್ಣ ಮರಾಠೆ ಬರೆದ ರಂಗಭೂಮಿಯ ಸ್ವಾತಂತ್ರೃ ಸಂಗ್ರಾಮ ಕತಿಯನ್ನು ಸಾಹಿತಿ ಡಾ.ಸರಜೂ ಕಾಟ್ಕರ್ ಬಿಡುಗಡೆಗೊಳಿಸುವರು.

ಸಾನ್ನಿಧ್ಯವನ್ನು ನಗರದ ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ವಹಿಸುವರು. ಮಧ್ಯಾಹ್ನ 12 ಗಂಟೆಗೆ ವಿಚಾರ ಸಂಕಿರಣ ನಡೆಯಲಿದ್ದು , ಡಾ.ಪಿ.ಜಿ ಕೆಂಪಣ್ಣವರ ಹಾಗೂ ಧಾರವಾಡ ರಂಗಕರ್ಮಿಗಳಾದ ಡಾ. ಪ್ರಕಾಶ ಗರುಡ ಮಾತನಾಡಲಿದ್ದಾರೆ. ಪತ್ರಕರ್ತ ಎಂ.ಕೆ.ಹೆಗಡೆ ಇವರು ಪ್ರತಿಕ್ರಿಯೆ ನೀಡಲಿರುವರು. ಹಿರಿಯ ಸಾಹಿತಿ ಡಾ. ಬಸವರಾಜ ಜಗಜಂಪಿ ಅಧ್ಯಕ್ಷತೆ ವಹಿಸುವರು.

ಮಧ್ಯಾಹ್ನ 2.30 ಗಂಟೆಗೆ ಸಾಹಿತಿ ಬಿ.ಎಸ್ ಗವಿಮಠ ಅವರ ಅಧ್ಯಕ್ಷತೆಯಲ್ಲಿ ರಂಗಗೌರವ ಮತ್ತು ಸಮಾರೋಪ ಕಾರ್ಯಕ್ರಮ ಜರುಗಲಿದ್ದು, ಅತಿಥಿಗಳಾಗಿ ವಿಶ್ವಜ್ಯೋತಿ ನಾಟಕ ಮಂಡಳಿಯ ಮಾಲೀಕ ರಾಜಣ್ಣ ಜೇವರಗಿ, ಸಾಹಿತಿ ರವಿ ಕೋಟಾರಗಸ್ತಿ, ಬೆಂಗಳೂರು ರಂಗಕರ್ಮಿ ಬಿ.ಎಸ್ ವಿದ್ಯಾರಣ್ಯ, ಭಾಗವತರು, ಸಂಘಟನೆ ಉಪಾಧ್ಯಕ್ಷ ಎಚ್.ಬಿ. ಚಂದ್ರೇಗೌಡ ಉಪಸ್ಥಿತರಿರುವರು. ಸಂಜೆ 4.30ಕ್ಕೆ ರಂಗ ಸಷ್ಟಿ ತಂಡ, ಬೆಳಗಾವಿ ಇವರು ಪ್ರಿಂಟಿಂಗ್ ಮಶೀನ್ ನಾಟಕವನ್ನು ಪ್ರಸ್ತುತಪಡಿಸಲಿದ್ದು, ಹಿರಿಯ ವಕೀಲ ಎಸ್.ಎಂ.ಕುಲಕರ್ಣಿ ನಾಟಕಕ್ಕೆ ಚಾಲನೆ ನೀಡುವರು ಎಂದು ಪ್ರಕಟಣೆ ತಿಳಿಸಿದೆ.