ಚಿಟಗುಪ್ಪ: ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ತರಲು ಈಗಿನಿಂದಲೇ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಜಾಗೃತಿಯೊಂದಿಗೆ ಸಂಘಟನೆಗೆ ಶ್ರಮಿಸಬೇಕೆಂದು ಕೆಪಿಸಿಸಿ ಕಾಯರ್ಾಧ್ಯಕ್ಷ ಈಶ್ವರ ಖಂಡ್ರೆ ಕರೆ ನೀಡಿದರು.
ಮನ್ನಾಎಖೇಳ್ಳಿ ಗ್ರಾಮದಲ್ಲಿ ಶುಕ್ರವಾರ ಬೀದರ್ ದಕ್ಷಿಣ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಮತ್ತು ಪಕ್ಷದ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸಕರ್ಾರಗಳ ಮಿತಿಮೀರಿದ ಭ್ರಷ್ಟಾಚಾರದಿಂದ ಜನ ಬೇಸತ್ತಿದ್ದಾರೆ. ಸುಳ್ಳು ಭರವಸೆ, ಜಾತಿಗಳ ಮಧ್ಯೆ ವಿಷಬೀಜ ಬಿತ್ತುವಿಕೆ, ದಿನಬಳಕೆ ವಸ್ತುಗಳ ಬೆಲೆ ಏರಿಸಿ ಜನರನ್ನು ಸಂಕಷ್ಟಕ್ಕೆ ದೂಡಲಾಗುತ್ತಿದೆ ಎಂದು ಕಿಡಿಕಾರಿದರು.
ಬಿಜೆಪಿಯವರ ದುರಾಡಳಿತ ಹಾಗೂ ಕಾಂಗ್ರೆಸ್ ಸಕರ್ಾರದ ಅವಧಿಯಲ್ಲಿ ಕೈಗೊಂಡಿರುವ ಹಲವಾರು ಜನಪರ ಯೋಜನೆಗಳ ಬಗ್ಗೆ ಮನೆ ಮನೆಗೆ ತೆರಳಿ ಜನರಿಗೆ ತಿಳಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದರು.
ಪಕ್ಷವನ್ನು ಅಧಿಕಾರಕ್ಕೆ ತಂದರೆ ಜಿಲ್ಲೆಯ ಬಿಎಸ್ಸೆಸ್ಕೆ ಪುನಶ್ಚೇತನ, ಕಾರಂಜಾ ಸಂತ್ರಸ್ತರಿಗೆ ಪರಿಹಾರ ಒದಗಿಸುವ ಭರವಸೆ ನೀಡಿದ್ದ ಬಿಜೆಪಿ ನಾಯಕರು ಈಡೇರಿಸಿದ್ದಾರೆಯೇ ಎಂದು ಪ್ರಶ್ನಿಸಿದ ಖಂಡ್ರೆ, ಬಿಎಸ್ಸೆಸ್ಕೆ ನಡೆಸಿದ ಬಿಜೆಪಿಯವರೇ ಕಾಖರ್ಾನೆ ಮೇಲೆ ಅಪಾರ ಸಾಲ ಮಾಡಿದ್ದಲ್ಲದೆ ಭಾರಿ ಅವ್ಯವಹಾರ ನಡೆಸಿದ್ದಾರೆ. ಕಬ್ಬು ಪೂರೈಸಿದ ರೈತರಿಗೆ ಹಣ ಪಾವತಿಸಿಲ್ಲ. ಇದೇನಾ ಅಚ್ಛೆ ದಿನ್ ಎಂಬು ಹರಿಹಾಯ್ದರು.
ಇದು ಚುನಾವಣೆ ವರ್ಷ. ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಜನ ಬದಲಾವಣೆ ಬಯಸಿದ್ದು, ಪಕ್ಷ ಸಹ ಇಲ್ಲಿ ಬಲಿಷ್ಠವಾಗಿದೆ. ಇಲ್ಲಿನ ಮತದಾರರು ಮೊದಲಿನಿಂದಲೂ ಕಾಂಗ್ರೆಸ್ಗೆ ಸಹಕರಿಸಿದ್ದಾರೆ ಎಂದ ಅವರು, ಜಿಲ್ಲೆಯ ಆರೂ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯಥರ್ಿಗಳನ್ನು ಗೆಲ್ಲಿಸಲು ಪಣತೊಟ್ಟು ಶ್ರಮಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಅಶೋಕ ಖೇಣಿ ಮಾತನಾಡಿ, ಕಳೆದ ಸಲ ಶಾಸಕನಾಗಿದ್ದಾಗ ಪ್ರಾಮಾಣಿಕತೆಯಿಂದ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಮುಂದೆಯೂ ಶ್ರಮಿಸಲು ಬದ್ಧ. ನಾನು ಹುಟ್ಟಿದ್ದು ಇಲ್ಲೇ. ಸತ್ತರೂ ಇಲ್ಲೇ ನನ್ನ ಸಮಾಧಿ ಇರುತ್ತದೆ. ಹೀಗಾಗಿ ಇನ್ನೊಮ್ಮೆ ಅವಕಾಶ ನೀಡುವಂತೆ ಕೋರಿದರು.
ಶಾಸಕರಾದ ರಾಜಶೇಖರ ಪಾಟೀಲ್, ರಹೀಮ್ ಖಾನ್, ವಿಧಾನ ಪರಿಷತ್ ಸದಸ್ಯರಾದ ಭೀಮರಾವ ಪಾಟೀಲ್, ಅರವಿಂದ ಅರಳಿ, ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ಪ್ರಮುಖರಾದ ಗೀತಾ ಚಿದ್ರಿ, ಆನಂದ ದೇವಪ್ಪ, ಮೀನಾಕ್ಷಿ ಸಂಗ್ರಾಮ, ದತ್ತು ಮೂಲಗೆ, ಮಲ್ಲಿಕಾಜರ್ುನ ಮಾಶೆಟ್ಟಿ, ಅಬ್ದುಲ್ ಸತ್ತಾರ್, ಬಾಬುರಾವ ತುಂಬಾ, ಇಸೂಫ್ ಅಲಿ ಜಮಾದಾರ, ನೂರೋದ್ದಿನ್, ಸುರೇಖರೆಡ್ಡಿ, ಶಿವಪುತ್ರ ಸಾದಾ, ಸಂತೋಷ ಕಮಲಾಪುರ, ಚಂದ್ರಶೇಖರ ಚನ್ನಶೆಟ್ಟಿ, ಲೋಕೇಶ ಕನ್ನಶೆಟ್ಟಿ ಇತರರಿದ್ದರು.
ರಾಜ್ಯ ಮತ್ತು ಜಿಲ್ಲೆಯಲ್ಲಿ ಕಾಂಗ್ರೆಸ್ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಸುದ್ದಿವಾಹಿನಿಗಳ ಸಮೀಕ್ಷೆ ಸಹ ಕಾಂಗ್ರೆಸ್ ಪರವಾಗಿ ಬಂದಿದೆ. ರಾಜ್ಯದಲ್ಲಿ ಶತಪ್ರತಿಶತ ಪಕ್ಷ ಅಧಿಕಾರಕ್ಕೆ ಬರಲಿದೆ. ಹೀಗಾಗಿ ಸಂಘಟನೆ ಬಲಿಷ್ಠಗೊಳಿಸಲು ಪ್ರತಿಯಬ್ಬರೂ ಶ್ರಮಿಸಬೇಕು.
| ರಹೀಮ್ ಖಾನ್, ಬೀದರ್ ಶಾಸಕ
ಬೀದರ್ ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಒಳ್ಳೆಯ ಭವಿಷ್ಯವಿದ್ದು, ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಸಂಘಟಿತರಾಗಿ ಶ್ರಮಿಸುವ ಮೂಲಕ ಗೆಲ್ಲಿಸಲು ಕಾರ್ಯಕರ್ತರು ಮತ್ತು ಮುಖಂಡರು ಶ್ರಮಿಸಬೇಕು.
| ಬಸವರಾಜ ಜಾಬಶೆಟ್ಟಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ
ಶಾಸಕರಾಗಿದ್ದಾಗ ಅಶೋಕ ಖೇಣಿ ಕ್ಷೇತ್ರದಲ್ಲಿ ಯೋಜನಾಬದ್ಧವಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಆದರೂ ಹೈಕಮಾಂಡ್ ಟಿಕೆಟ್ ಯಾರಿಗೆ ಕೊಟ್ಟರೂ ಗೆಲ್ಲಿಸಲು ಪ್ರಾಮಾಣಿಕವಾಗಿ ಕಾರ್ಯಕರ್ತರು ಶ್ರಮಿಸಬೇಕು. 2023ರ ವಿಧಾನಸಭೆ ಚುನಾವಣೆ ಸವಾಲಾಗಿ ಸ್ವೀಕರಿಸುವ ಅಗತ್ಯವಿದೆ.
| ರಾಜಶೇಖರ ಪಾಟೀಲ್, ಹುಮನಾಬಾದ್ ಶಾಸಕ