ಜಿಲ್ಲೆ

ಕಾಂಕ್ರೀಟ್ ರಸ್ತೆ ಸೇವೆಗೆ ಅರ್ಪಣೆ

ವಿರಾಜಪೇಟೆ: ನೆಹರುನಗರದ 7 ಮತ್ತು 8 ವಾರ್ಡ್‌ನಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಕಾಂಕ್ರೀಟ್ ರಸ್ತೆಯನ್ನು ಮಂಗಳವಾರ ಶಾಸಕ ಎ.ಎಸ್.ಪೊನ್ನಣ್ಣ ಬಳಕೆಗೆ ಅರ್ಪಿಸಿದರು.

ನೆಹರು ನಗರ ಬೆಟ್ಟ ಪ್ರದೇಶವಾದ್ದರಿಂದ, ಸಾಕಷ್ಟು ಸಮಸ್ಯೆಗಳಿವೆ. ಹಂತ ಹಂತವಾಗಿ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. ವಾರ್ಡ್‌ನ ಸದಸ್ಯರಾದ ದೇಚಮ್ಮ ಕಾಳಪ್ಪ, ಬೆನ್ನಿ ಅಗಸ್ಟಿನ್, ಪುರಸಭಾ ಸದಸ್ಯರಾದ ಮತಿನ್, ರಾಜೇಶ್ ಪದ್ಮನಾಭ, ಪುರಸಭೆ ಮುಖ್ಯಾಧಿಕಾರಿ ಚಂದ್ರಕುಮಾರ್ ಹಾಗೂ ವಾರ್ಡ್‌ನ ನಿವಾಸಿಗಳು ಹಾಜರಿದ್ದರು.