ಕೋಟೇರಿ ಬೊಮ್ಮಂಜಕೇರಿ-ಮೂಟೇರಿ ಸಂಪರ್ಕ ರಸ್ತೆಯ ಮರು ಡಾಂಬರೀಕರಣ ಹಾಗೂ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಾಸಕ ಕೆ.ಜಿ.ಬೋಪಯ್ಯ ಭೂಮಿಪೂಜೆ ನೆರವೇರಿಸಿದರು. 
ಜಿಲ್ಲೆ

ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಭೂಮಿಪೂಜೆ

ನಾಪೋಕ್ಲು: ಕೋಟೇರಿ ಬೊಮ್ಮಂಜಕೇರಿ-ಮೂಟೇರಿ ಸಂಪರ್ಕ ರಸ್ತೆ ಮರು ಡಾಂಬರೀಕರಣ ಹಾಗೂ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಾಸಕ ಕೆ.ಜಿ.ಬೋಪಯ್ಯ ಭೂಮಿಪೂಜೆ ನೆರವೇರಿಸಿದರು.


ಬಳಿಕ ಮಾತನಾಡಿ, ವಿಧಾನಸಭೆಯ ಕೊನೆಯ ಅಧಿವೇಶನ ಮುಗಿದಿದೆ. ಮಾರ್ಚ್ ಅಂತ್ಯದೊಳಗೆ ಕೈಗೆತ್ತಿಕೊಂಡ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು. ಕೋವಿಡ್ ಹಿನ್ನೆಲೆಯಲ್ಲಿ ಎರಡು ವರ್ಷಗಳ ಕಾಲ ಅಭಿವೃದ್ಧಿ ಕಾರ್ಯ ಸ್ಥಗಿತಗೊಂಡಿದ್ದವು. ಹಲವು ಸಂಪರ್ಕ ರಸ್ತೆಗಳು ಹಾಳಾಗಿದ್ದವು. ಇದೀಗ ರಸ್ತೆಗಳನ್ನು ಮರು ಡಾಂಬರೀಕರಣ ಮಾಡಿ ಜನರಿಗೆ ಸೌಕರ್ಯ ಒದಗಿಸಲಾಗುತ್ತದೆ ಎಂದರು.


ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರಿಯಪ್ಪ, ಮಡಿಕೇರಿ ಗ್ರಾಮಾಂತರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೋಡಿರ ಪ್ರಸನ್ನ, ತಾಲೂಕು ಬಿಜೆಪಿ ಕಾರ್ಯದರ್ಶಿ ಅಮ್ಮಂಡ ಮನು ಮಹೇಶ್, ರೈತ ಮೋರ್ಚಾ ತಾಲೂಕು ಅಧ್ಯಕ್ಷ ಶಿವ ಚಾಳಿಯಂಡ ಜಗದೀಶ್, ಗ್ರಾಪಂ ಸದಸ್ಯೆ ನೀಲಮ್ಮ, ಪ್ರಮುಖರಾದ ಅಪ್ಪಾರಂಡ ಸುಭಾಷ್ ತಿಮ್ಮಯ್ಯ,ಅಪ್ಪಾರಂಡ ಸುಧೀರ್ ಅಯ್ಯಪ್ಪ, ಅಪ್ಪಾರಂಡ ಶ್ಯಾಂ, ಕಂಗಾಂಡ ಜಾಲಿ ಪೂವಪ್ಪ, ಅಪ್ಪಾರಂಡ ಅಪ್ಪಯ್ಯ, ಬೆಳೆಗಾರ ಬಿದ್ದಾಟಂಡ ಜಿನ್ನು ನಾಣಯ್ಯ, ಸಂಪತ್, ಪುಲ್ಲೆರ ವಿಠಲ ಪಳಂಗಪ್ಪ, ಜಿಪಂ ಇಂಜಿನಿಯರ್ ಅಶೋಕ್, ಹಿರಿಯ ಇಂಜಿನಿಯರ್ ಸಂತೋಷ್ ಉಪಸ್ಥಿತರಿದ್ದರು.