ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ಜಿಲ್ಲಾಡಳಿತ ಭವನದ ಆವರಣದಲ್ಲಿಯೇ ಕಸಕ್ಕೆ ಬೆಂಕಿ, ಪ್ರಮುಖ ಹೆದ್ದಾರಿಗಳ ಪಕ್ಕದಲ್ಲಿಯೇ ತ್ಯಾಜ್ಯದ ರಾಶಿ, ದುರ್ವಾಸನೆ ಹರಡುವ ಕೊಳಚೆ... ಇಂತಹ ಪರಿಸ್ಥಿತಿಯ ವಾತಾವರಣ ಬಹುತೇಕ ಕಡೆ ಕಂಡು ಬರುತ್ತದೆ.
ಇದರ ನಡುವೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮಾತ್ರ ತ್ಯಾಜ್ಯಮುಕ್ತ ಜಿಲ್ಲೆ ಹಾಗೂ ಸ್ವಚ್ಛ ಭಾರತ್ ಅಭಿಯಾನಯದಡಿ ಸ್ವಚ್ಛತೆ ನಿರ್ವಹಣೆ ಜಪದಲ್ಲಿ ತೊಡಗಿದ್ದಾರೆ. ಗ್ರಾಪಂಗಳು ಸೇರಿ ಸ್ಥಳಿಯ ಆಡಳಿತ ಸಂಸ್ಥೆಗಳಿಗೆ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಪುರಸ್ಕಾರಗಳು ಸಿಗುತ್ತಿವೆ. ಅವ್ಯವಸ್ಥೆ ವಿಚಾರವಾಗಿ ಜನರು ಆಕ್ರೋಶ ವ್ಯಕ್ತಪಡಿಸುವುದು ಆಗಾಗ್ಗೆ ಕೇಳಿಬರುತ್ತಿದೆ.ಸರ್ಕಾರದ ನಿರ್ದೇಶನದಂತೆ ಸೆ.14ರಿಂದ "ಸ್ವಚ್ಛತಾ ಹೀ ಸೇವಾ' ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಅ.2ರ ಗಾಂಧಿ ಜಯಂತಿವರೆಗೆ ನಡೆಯುತ್ತಿದೆ. ಇದೇ ವೇಳೆ ಗ್ರಾಮೀಣ ಭಾಗದಲ್ಲಿ 5318 ಬ್ಲಾಕ್ಸ್ಪಾಟ್ಗಳನ್ನು ಗುರುತಿಸಲಾಗಿದೆ.ಈ ಪೈಕಿ 1778 ಬ್ಲಾಕ್ಸ್ಪಾಟ್ ಸ್ವಚ್ಛಗೊಳಿಸುವ ಮೂಲಕ ಸ್ಥಳಗಳನ್ನು ಕಸಮುಕ್ತ ಸ್ಥಳಗಳನ್ನಾಗಿ ಪರಿವರ್ತನೆ ಮಾಡಲಾಗಿದೆ ಎಂದು ಜಿಪಂ ಸಿಇಒ ಡಾ.ವೈ.ನವೀನ್ ಭಟ್ ತಿಳಿಸಿದ್ದಾರೆ.
ಸ್ವಚ್ಛತಾ ಹೀ ಸೇವಾ ಅಭಿಯಾನದಡಿ ಬ್ಲಾಕ್ಸ್ಪಾಟ್ ಗುರುತಿಸಿ, ಸ್ವಚ್ಛತೆ ಕೈಗೊಳ್ಳುವುದಕ್ಕೆ ಮಾತ್ರ ಸೀಮಿತವಾಗಿಲ್ಲ.ಆ ಸ್ಥಳಗಳನ್ನು ಸೌಂದಯೀರ್ಕರಣಗೊಳಿಸಲಾಗುತ್ತಿದೆ. ಈಗಾಗಲೇ ಸ್ವಚ್ಛ ಮಾಡಲಾಗಿರುವ ಸ್ಥಳಗಳಲ್ಲಿ ಮತ್ತೆ ಮತ್ತೆ ಕಸ ಹಾಕದಂತೆ ಸಿಸಿ ಕ್ಯಾಮರಾ ಅಳವಡಿಕೆ, ರ್ನಿಲಕ್ಷ$್ಯ ತೋರಿದವರಿಗೆ ದಂಡ ಹಾಕುವುದು, ಜಾಗೃತಿ ನಾಮಲಕ ಹಾಕುವುದು ಸೇರಿ ಹಲವು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.ಸ್ವಚ್ಛತೆ ಕೈಗೊಂಡಿರುವ ಸ್ಥಳಗಳಲ್ಲಿ ಹಳೇ ಟಯರ್ಗಳನ್ನು ಬಳಸಿಕೊಂಡು ಬಣ್ಣ ಬಳಿದು, ಅಲಂಕಾರ ಮಾಡಿದ ಬಳಿಕ ಗಿಡ ನೆಟ್ಟು ಬೆಳೆಸುವುದು, ಜನರಿಗೆ ಆಸನ ವ್ಯವಸ್ಥೆ ಸೇರಿ ಉತ್ತಮ ವಾತಾವರಣ ನಿರ್ಮಿಸಲಾಗುತ್ತಿದೆ. ಈಗಾಗಲೇ ಚಿಕ್ಕಬಳ್ಳಾಪುರ ತಾಲೂಕು ಕುಪ್ಪಹಳ್ಳಿ ಗ್ರಾಪಂ ವ್ಯಾಪ್ತಿಯ ಅಂಗಟ್ಟ ಸಮೀಪದ ದೊಡ್ಡಬಳ್ಳಾಪುರ&ಚಿಕ್ಕಬಳ್ಳಾಪುರ ಮುಖ್ಯರಸ್ತೆ, ಶಿಡ್ಲಟ್ಟ ತಾಲೂಕಿನ ಆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಖ್ಯರಸ್ತೆಯ ಆನೂರು ಗೇಟ್ನ ಚರಂಡಿ ಬಳಿ ಹಲವು ವರ್ಷಗಳಿಂದ ಕಸದ ಜಾಗವಾಗಿದ್ದ ರಸ್ತೆ ಬದಿಯ ಸ್ಥಳವನ್ನು ಕಸ ಮುಕ್ತ ಸ್ಥಳನ್ನಾಗಿ ಪರಿವರ್ತಿಸಲಾಗಿದೆ.
748 ಸರ್ಕಾರಿ ಸ್ಥಳಗಳ ಸ್ವಚ್ಛತೆ
ಬಸ್ ನಿಲ್ದಾಣ, ಶಾಲಾ ಕಾಲೇಜು, ಅಂಗನವಾಡಿ, ಗ್ರಾಪಂ ಕಚೇರಿ ಕಟ್ಟಡ, ಆಸ್ಪತ್ರೆ, ಸಮುದಾಯ ಭವನ ಸೇರಿ ಜಿಲ್ಲಾದ್ಯಂತ ಇಲ್ಲಿಯವರೆಗೆ 748 ಸಾರ್ವಜನಿಕ ಸ್ಥಳ ಸ್ವಚ್ಛತೆಗೆ ಗುರುತಿಸಲಾಗಿದೆ. ಇದರಲ್ಲಿ 211 ಸ್ಥಳ ಈಗಾಗಲೇ ಸ್ವಚ್ಛಗೊಳಿಸಲಾಗಿದೆ. ಈ ಅಭಿಯಾನದಲ್ಲಿ 60 ಸಾವಿರ ಜನರು ತೊಡಗಿಸಿಕೊಂಡಿದ್ದು, ಮುಂಬರುವ ಎರಡ್ಮೂರು ದಿನಗಳಲ್ಲಿ ಹಲವು ಸ್ಥಳಗಳನ್ನು ತ್ಯಾಜ್ಯ ಮುಕ್ತ ಸ್ಥಳಗಳನ್ನಾಗಿಸಲಾಗುತ್ತದೆ ಎಂದು ನವೀನ್ ಭಟ್ ತಿಳಿಸಿದ್ದಾರೆ. ಸ್ವಚ್ಛತೆ ಮತ್ತು ನೈರ್ಮಲ್ಯ ಎಂಬುದು ಸರ್ಕಾರದ ಕೆಲಸವಲ್ಲ. ಇದರಲ್ಲಿ ಪ್ರತಿಯೊಬ್ಬರ ಸಹಭಾಗಿತ್ವ ಅಗತ್ಯ. ಎಲ್ಲ ಮನೆಗಳಲ್ಲಿ ಉತ್ಪತ್ತಿಯಾಗುವ ಹಸಿ ಮತ್ತು ಒಣ ಕಸವಾಗಿ ವಿಂಗಡಿಸಿ, ಆಯಾ ದಿನದಂದು ಬರುವ ಸ್ಥಳಿಯ ಆಡಳಿತ ಸಂಸ್ಥೆಗಳ ವಾಹನಕ್ಕೆ ನೀಡಬೇಕು. ಪ್ರತಿ ತಿಂಗಳಿಗೊಮ್ಮೆ ಸುತ್ತಮುತ್ತಲ ಪರಿಸರ ಸ್ವಚ್ಛಗೊಳಿಸಲು ಎಲ್ಲರೂ ಸಹಕರಿಸಬೇಕು ಎಂದು ತಿಳಿಸಿದ್ದಾರೆ.
ಉತ್ತಮ ಸ್ವಚ್ಛತೆ ನಿರ್ವಹಣೆಯಲ್ಲಿ ಪ್ರಾಮಾಣಿಕ ಜವಾಬ್ದಾರಿ ನಿರ್ವಹಣೆ ಅಗತ್ಯ. ಆದರೆ ಇದು ಪ್ರಚಾರದಲ್ಲಿ ಮಾತ್ರ ಕಂಡು ಬರುತ್ತದೆ. ಕೆಲ ಕಾರ್ಯಕ್ರಮಗಳ ಆಯೋಜನೆ ವೇಳೆ ೂಷಣೆಗಳಿಗೆ ಸೀಮಿತವಾಗುತ್ತದೆ.ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಜನರ ದೃಢ ಸಂಕಲ್ಪ, ಸ್ಪಂದನೆಯ ಮೂಲಕ ಅನೈರ್ಮಲ್ಯ ಸಮಸ್ಯೆ ದೂರವಾಗಿಸಬೇಕಾಗಿದೆ.
| ಆನಂದ್, ಪರಿಸರಪ್ರೇಮಿ ಚಿಕ್ಕಬಳ್ಳಾಪುರ