ಜಿಲ್ಲೆ

ಕವಿಗೋಷ್ಠಿ ಕಾರ್ಯಕ್ರಮ 16ಕ್ಕೆ

ಬೀದರ್: ಶ್ರೀ ಕನಕ ಕನ್ನಡ ಸಾಂಸ್ಕೃತಿಕ ಸಂಘದಿಂದ ಕುಂಬಾರವಾಡ ರಸ್ತೆಯ ಕರುನಾಡು ಸಾಂಸ್ಕೃತಿಕ ಭವನದಲ್ಲಿ ಜು.16ರಂದು ಸಂಜೆ 5ಕ್ಕೆ ಕವಿಗೋಷ್ಠಿ ಮತ್ತು ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಉದ್ಘಾಟಿಸುವರು. ಸಾಹಿತಿ ಸಂಜೀವಕುಮಾರ ಅತಿವಾಳೆ ಆಶಯ ನುಡಿ ಆಡುವರು. ಅನೀಲಕುಮಾರ ಹಾಲಹಳ್ಳಿ, ಡಾ.ಶರಣಪ್ಪ ಮಲಗೊಂಡ, ದೇವಪ್ಪ ಎಂ.ಚಾಂಬೋಳೆ, ವೀರೇಶ್ವರಿ ಮೂಲಗೆ ಇತರರು ಪಾಲ್ಗೊಳ್ಳುವರು. ಕಲಾವಿದರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡುವರು ಎಂದು ಸಂಘದ ಅಧ್ಯಕ್ಷ ಸಂತೋಷಕುಮಾರ ಜೋಳದಾಪಕೆ ತಿಳಿಸಿದ್ದಾರೆ.