ಜಿಲ್ಲೆ

ಕವಾಡಿಗರಹಟ್ಟಿ ಪ್ರಕರಣದ ಕಾರಣ ಬಹಿರಂಗ ಪಡಿಸಿ

ಚಿತ್ರದುರ್ಗ: ಕಲುಷಿತ ನೀರು ಸೇವನೆಯಿಂದ ನಗರದ ಕವಾಡಿಗರಹಟ್ಟಿಯಲ್ಲಿ ಉಂಟಾದ ಸಾವು-ನೋವು ದುರಂತಕ್ಕೆ ಒಂದು ವರ್ಷ ಕಳೆದಿದೆ. ಆದರೂ ಪ್ರಕರಣಕ್ಕೆ ಕಾರಣ ಏನೆಂಬುದರ ಸತ್ಯ ಜನರಿಗೆ ತಿಳಿದಿಲ್ಲ ಎಂದು ಅಮ್‌ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಬಿ. ಜಗದೀಶ್ ಹೇಳಿದರು. ದುರಂತದಲ್ಲಿ ಆರು ಜನ ಬಡವರು ಅಸು ನೀಗಿದ್ದಾರೆ. ದುರ್ಘಟನೆಗೆ ಕಲುಷಿತ ನೀರಿನ ಸೇವನೆ ಕಾರಣವೋ ಅಥವಾ ಯಾರಾದರೂ ಎಸಗಿದ್ದ ಕೃತ್ಯವೋ ಎಂಬುದನ್ನು ಪತ್ತೆ ಮಾಡಿ ಜನರಿಗೆ ತಿಳಿಸಬೇಕಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸೂಕ್ತ ಕ್ರಮ ವಹಿಸಬೇಕೆಂದು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ರಾಜಕಾರಣಿಗಳು, ಸರ್ಕಾರ ಇಲ್ಲಿನ ಜನರಿಗೆ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕಾಳಜಿ ತೋರಿಲ್ಲ. ಇಲ್ಲಿನ ಜನರ ಮತ ಬೇಕೇ ಹೊರತು, ಅವರ ಹಿತ ಬೇಕಾಗಿಲ್ಲ. ಈವರೆಗೂ ಯಾರನ್ನೂ ಬಂಧಿಸಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಡೆಂೆ ಪ್ರಕರಣಗಳು ಹೆಚ್ಚಾಗುತ್ತಿವೆ. ಜಿಲ್ಲಾಡಳಿತ ಆರೋಗ್ಯ ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕಿದೆ. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ ಎಂದರು.
ಎಎಪಿ ಜಿಲ್ಲಾ ಕಾರ‌್ಯದರ್ಶಿ ರಾಮಣ್ಣ ಮಾತನಾಡಿ,ಈ ಪ್ರಕರಣ ಕುರಿತಂತೆ ಸರ್ಕಾರದಿಂದ ಸಮಪರ್ಕವಾಗಿ ಉತ್ತರ ಸಿಕ್ಕಿಲ್ಲ ಎಂದರು. ತನ್ವಿರ್, ಜಬೀವುಲ್ಲಾ, ಲೋಕೇಶಪ್ಪ ಇದ್ದರು.