ರಾಯಬಾಗ: ಬಾಗಿ ನಾಡಿನಲ್ಲಿ ಸಾಹಿತ್ಯ, ಸಂಸ್ಕೃತಿ ನಿರಂತರವಾಗಿ ಬೆಳೆಯಲು ಇಲ್ಲಿನ ಶಿಕ್ಷಕರೇ ಮೂಲ ಕಾರಣರಾಗಿದ್ದಾರೆ ಎಂದು ತಹಸೀಲ್ದಾರ್ ಸುರೇಶ ಮುಂಜೆ ಹೇಳಿದರು.
ಪಟ್ಟಣದ ಶಾರದಾ ಟ್ಯುಟೋರಿಯಲ್ಸ್ ಸಭಾಂಗಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಂಘರ್ಷ ಸಾಹಿತ್ಯಕೂಟದ ೧೭ನೇ ಪ್ರಕಟಣೆಯಾದ ಸಾಹಿತಿ ಶಿವಾನಂದ ಬೆಳಕೂಡ ಅವರ ಕನಸು ಕಾಯುವ ಹಾದಿ ಕವನ ಸಂಕಲನ ಲೋಕಾರ್ಪಣೆಗೊಳಿಸಿ ಮಾತನಾಡಿ, ಯುವ ಸಾಹಿತಿಗಳ ಬೆಳವಣಿಗೆಗೆ ಇಲ್ಲಿ ಪೂರಕ ವಾತಾವರಣ ಸೃಷ್ಟಿಯಾಗಿದೆ. ಹಿರಿಯ ಸಾಹಿತಿ ಶಿವಾನಂದ ಬೆಳಕೂಡ ಅವರು ಯುವ ಕವಿಗಳಿಗೆ ಮಾರ್ಗದರ್ಶಕರಾಗಿದ್ದಾರೆ. ಅವರ ಕವನ ಸಂಕಲನ ಎಲ್ಲ ಕನ್ನಡ ಹೃದಯಗಳಿಗೆ ಮುಟ್ಟಲಿ ಎಂದು ಹಾರೈಸಿದರು.
ಸಾಹಿತಿ ಡಾ.ಕೆ.ಎನ್.ದೊಡ್ಡಮನಿ, ಬಸವರಾಜ ಕಟ್ಟಿಮನಿ, ಪ್ರತಿಷ್ಠಾನ ಅಧ್ಯಕ್ಷ ಡಾ.ಯಲ್ಲಪ್ಪ ಹಿಮ್ಮಡಿ ಮಾತನಾಡಿದರು. ಸಾಹಿತಿ ಶಿವಾನಂದ ಬೆಳಕೂಡ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಾಹಿತಿ ಡಾ.ಪಿ.ಜಿ.ಕೆಂಪಣ್ಣವರ ಅಧ್ಯಕ್ಷತೆ ವಹಿಸಿದ್ದರು. ಪಪಂ ಅಧ್ಯಕ್ಷ ಅಶೋಕ ಅಂಗಡಿ, ಕಸಾಪ ಅಧ್ಯಕ್ಷ ರವೀಂದ್ರ ಪಾಟೀಲ, ಸುರೇಖಾ ಬೆಳಕೂಡ, ಪುಷ್ಪಾ ಜ್ಯೋತಿಹೊಸುರ, ಕಲಾದಂಪತಿ ಬಾಬುರಾವ ನಡೋಣಿ, ಆಶಾರಾಣಿ ನಡೋಣಿ, ಎಂ.ಬಿ.ಹೂಗಾರ, ಡಾ.ಬಿ.ಎಂ.ಪಾಟೀಲ, ಎಚ್.ಕೆ.ಗುರವ, ವಿ.ಡಿ.ಸಾಲಿ, ಡಾ.ಗಾಯತ್ರಿ ಬಾನೆ, ಸುಖದೇವ ಕಾಂಬಳೆ, ಸುರೇಶ ಚೌಗಲಾ, ಡಿ.ಎಚ್.ಯಲ್ಲಟ್ಟಿ, ಸಾಗರ ಝೆಂಡೆನ್ನವರ, ಶ್ರೀಶೈಲ ಹೊಸೂರ, ಶಂಕರ ಕೊಡತೆ ಇದ್ದರು. ಮನೋಹರ ಹೊಸಮನಿ ಸ್ವಾಗತಿಸಿದರು. ಜ್ಯೋತ್ತೆಪ್ಪ ರುಪ್ಯಾಳೆ ನಿರೂಪಿಸಿದರು. ಟಿ.ಎಸ್.ವಂಟಗೂಡಿ ವಂದಿಸಿದರು.