ಜಿಲ್ಲೆ

ಕಳ್ಳರ ಬಂಧನ, ರು.25 ಲಕ್ಷ ಮೌಲ್ಯದ ಸ್ವತ್ತು ವಶಕ್ಕೆ

ರಮೇಶ ಮೇಳಕುಂದಾ

ಕಲಬುರಗಿ: ಜಿಲ್ಲೆಯ ನಾಲ್ಕು ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿನ ನಾಲ್ಕು ಬೇರೆ ಬೇರೆ ಕಳ್ಳತನ ಪ್ರಕರಣಗಳನ್ನು ಬೇಧಿಸಿ ಸುಮಾರು ೨೫ ಲಕ್ಷ ರು. ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆದಿದ್ದು, ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾ-ಕಾರಿ ಅಡ್ಡೂರು ಶ್ರೀನಿವಾಸುಲು ತಿಳಿಸಿದರು.

ಕಾಳಗಿ ಪೊಲೀಸ್​ ಠಾಣೆ ವ್ಯಾಪ್ತಿಯ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಹುಂಡಿ ಕಳ್ಳತನ ಮಾಡಿದ ಕುಖ್ಯಾತ ಕಳ್ಳನಾದ ಕಾಳಗಿ ನಿವಾಸಿ ಶೇರ್​ಅಲಿ ಮಹ್ಮದ್​ ರಶೀದ್​ನನ್ನು ಬಂಧಿಸಲಾಗಿದೆ. ಇತನಿಗೆ ಸಹಕಾರ ನೀಡಿದ ಕೈಲಾಸ ನಾಗಪ್ಪ ಮಳಗಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಂಧಿತನಿಂದ ೧೫ ಸಾವಿರ ರೂ.ನಗದು ಹಾಗೂ ಒಂದು ಬೈಕ್​ ವಶಕ್ಕೆ ಪಡೆಯಲಾಗಿದೆ. ರೂಢಿಗತ ಕಳ್ಳತನ, ದರೋಡೆ ಆರೋಪಿಯಾಗಿದ್ದು, ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಎಂಟು ಪ್ರಕರಣ ದಾಖಲಾಗಿದೆ. ರಟಕಲ್​ ವ್ಯಾಪ್ತಿಯಲ್ಲಿ ಬೈಕ್​ನಲ್ಲಿ ಬರುತ್ತಿದ್ದ ವಿಜಯವಾಣಿ ಚಿಂಚೋಳಿ ವರದಿಗಾರ ಶಿವರಾಜ ವಾಲಿ ಅವರಿಗೆ ಜೀವ ಬೆದರಿಕೆ ಹಾಕಿ, ಹಣ ಹಾಗೂ ಮೊಬೈಲ್​ ದರೋಡೆ ಮಾಡಿದ್ದ. ಪ್ರಕರಣವೊಂದರಲ್ಲಿ ೨೦೨೧ರಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ. ಮೊಬೈಲ್​ ಬಳಸದೇ, ಮನೆಗೆ ಬಾರದೆ ಓಡಾಡುತ್ತಿದ್ದ ಈತನ ಬಂಧನ ಸವಾಲಾಗಿತ್ತು. ಅದನ್ನು ನಿಗಾ ಇರಿಸಿ ಬಂಧಿಸಲಾಗಿದೆ ಎಂದು ತಿಳಿಸಿದರು.

ಡಿವೈಎಸ್​ಪಿ ಶಂಕರಗೌಡ ಪಾಟೀಲ್​ ನೇತೃತ್ವದ ಕಾಳಗಿ ಸಿಪಿಐ ಜಗದೇವಪ್ಪ ಪಾಳಾ, ಎಎಸ್​ಐ ಶ್ರೀನಿವಾಸ ರೆಡ್ಡಿ ಹಾಗೂ ಸಿಬ್ಬಂದಿ ಅಂಬರೀಶ, ಸಂಗಮೇಶ, ಮೌನೇಶ, ಮಂಜು, ಶಿವರಾಜ, ಮಾರುತಿ, ಶ್ರೀಶೈಲ, ಜಗನ್ನಾಥ ಅವರ ತಂಡ ಆರೋಪಿಯನ್ನು ಬಂಧಿಸಿದೆ ಎಂದು ಹೇಳಿದರು.

ಅಪರ ಪೊಲೀಸ್​ ವರಿಷ್ಠಾಧಿಕಾರಿ ಮಹೇಶ ಮೇಣ್ಣನವರ ಇದ್ದರು.

ಮದುವೆ ಮನೆಯಲ್ಲಿ ಆಭರಣ ಕದ್ದ ಕಳ್ಳಿ ಅರೆಸ್ಟ್​: ಜೇರ‍್ಗಿ ತಾಲೂಕಿನ ಆಂದೋಲಾದ ಮಹೇಶ ಪಾಟೀಲ್​ ಮನೆಯಲ್ಲಿ ಮೇ ೧೭ರಂದು ಮದುವೆ ಮನೆಯಲ್ಲಿ ಮಂಗಳಸೂತ್ರ ಸೇರಿ ಇತರ ಆಭರಣ ಕಳ್ಳತನ ಮಾಡಿದ ಸಂಬಂಧಿಯನ್ನು ಜೇರ‍್ಗಿ ಪೊಲೀಸರು ಬಂಧಿಸಿದ್ದಾರೆ. ಮದುವೆಗೆ ಬಂದಿದ್ದ ಕಟ್ಟಿಸಂಗಾವಿ ಗ್ರಾಮದ ರೇಣುಕಾ ಗುಳೇದ್​ ಬಂಧಿಸಿ, ಚಿನ್ನದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್​ಪಿ ಅಡ್ಡೂರು ಶ್ರೀನಿವಾಸುಲು ಹೇಳಿದರು. ಮದುವೆ ಮನೆಯಲ್ಲಿ ಎಲ್ಲರೂ ಮಲಗಿದ್ದಾಗ ಪರ‍್ವತಿ ಎಂಬುವವರ ಮೂರು ತೊಲೆ ಮಂಗಳಸೂತ್ರ ಹಾಗೂ ವಿಜಯಲಕ್ಷಿ$್ಮ ಶಂಕರಗೌಡ ಪಾಟೀಲ್​ ಅವರ ೧೪ ತೊಲೆ ಆಭರಣ ಕಳ್ಳತನ ಮಾಡಲಾಗಿತ್ತು. ಮದುವೆಗೆ ಆಗಮಿಸಿದ ಎಲ್ಲರ ವಿಚಾರಣೆ ನಡೆಸಿದಾಗ ಸಾಕ್ಷಿ ದೊರೆತಿರಲಿಲ್ಲ. ಸಂಬಂಧಿಕರ ಹಣಕಾಸಿನ ವ್ಯವಹಾರ ತನಿಖೆ ನಡೆಸಿದಾಗ ರೇಣುಕಾ ಅವರದು ಚೀಟಿ ವ್ಯವಹಾರ, ಸಾಲ ಹಾಗೂ ಹೆಚ್ಚುವರಿ ರ‍್ಚಿನ ಹಿನ್ನೆಲೆ ವಿಚಾರಿಸಿದಾಗ ತಪ್ಪೊಪ್ಪಿಕೊಂಡಿದ್ದಾರೆ ಎಂದು ಹೇಳಿದರು.

ಕಳ್ಳತನ ಮೂವರು ಆರೋಪಿಗಳ ಬಂಧನ: ನರೋಣಾ ಪೊಲೀಸ್​ ಠಾಣೆ ವ್ಯಾಪ್ತಿಯ ಲಾಡ್​ ಚಿಂಚೋಳಿ ಕ್ರಾಸ್​ ಹತ್ತಿರದ ಬಿರಿಯಾನಿ ಹೊಟೇಲ್​ನಿಂದ ಸಾಮಾನುಗಳ ಕದ್ದ ಹಾಗೂ ಲಾಡ್​ ಚಿಂಚೋಳಿ ಗ್ರಾಮದಲ್ಲಿ ಮನೆಯ ಕೀಲಿ ಮುರಿದು ಕಳ್ಳತನ ಮಾಡಿದ ಇಬ್ಬರು ಆರೋಪಿಗಳನ್ನು ಬಂಸಲಾಗಿದೆ ಎಂದು ಎಸ್​ಪಿ ಹೇಳಿದರು. ಕಮಸೂರು ತಾಂಡಾದ ನಿವಾಸಿ ಶಿವಾನಂದ ರ‍್ಜುನ ಕಾಳೆನನ್ನು ಬಂಧಿಸಿ ಹೊಟೇಲ್​ನಿಂದ ಕಳ್ಳತನ ಮಾಡಿದ್ದ ೮,೮೦೦ ರೂ.ಗಳ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈತ ಎರಡು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ ಎಂದರು. ಮನೆಯ ಕೀಲಿ ಮುರಿದು ಕಳ್ಳತನ ಮಾಡಿದ ಆರೋಪಿ ಲಾಡ್​ ಚಿಂಚೋಳಿ ಗ್ರಾಮದ ಸಿದ್ದಾರಾಮ ಗಿರಿಮಲ್ಲನನ್ನು ಬಂಧಿಸಿ, ೧.೨೦ ಲಕ್ಷ ರೂ. ಮೌಲ್ಯದ ವಶ್ತು ವಶಕ್ಕೆ ಪಡೆಯಲಾಗಿದೆ. ಸಾವಳೇಶ್ವರ ಗ್ರಾಮದ ಕಿರಾಣಿ ಅಂಗಡಿಯಲ್ಲಿ ಕಳ್ಳತನ ಮಾಡಿದ ಆರೋಪಿ ಪಡಸಾವಳಿ ಗ್ರಾಮದ ಬಸವರಾಜ ಘೋಡಕೆಯನ್ನು ಬಂಧಿಸಿ, ೭೦ ಸಾವಿರ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.