ಕಲಬುರಗಿ: ವಿವಿಧ ಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಆರೋಪಿ ವಾಡಿ ನಿಜಾಮಗೇಟ್ನ ಶೇಖಪಾಷಾ ಬಾಬಾ ಮೈನೋದ್ದಿನ್ನನ್ನು ಬಂಧಿಸಿ, ಆತನಿಂದ 4.40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ತಿಳಿಸಿದರು.
2024 ಮೇ 24ರಂದು ಚಿತ್ತಾಪುರ ಪಟ್ಟಣದಲ್ಲಿ ಎಂಡಿ ಸಮೀಯೋದ್ದೀನ್ ಅವರ ಹಾರ್ಡ್ವೇರ್ ಅಂಗಡಿಯ ಶೆಟರ್ ಮುರಿದು ಎರಡುವರೆ ಸಾವಿರ ರೂ. ಹಣ ಕಳ್ಳತನ ಪ್ರಕರಣದಲ್ಲಿ 11 ತಿಂಗಳಿಂದ ತಲೆ ಮರೆಸಿಕೊಂಡಿದ್ದ. ಇದೀಗ ಆತನನ್ನು ಬಂಧಿಸಿದ್ದು, ವಿವಿಧ ಪ್ರಕರಣದಲ್ಲಿ ಭಾಗಿಯಾಗಿರುವುದು ಬಾಯಿ ಬಿಟ್ಟಿದ್ದಾನೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎರಡುವರೆ ಸಾವಿರ ರೂ. ಪ್ರಕರಣದ ಬೆನ್ನತ್ತಿದ್ದಾಗ ವಾಡಿ ರೈಲ್ವೆ ಠಾಣೆಯಲ್ಲಿ ಕಂಡು ಬಂದ ತಕ್ಷಣ, ಬಂಧಿಸಿ ವಿಚಾರಣೆ ನಡೆಸಿದಾಗ ಅಪರಾಧಿ ಶೇಖ್ಪಾಷಾನೂ ಚಿತ್ತಾಪುರ ಠಾಣೆ, ವಾಡಿ ಠಾಣೆ, ವಾಡಿ ರೈಲ್ವೆ ಠಾಣೆಯಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದು, ಪತ್ತೆಯಾಗಿದೆ. ಬಾಗೋಡಿ ಗ್ರಾಮದಲ್ಲಿ ಮನೆ ಕಳ್ಳತನ, ಚಿತ್ತಾಪುರ ಬಸ್ಸ್ಟಾ$ಂಡ್ನಲ್ಲಿ ಅಜ್ಜಿ ಕೊರಳಲ್ಲಿನ ಸರಗಳ್ಳತನ ಸೇರಿ ಒಟ್ಟು 32 ಪ್ರಕರಣದಲ್ಲಿ ಈತ ಭಾಗಿಯಾಗಿರುವುದ ಪತ್ತೆಯಾಗಿದೆ ಎಂದು ತಿಳಿಸಿದರು.
ಬಂಧಿತನಿಂದ ಒಟ್ಟು ನಾಲ್ಕು ಪ್ರಕರಣದಲ್ಲಿ 42 ಗ್ರಾಂ ಬಂಗಾರ, 100 ಗ್ರಾಂ ಬೆಳ್ಳಿ, 10 ಸಾವಿರ ರೂ. ನಗದು ಸೇರಿ ಒಟ್ಟು 4,40,400 ರೂ. ಮೌಲ್ಯದ ಚಿನ್ನಾಭರಣ, ಹಣ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.
ಡಿವೈಎಸ್ಪಿ ಶಂಕರಗೌಡ ಪಾಟೀಲ್, ಸಿಪಿಐ ಚಂದ್ರಶೇಖರ ತಿಗಡಿ ಮಾರ್ಗದರ್ಶನದಲ್ಲಿ ಪಿಎಸ್ಐಗಳಾದ ಶ್ರೀಶೈಲ ಅಂಬಾಟಿ, ಚಂದ್ರಾಮಪ್ಪ, ಸಿಬ್ಬಂದಿ ಬಸವರಾಜ, ದತ್ತಾತ್ರೇಯ, ಸವಿಕುಮಾರ, ರವಿಕುಮಾರ, ಮಂಜುನಾಥ, ವೀರೇಶ, ಸಿದ್ದರಾಮೇಶ ಅವರ ತಂಡ ಕಾರ್ಯನಿರ್ವಹಿಸಿದ್ದಕ್ಕೆ ಎಸ್ಪಿ ಶ್ಲಾನೆ ವ್ಯಕ್ತಪಡಿಸಿದರು.