ಜಿಲ್ಲೆ

ಕಳ್ಳತನವಾಗಿದ್ದ ಒಂಬತ್ತು ಮೊಬೈಲ್​ ವಾಪಸ್​

ರಮೇಶ ಮೇಳಕುಂದಾ

ಕಲಬುರಗಿ: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ಕಳ್ಳತನವಾದ, ಮರೆತು ಹೋದ ಹಾಗೂ ಕಾಣೆಯಾದ ೩೧ ಮೊಬೈಲ್ ಫೋನ್‌ಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ ಹಾಕೆ ತಿಳಿಸಿದರು.
ನಗರದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜಿ¯್ಲÉಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಕಳ್ಳತನವಾದ, ಮರೆತ ಹಾಗೂ ಕಾಣೆಯಾದ ಮೊಬೈಲ್ ಫೋನ್‌ಗಳನ್ನು ಕೇಂದ್ರ ದೂರ ಸಂಪರ್ಕ ಇಲಾಖೆ ಜಾರಿಗೆ ತಂದಿರುವ ಸಿಇಐಆರ್ ತಂತ್ರಾAಶದಡಿ ಮೊಬೈಲ್‌ಗಳನ್ನು ಪತ್ತೆ ಮಾಡಲಾಗಿದೆ ಎಂದರು.
ಜಿ¯್ಲÉಯ ಅಧಿಕಾರಿಗಳು, ಸಿಬ್ಬಂದಿ ನೆರವಿನಿಂದ ಇದುವರೆಗೆ ನೂತನ ತಂತ್ರಜ್ಞಾನದ ಸಹಾಯದಿಂದ ೨೭೬ ಮೊಬೈಲ್ ಪೋನ್‌ಗಳನ್ನು ಪತ್ತೆ ಮಾಡಿ ಆಯಾ ಮೊಬೈಲ್ ವಾರಸುದಾರರಿಗೆ ಹಿಂದಿರುಗಿಸಲಾಗಿದೆ ಎಂದು ಹೇಳಿದರು.
ಮಂಗಳವಾರ ಸದರಿ ತಂತ್ರಾAಶದಡಿಯಲ್ಲಿ ೩೧ ಮೊಬೈಲ್ ಫೋನ್, ಕಳುವಾದ ೯.೩೦ ಲಕ್ಷ ರೂ. ಮೌಲ್ಯದ ಮೊಬೈಲ್ ಪತ್ತೆ ಮಾಡಿ ಅವುಗಳ ವಾರಸುದಾರರಿಗೆ ಹಿಂದಿರುಗಿಸಲಾಗಿದೆ. ಮೊಬೈಲ್ ಫೋನ್‌ಗಳ ಪತ್ತೆಗಾಗಿ ಸಿಇಎನ್ ಠಾಣೆ ನಿರೀP್ಷÀಕ ಶಿವಶಂಕರ ಸಾಹು, ಸಿಪಿಸಿ ಅಶೋಕ, ಸಿದ್ದಪ್ಪ, ಉಮೇಶ ಸೇರಿ ಸಿಬ್ಬಂದಿ ಕಾರ್ಯ ಶ್ಲಾಘಿಸಿದರು.