ಜಿಲ್ಲೆ

ಕಳ್ಳತನ ಪ್ರಕರಣದಲ್ಲಿ, ಏಳು ಜನ ಬಂಧನ

ಬಳ್ಳಾರಿ : ಇತ್ತೀಚೆಗೆ ನಡೆದ ಕಳ್ಳತನ ಪ್ರಕರಣದ ಆರೋಪದಡಿ ಠಾಣೆಯ ಮುಖ್ಯ ಪೊಲೀಸ್ ಪೇದೆ ಸೇರಿ, ಏಳು ಜನ ಆರೋಪಿಗಳನ್ನು ಬಂಧಿಸಿ, 22. 41 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಡಾ. ವಿ. ಜೆ. ಶೋಭಾರಾಣಿ ಹೇಳಿದರು.
ನಗರದ ಎಸ್ಪಿ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬ್ರೂಸ್‌ಪೇಟೆ ಠಾಣೆಯ ಮುಖ್ಯ ಪೊಲೀಸ್ ಪೇದೆ ಮೆಹಬೂಬ್, ನಗರದ ನಿವಾಸಿಗಳಾದ ಆರೀಫ್, ತೌಸೀಫ್, ಜಾವೀದ್, ಪೀರ, ದಾದಾ ಕಲಂದರ್, ಮುಸ್ತಾಕ್ ಅಲಿ ಬಂಧಿತರು. ಸೆ. 12 ರಂದು ಇಲ್ಲಿನ ಟ್ಯಾಂಕ್‌ಬಂಡಿ ಬಳಿ ಬಂಗಾರದ ಅಂಗಡಿಯ ಮಾಲೀಕ ರಘು ಎಂಬುವನು ನಗದು ಹಾಗೂ ಚಿನ್ನಭರಣ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಆರೋಪಿಗಳು ಕಾರದ ಪುಡಿ ಎರಚಿ ಅವರ, ಬಳಿಯಿದ್ದ 22. 99 ಲಕ್ಷ ರೂ. ನಗದು ಹಾಗೂ 318 ಗ್ರಾಂ ಬಂಗಾರವನ್ನು ಕಳ್ಳತನ ಮಾಡಿದ್ದರು. ಈ ಕುರಿತು ಬ್ರೂಸ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಗರದಲ್ಲಿ ಅನುಮಾಸ್ಪದವಾಗಿ ಓಡಾಡುತ್ತಿದ್ದ ಆರೀಫ್‌ನನ್ನು ಪೊಲೀಸರು ವಿಚಾರಿಸದ ವೇಳೆ ಪರಿಚಯಸ್ಥರಿಂದ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಮುಖ್ಯ ಪೊಲೀಸ್ ಪೇದೆಯ ಮನೆಯಲ್ಲಿ 9 ಲಕ್ಷ ರೂ. ನಗದು ಹಾಗೂ ಉಳಿದ ಆರೋಪಿಗಳ ಬಳಿ ನಗದು, ವಸ್ತು ಸೇರಿ ಒಟ್ಟಾರೆ 22. 41 ಲಕ್ಷ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಕಳ್ಳರ ಜತೆ ಪೊಲೀಸರು ಇಂತಹ ಪ್ರಕರಣದಲ್ಲಿ ಭಾಗಿಯಾದರೆ ಕ್ರಮ ಜರುಗಿಸಲಾಗುವುದು ಎಂದು ಪೊಲೀಸರಿಗೆ ಎಚ್ಚರಿಕೆ ನೀಡಿದರು.
ಏನಿದು ಪ್ರಕರಣ : ರಘು ಎಂಬುವವ ಸೆ. 12ರಂದು ಬೆಳಗಿನ ಜಾವ ಇಲ್ಲಿನ ಟ್ಯಾಂಕ್ ಬಂಡಿ ಬಳಿ ಬೈಕ್‌ನಲ್ಲಿ 22. 99 ಲಕ್ಷ ರೂ. ನಗದು ಮತ್ತು 318 ಗ್ರಾಂ ಬಂಗಾರ ತೆಗೆದುಕೊಂಡು ಹೋಗುತ್ತಿದ್ದರು. ಅವರಿಗೆ ತೌಸೀಫ್, ಪೀರ್, ದಾದಾ ಖಲಂದರ್, ಮುಸ್ತಕ್ ಅಲಿ ಆರೋಪಿಗಳು ಕಣ್ಣಿಗೆ ಕಾರದ ಪುಡಿ ಎರಚಿ ಸಿನಿಮೀಯ ರೀತಿ ಕಳ್ಳತನ ಎಸಗಿದ್ದರು. ಈ ಕಳ್ಳತನಕ್ಕೆ ಬ್ರೂಸ್‌ಪೇಟೆ ಠಾಣೆಯ ಮುಖ್ಯ ಪೊಲೀಸ್ ಪೇದೆ ಸಾಥ್ ನೀಡಿದ್ದ ಸತ್ಯ ತನಿಖೆ ವೇಳೆ ಬಯಲಾಗಿದೆ. ಹೆಡ್ ಕಾನ್ಸಟೇಬಲ್ ಮಹಬೂಬ್ ಪಾಷ ಮತ್ತು ಪ್ರಮುಖ ಆರೋಪಿ ಆರೀಫ್ ಆತ್ಮೀಯ ಗೆಳೆಯರಾಗಿದ್ದರು. ಆ ಸಲುಗೆಯಿಂದಲೇ ದರೋಡೆ ಮಾಡುವ ಸಂಚು ರೂಪಿಸಿದ್ದರು. ಕಳ್ಳತನ ಹಣದಲ್ಲಿ ಮೆಹಬೂಬ್ 9 ಲಕ್ಷ ರೂ. ಹಣ ಪಡೆದಿದ್ದಾರೆ. ಮುಖ್ಯ ಆರೋಪಿ ಆರೀಫ್ ಈಗಾಗಲೇ ಗೃಹರಕ್ಷಕದಳದಿಂದ ಟರ್ಮನೆಟಡ್ ಆಗಿದ್ದರು. ಮುಖ್ಯ ಪೊಲೀಸ್ ಪೇದೆ ಮೆಹಬೂಬ್ ಅಮಾನತ್ತು ಮಾಡುವುದಲ್ಲದೆ, ಬಂಧಿಸಲಾಗಿದೆ.