ಜಿಲ್ಲೆ

ಕಳೆದು ಹೋಗಿದ್ದ 30 ಲಕ್ಷ ರೂ.ಮೌಲ್ಯದ 100 ಮೊಬೈಲ್‌ಗಳು ಪತ್ತೆ

ಸದೇಶ್ ಕಾರ್ಮಾಡ್

ಮೈಸೂರು: ಕಳೆದು ಹೋಗಿದ್ದ 30 ಲಕ್ಷ ರೂ. ಮೌಲ್ಯದ 100 ಮೊಬೈಲ್‌ಗಳನ್ನು ಪತ್ತೆ ಹಚ್ಚುವಲ್ಲಿ ನಗರದ ಸೆನ್ ಪೊಲೀಸರು ಯಶಸ್ವಿಯಾಗಿದ್ದು, ಬುಧವಾರ ಸಂಬಂಧಿಸಿದವರಿಗೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಗರ ಪೊಲೀಸ್ ಆಯುಕ್ತ ಬಿ. ರಮೇಶ್ ಹಸ್ತಾಂತರಿಸಿದರು.

ಮೊಬೈಲ್ ಕಳೆದುಕೊಂಡವರು ಆನ್‌ಲೈನ್ ಮೂಲಕ ಕೆಎಸ್‌ಪಿ ಆಪ್ಲಿಕೇಶನ್‌ನಲ್ಲಿ ಈ ಲಾಸ್ಟ್ ದೂರು ನೀಡಿದ್ದರು. ದೂರು ಸ್ವೀಕರಿಸಿದ ಸೆನ್ ಪೊಲೀಸರು ಕಳೆದು ಹೋದ ಫೋನ್‌ಅನ್ನು ತಂತ್ರಜ್ಞಾನದ ಸಹಾಯದಿಂದ ಪತ್ತೆ ಹಚ್ಚಿದ್ದಾರೆ. ಮೊಬೈಲ್ ಹಸ್ತಾಂತರ ಸಂದರ್ಭ ಡಿಸಿಪಿ ಎಂ. ಮುತ್ತುರಾಜು, ದೇವರಾಜ ಎಸಿಪಿ ಶಾಂತಮಲ್ಲಪ್ಪ, ಸೆನ್ ಠಾಣೆ ಇನ್ಸ್‌ಪೆಕ್ಟರ್ ಯೋಗಾನಂಜಪ್ಪ, ಎಸ್‌ಐಗಳಾದ ಪೂಜಾ ಹತ್ತರಕಿ, ಸಿದ್ದೇಶ್ ಇದ್ದರು.