ಹಾಸನ: ಕಳೆದ ಹೋದ ಮೊಬೈಲ್ ಪತ್ತೆ ಮಾಡಲು ಜಿಲ್ಲಾ ಪೊಲೀಸ್ ಇಲಾಖೆ ಜಾರಿಗೆ ತಂದಿರುವ ನೂತನ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ ಮಾಡಲಾದ 148 ಮೊಬೈಲ್‌ಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಮ್ಮ ಕಚೇರಿಯಲ್ಲಿ ಬುಧವಾರ ವಾರಸುದಾರಿಗೆ ವಿತರಿಸಲಾಯಿತ್ತು.
ಕಳ್ಳತನವಾಗಿದ್ದ ಮೊಬೈಲ್ ಪತ್ತೆಗೆ ಪೊಲೀಸ್ ಇಲಾಖೆಯಿಂದ ಕಳೆದ ಏಪ್ರಿಲ್ 26 ಂದು ಹೊಸ ಅಪ್ಲಿಕೇಶನ್ ಬಿಡುಗಡೆ ಮಾಡಲಾಗಿತು. ಕಳೆದುಹೋದ ತಮ್ಮ ಮೊಬೈಲ್ ಬಗ್ಗೆ ತುದಿಯಲ್ಲೇ ದೂರು ದಾಖಲಿಸುವ ವ್ಯವಸ್ಥೆಗೆ ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿತ್ತು.
ತಾಲೂಕು, ಜಿಲ್ಲೆ, ಹೊರ ಜಿಲ್ಲೆ, ಹೊರ ರಾಜ್ಯಗಳಲ್ಲಿಯೂ ಮೊಬೈಲ್‌ಗಳನ್ನು ಪತ್ತೆ ಹಚ್ಚಿ ಅವುಗಳನ್ನು ವಾಸುದಾರಿಗೆ ತಲುಪಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಶ್ರಮ ವಹಿಸುತ್ತಿದ್ದು, ಪೊಲೀಸ ಜನಪರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚು ಗೆ ವ್ಯಕ್ತವಾಗಿದೆ
ಈ ಬಗ್ಗೆ ಮಾತನಾಡಿದ ಹರಿರಾಂ ಶಂಕರ್, ಜಿಲ್ಲೆಯ ವಿವಿಧ ಠಾಣೆಗಳ ವ್ಯಪ್ತಿಯಲ್ಲಿ 1418 ಮೊಬೈಲ್ ಕಳೆದುಕೊಂಡಿರುವ ಬಗ್ಗೆ ಸಾರ್ವಜನಿಕರು ದೂರು ದಾಖಲಿಸಿದ್ದು, ಇದರಲ್ಲಿ ಇಂದು 148 ಮೊಬೈಲ್ ಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಗುತ್ತಿದೆ. ಇನ್ನೂ 200 ಮೊಬೈಲ್‌ಗಳು ಪತ್ತೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಕಳೆದುಕೊಂಡಿದ್ದ ಈ ಮೊಬೈಲ್ ಗಳನ್ನು ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗು ರಾಜ್ಯದ ನಾನಾ ಜಿಲ್ಲೆಗಳಿಂದ ಪತ್ತೆ ಹಚ್ಚಿ ವಶಪಡಿಸಿಕೊಳ್ಳಲಾಗಿದೆ. ಇನ್ನು ಹಲವು ಮೊಬೈಲ್‌ಗಳು ಜಾಖರ್ಂಡ್ ರಾಜಸ್ಥಾನ ಸೇರಿ ಹೊರರಾಜ್ಯಗಳಲ್ಲಿ ಇರುವುದು ಪತ್ತೆಯಾಗಿದ್ದು, ಅಲ್ಲಿಗೆ ನಮ್ಮ ಪೊಲೀಸ್ ತಂಡವನ್ನು ಕಳುಹಿಸಿಕೊಟ್ಟು ಅವುಗಳನ್ನು ಶೀಘ್ರದಲ್ಲೇ ವಶಕ್ಕೆ ಪಡೆಯಲಾಗುವುದು ಎಂದು ಹೇಳಿದರು.
ಪತ್ತೆಯಾಗಿರುವ ಒಟ್ಟು 148 ಮೊಬೈಲ್‌ಗಳ ಪೈಕಿ ವಿವೋ ಕಂಪೆನಿಯ 74 ಮೊಬೈಲ್, ಸಾಮ್ ಸಾಂಗ್-25, ರೆಡ್ಮಿ-33, ಒನ್ ಪ್ಲಸ್-11, ಹಾನರ್-2, ನೋಕಿಯಾ-3 ಕಂಪನಿಯಗಳಾದ್ದಗಿವೆ. ಸಿಇಐಆರ್ ಪೋರ್ಟಲ್ ಲಿಕ್ ಆಗಿರುವ ಮೊಬೈಲ್ ಗಳ ಬಗ್ಗೆ ಮಾಹಿತಿ ಇದ್ದು, ಪತ್ತೆಗಾಗಿ ಪ್ರಯತ್ನ ಮುಂದುವರೆಸಲಾಗಿದೆ ಎಂದರು.
ಮೊಬೈಲ್‌ಗಳ ಪತ್ತೆಗಾಗಿ ಶ್ರಮಿಸಿದ ಜಿಲ್ಲೆಯ ಸಿಇಎನ್ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಜಗದೀಶ್ ಹಾಗೂ ಸಿಬ್ಬಂದಿಗಳು ಮತ್ತು ಜಿಲ್ಲಾ ಪೊಲೀಸ್ ಕಚೇರಿಯ ತಾಂತ್ರಿಕ ವಿಭಾಗದ ಪೀರ್ ಖಾನ್ ಮತ್ತು ಸಿಬ್ಬಂದಿಗಳ ಕಾರ್ಯವನ್ನು ಇದೆ ವೇಳೆ ಶ್ಲಾಘಿಸಿದರು.
ಸುದ್ದಿಗೋಷ್ಠಿಯಲ್ಲಿ ಡಿವೈಎಸ್ಪಿ ಮಂಜುನಾಥ್, ಸಿಇಎನ್ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಜಗದೀಶ್ ಇದ್ದರು.