ಕಳಸ: ಕಳಸ ರೋಟರಿ ಅಧ್ಯಕ್ಷರಾಗಿ ಎಚ್.ಜಿ.ಮಹೇಂದ್ರ ಹಾಗೂ ಕಾರ್ಯದರ್ಶಿಯಾಗಿ ಎನ್.ವಿ.ವಿಶಾಲ್ ನೋಟದ ಅಧಿಕಾರ ಸ್ವೀಕರಿಸಿದರು.
ಪದಗ್ರಹಣ ಸಮಾರಂಭದಲ್ಲಿ ರೋಟರಿ ಸಹಾಯಕ ಗವರ್ನರ್ ರಾಜಗೋಪಾಲ ಜೋಷಿ ಅವರು ಮಹೇಂದ್ರ ಮತ್ತು ವಿಶಾಲ್ ಅವರಿಗೆ ಅಧಿಕಾರ ಹಸ್ತಾಂತರ ನೆರವೇರಿಸಿದರು. ರಾಜಲಕ್ಷ್ಮೀ ಜೋಷಿ, ರಾಘವ, ಡಾ. ವಿಕ್ರಮ್ ಪ್ರಭು, ಕಾರ್ತಿಕ್ ಶಾಸ್ತ್ರಿ, ಕಿರಣ್ ಶೆಟ್ಟಿ, ಪ್ರಸನ್ನ ಹೆಬ್ಬಾರ್, ಸುಹಾನ್ ಜೈನ್, ಸಂತೋಷ್ ಪೂಜಾರಿ, ಮನು, ಆದೀಶ್, ಆಂಟೋನಿ, ಗಿರಿಜಾಶಂಕರ ಜೋಷಿ, ಕೆ.ಕೆ.ಬಾಲಕೃಷ್ಣ ಭಟ್, ಪಣೀಶ್, ರಿತೇಶ್, ಬ್ರಹ್ಮದೇವ ಪದಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದರು.
ನಂತರ ಮಾತನಾಡಿದ ನೂತನ ಅಧ್ಯಕ್ಷ ಮಹೇಂದ್ರ, ನೂತನ ವರ್ಷದಲ್ಲಿ ಆರೋಗ್ಯ, ಶಿಕ್ಷಣ ಸೇರಿದಂತೆ ಮಾದರಿ ಚಟುವಟಿಕೆ ಮೂಲಕ ಸಮಾಜಮುಖಿ ಕೆಲಸ ಮಾಡುವ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದರು.
ರೋಟರಿ ನಿರ್ಗಮಿತ ಅಧ್ಯಕ್ಷ ಕೆ.ಆರ್.ಪ್ರಭಾಕರ್ ಮಾತನಾಡಿ, ಕಳೆದ ಒಂದು ವರ್ಷದ ಅವಧಿಯಲ್ಲಿ ಶಕ್ತಿಮೀರಿ ಕೆಲಸ ಮಾಡಿದ್ದೇನೆ. ಶಾಸಕಿ ನಯನಾ ಮೋಟಮ್ಮ ನೆರವಿನಿಂದ ಕಲಶೇಶ್ವರ ದೇವಸ್ಥಾನದ ಕಲಾ ಮಂದಿರಕ್ಕೆ ಮೇಲ್ಛಾವಣಿ ಕಾಮಗಾರಿ ನಡೆಸಿ ಶಾಶ್ವತ ಕೆಲಸ ಮಾಡಿದ ಖುಷಿ ಇದೆ ಎಂದರು.
ಹೊರನಾಡಿನ ಜಿ.ಭೀಮೇಶ್ವರ ಜೋಷಿ ಮಾತನಾಡಿ, ಕಳಸ ರೋಟರಿ ಕಳೆದ 25 ವರ್ಷಗಳಲ್ಲಿ ಮಾಡಿರುವ ಸಾಮಾಜಿಕ ಚಟುವಟಿಕೆಯ ವಿಸ್ತಾರ ದೊಡ್ಡದು. ಸಮಾಜಮುಖಿಯಾಗಿ ಈ ಸಂಸ್ಥೆ ಕಳಸದಲ್ಲಿ ಅನುಪಮ ಸೇವೆ ಸಲ್ಲಿಸುತ್ತಿದೆ ಎಂದು ಶ್ಲಾಸಿದರು.
ಇದೇ ವೇಳೆ ಇನ್ನರ್‌ವ್ಹೀಲ್ ಅಧ್ಯಕ್ಷರಾಗಿ ಶ್ರೀವಾಣಿ ಸುಗಮ್, ಕಾರ್ಯದರ್ಶಿಯಾಗಿ ನಿತ್ಯಾ ಸಂದೀಪ್ ಅಧಿಕಾರ ಸ್ವೀಕರಿಸಿದರು. ಲೀನಾ ಅಭಿನಂದನ್, ಸ್ಮಿತಾ ಮಹೇಂದ್ರ, ನಳಿನಿ ಪ್ರಸನ್ನ, ಮಾಳವಿಕಾ ಪ್ರಭು, ಶ್ರುತಿ ಪಣೀಶ್, ಉಷಾ ಕುಮಾರ್, ಸಂಧ್ಯಾ ರಿತೇಶ್ ಪದಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಹೊರನಾಡು ದೇವಸ್ಥಾನದ ವ್ಯವಸ್ಥಾಪಕ ಶೇಷಾದ್ರಿ, ಕಳಸ ಎಜುಕೇಶನ್ ಸಂಸ್ಥೆ ಕಾರ್ಯದರ್ಶಿ ಗೋಪಿನಾಥ ಪೈ, ಕೃಷಿಕ ಶ್ರೀಕಾಂತ್ ಹೆಬ್ಬಾರ್ ಅವರನ್ನು ಸನ್ಮಾನಿಸಲಾಯಿತು. ಜೋನಲ್ ಲೆಫ್ಟಿನೆಂಟ್ ಎಂ.ಸಿ.ಯೋಗೀಶ್, ನಿರ್ಗಮಿತ ಕಾರ್ಯದರ್ಶಿ ಪಿ.ಎ.ಕುಮಾರಸ್ವಾಮಿ ಇದ್ದರು.