ಜಿಲ್ಲೆ

ಕಳವು ಅಪರಾಧಿಗೆ ಕಾರಾಗೃಹ ಶಿಕ್ಷೆ

ಚಿತ್ರದುರ್ಗ: ಮನೆಯೊಂದರಲ್ಲಿ ಅಂದಾಜು 2.68 ಲಕ್ಷ ರೂ.ಮೌಲ್ಯದ ಚಿನ್ನದ ಅಭರಣಗಳನ್ನು ಕಳವು ಮಾಡಿದ್ದ ಅಪರಾಧಿಗೆ ನ್ಯಾಯಾಲಯ ಒಂ ದು ವರ್ಷ,ಆರು ತಿಂಗಳ ಜೈಲು ಶಿಕ್ಷೆ ಹಾಗೂ 3 ಸಾವಿರ ರೂ.ದಂಡ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ.

ಮದಕರಿಪುರದ ಮನೆಯೊಂದರಲ್ಲಿ 2022ರ ಜುಲೈ 3ರಂದು ಕಳವು ಮಾಡಿದ್ದ ತಿಮ್ಮೇಶ ಶಿಕ್ಷೆಗೆ ಒಳಗಾದ ಅಪರಾಧಿ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಬಡಾವಣೆ ಠಾಣೆ ಪಿಐ ಬಿ.ಜಿ.ಶಂಕರಪ್ಪ,ಕೋರ್ಟ್‌ಗೆ ಜಾರ್ಜ್‌ಶೀಟ್ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಪ್ರಧಾನ ಹಿರಿಯ ಸಿವಿಲ್ ಮತ್ತು ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶೆ ಡಿ.ಮಮತಾ ಅವರು,ಅಪರಾಧಿಗೆ ಶಿಕ್ಷೆ,ದಂಡ ಹಾಗೂ ದಂಡ ಕಟ್ಟಲು ವಿಫಲವಾದಲ್ಲಿ ಮತ್ತೆ 30 ದಿನಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅ ಭಿಯೋಜಕ ಸಿ.ಮಂಜುನಾಥ್ ವಾದಿಸಿದ್ದರು.