ಜಿಲ್ಲೆ

ಕಳ್ಳಿಪುರ ಪಟ್ಟದ ಮಠದ ಬಸವ ಗೋಪುರ ಉದ್ಘಾಟನೆ

ತಿ.ನರಸೀಪುರ: ತಾಲೂಕಿನ ಕಳ್ಳಿಪುರ ಗ್ರಾಮದ ಪಟ್ಟದ ಮಠದ ಬಸವ ಗೋಪುರವನ್ನು ತುಮಕೂರಿನ ಸಿದ್ಧಗಂಗಾಮಠದ ಸಿದ್ದಲಿಂಗ ಸ್ವಾಮೀಜಿ ಉದ್ಘಾಟಿಸಿದರು.


ಜನರು ಭಕ್ತಿಭಾವದಿಂದ ಧಾರ್ಮಿಕತೆಗೆ ಹೆಚ್ಚು ಒತ್ತು ನೀಡಿದಾಗ ಗ್ರಾಮಗಳ ಅಭಿವೃದ್ಧಿ ಸಾಧ್ಯವಾಗುತ್ತದೆ. ಅಲ್ಲದೆ ಶಾಂತಿ ನೆಲೆಸುತ್ತದೆ ಎಂದರು.
ಕಳ್ಳಿಪುರ ಪಟ್ಟದ ಮಠಾಧ್ಯಕ್ಷ ಚನ್ನಬಸವ ಸ್ವಾಮೀಜಿ ಮಾತನಾಡಿ, ಗ್ರಾಮ ವಿದ್ಯೋದಯ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅವರು ನೀಡಿರುವ 5 ಲಕ್ಷ ರೂ. ಅನುದಾನದಡಿ ಗೋಪುರ ನಿರ್ಮಾಣವಾಗಿದೆ. ಶ್ರೀಮಠಕ್ಕೆ ಹಲವಾರು ಕೊಡುಗೆಯನ್ನು ನೀಡಿದ್ದಾರೆ ಎಂದು ತಿಳಿಸಿದರು.

ಎಂಎಲ್ ಹುಂಡಿ ವಿರಕ್ತ ಮಠಾಧೀಶ ಗೌರಿಶಂಕರ ಸ್ವಾಮೀಜಿ, ಮುಡುಕನಪುರದ ಷಡಕ್ಷರಿ ದೇಶಿಕೇಂದ್ರ ಸ್ವಾಮೀಜಿ, ದರವಳ್ಳಿ ಪಾರಮಾರ್ಥ ಗವಿಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಬಿಲಿಗೆರೆಹುಂಡಿ ಮಠದ ಸ್ವಾಮೀಜಿ, ಸರಗೂರು ಮಠಾಧ್ಯಕ್ಷ ಬಸವರಾಜ ಶ್ರೀೀಗಳು, ಗ್ರಾಮದ ಮುಖಂಡರಾದ ಗೌಡ್ರು ಶಿವಮಲ್ಲಪ್ಪ, ಕುರಿ ಮಹದೇವಪ್ಪ, ಕುಮಾರ, ರೈತ ಮುಖಂಡ ಮಹಾದೇವಸ್ವಾಮಿ, ಗ್ರಾಮದ ಮುಖಂಡರು ಇದ್ದರು.