ಜಿಲ್ಲೆ

ಕಳಪೆ ಬಿತ್ತನೆ ಬೀಜದಿಂದ ಸೋಯಾಬೀನ್​ ಹಾಳು

ಬೈಲಹೊಂಗಲ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕೇಂದ್ರ ಮಾಜಿ ಸಚಿವ ಬಾಬಾಗೌಡ ಪಾಟೀಲ ಅವರು ಸ್ಥಾಪಿಸಿದ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದಿಂದ ಪಟ್ಟಣದಲ್ಲಿ ಶುಕ್ರವಾರ ಬಹತ್​ ಪ್ರತಿಭಟನಾ ಮೆರವಣಿಗೆ ನಡೆಸಿ ಎಸಿ ಕಚೇರಿಗೆ ತೆರಳಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಮಾಜಿ ಸಚಿವ ಶಶಿಕಾಂತ ನಾಯಕ, ಅಧ್ಯಕ್ಪ ಮಲ್ಲಿಕಾರ್ಜುನ ವಾಲಿ, ಜಿಲ್ಲಾಧ್ಯಕ್ಪ ಮಲ್ಲಿಕಾರ್ಜುನ ಹುಂಬಿ, ಮುಖಂಡರಾದ ವಿಠ್ಠಲ ಯಾಸನ್ನವರ, ರು ಶೀಗಿಹಳ್ಳಿ ಮಾತನಾಡಿ, ಬೆಳಗಾವಿ ಜಿಲ್ಲಾದ್ಯಂತ ಸೋಯಾಬೀನ್​ ಕಾಂಡ ಕೊರಕ ರೋಗದಿಂದ ನಾಶವಾಗಿದ್ದು, ಸಂಸ್ಥೆಗಳಿಂದ ಕಳಪೆ ಬಿತ್ತನೆ ಬೀಜ ವಿತರಿಸಲಾಗಿದೆ. ಯೂರಿಯಾ ಗೊಬ್ಬರ ಸಾಕಷ್ಟು ಇಲ್ಲದರಿಂದ ರೈತರು ಅಲೆದಾಡುವಂತಾಗಿದೆ ಎಂದು ಆರೋಪಿಸಿದರು.

ಬೆಳೆ ವಿಮೆ ಕಟ್ಟಿಸಿಕೊಂಡ ವಿಮೆ ಕಂಪನಿಯವರು ರೈತರಿಗೆ ಮೋಸ ಮಾಡುತ್ತಿದ್ದು, ಜಿಲ್ಲೆಯ ರೆತರೊಡನೆ ಮಾತುಕತೆಗೆ ಕರೆಯಿಸಿ ಬೆಳೆ ವಿಮೆ ಪರಿಹಾರ ಮಂಜೂರು ಮಾಡಬೇಕು. 60ವರ್ಷ ಮೇಲ್ಪಟ್ಟ ರೈತರಿಗೆ 5 ಸಾವಿರ ರೂ. ಪಿಂಚಣಿ ೂಷಿಸಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾ ಉಪಾಧ್ಯಕ್ಪ ಬಸವರಾಜ ಡೊಂಗೆಗಾಂವಿ, ಬಸವರಾಜ ಹಣ್ಣಿಕೇರಿ, ಮಹೇಶ ಕಾದ್ರೊಳ್ಳಿ, ರುದ್ರಪ್ಪ ಆರೇರ, ಆನಂದ ಪಾಟೀಲ, ಬಸವರಾಜ ಹಿತ್ತಲಮನಿ, ಆಶೋಕ ಮತ್ತಿಕೊಪ್ಪ, ಅಣ್ಣಪ್ಪ ಗುಮತಿ, ಸುರೇಶ ಸಂಪಗಾವಿ, ವಿಠ್ಠಲ ಇಂಚಲ, ಶಂಕರೆಪ್ಪ ಕಡಕೋಳ, ಶ್ರೀಶೆಲ ಬೋರಕನವರ, ಶಂಕರೆಪ್ಪ ಸುಣಗಾರ, ಪರಮೇಶ್ವರ ಕಟ್ಟಿಮನಿ, ಗೋಪಾಲ ಅಕ್ಕಿ, ರುದ್ರಪ್ಪ ಹಾಲಗಿಮರ್ಡಿ, ಸುರೇಶ ಪಗಡಿ, ಅಖಿಲಸಾಬ್​ ಮುನವಳ್ಳಿ, ದುಂಡಯ್ಯ ಕುಲಕರ್ಣಿ ಹಾಗೂ ಇತರರಿದ್ದರು.