ಜಿಲ್ಲೆ

ಕಳಪೆ ಬಿತ್ತನೆ ಬೀಜ ನೀಡಿದ ಕಂಪನಿ ಮೇಲೆ ಕ್ರಮವಾಗಲಿ

ಸವದತ್ತಿ: ಕೃಷಿ ಇಲಾಖೆಯಿಂದ ವಿತರಿಸಿದ ಕಂಪನಿಯೊಂದರ ಗೋವಿನ ಜೋಳದ ಬಿತ್ತನೆ ಬೀಜಗಳು ಕಳಪೆಯಾಗಿದ್ದು, ಕಂಪನಿ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ಹಸಿರು ಸೇನೆ ರೆತ ಸಂಟನೆಯಿಂದ ಸೋಮವಾರ ತಹಸೀಲ್ದಾರ್​ ಮಲ್ಲಿಕಾರ್ಜುನ ಹೆಗ್ಗಣ್ಣವರ ಅವರಿಗೆ ಮನವಿ ಸಲ್ಲಿಸಲಾಯಿತು.

ರೆತ ಮುಖಂಡ ಸುರೇಶ ಸಂಪಗಾವಿ ಮಾತನಾಡಿ, ರೆತರಿಗೆ ಉತ್ತಮ ಗುಣಮಟ್ಟದ ಬೀಜ ಪೂರೆಕೆಯಾದರೆ ಗುಣಮಟ್ಟದ ಬೆಳೆ ಬೆಳೆಯಲು ಸಾಧ್ಯ. ಬೀಜ ನೀಡುವ ಕಂಪನಿಯೇ ಮೋಸ ಮಾಡಿದರೆ ರೆತರ ಗತಿ ಏನು ಎಂದು ಪ್ರಶ್ನಿಸಿದರು. ತಾಲೂಕಿನ ಅಸುಂಡಿ ಗ್ರಾಮದಲ್ಲಿ ಜರ್ಸಿ ಕಂಪನಿಯ ಗೋವಿನ ಜೋಳ ಬಿತ್ತಿದ್ದು, ದಂಟಿಗೆ 4 ರಿಂದ 5 ತೆನೆ ಹೊಂದಿದೆ. ಆದರೆ ಯಾವುದೇ ಕಾಳು ಬಂದಿಲ್ಲ. ತಣ ಕಂಪನಿ ಏಜೆಂಟನಿಗೆ ದೂರು ನೀಡಿದರೆ ಬೇಜವಾಬ್ದಾರಿಯಿಂದ ವರ್ತಿಸಿದ್ದಾನೆ. ರೆತರಿಗೆ ಈ ರೀತಿ ಮೋಸ ಆಗದಂತೆ ಕೃಷಿ ಇಲಾಖೆ ಕ್ರಮ ವಹಿಸಬೇಕು. ಸುಳ್ಳು ಭರವಸೆ ನೀಡುವ ಕಂಪನಿಗಳಿಗೆ ಕಡಿವಾಣ ಹಾಕುವುದು ಅವಶ್ಯ. ಆ ಕಂಪನಿ ಮೇಲೆ ಕ್ರಮ ತೆಗೆದುಕೊಂಡು ರೆತರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.

ಕಷಿ ಸಹಾಯಕ ನಿರ್ದೇಶಕ ಶಿವಪ್ರಕಾಶ ಪಾಟೀಲ ಮಾತನಾಡಿ, ಕಳಪೆ ಬೀಜ ಪೂರೆಕೆ ಕುರಿತು ರೆತರೊಂದಿಗೆ ಅಂಗಡಿಗೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಯಾವುದೇ ಕಾರಣಕ್ಕೂ ರೆತರಿಗೆ ಅನ್ಯಾಯವಾಗದಂತೆ ಸೂಕ್ತ ಕ್ರಮವಹಿಸಲಾಗುವುದು ಎಂದರು.

ರೈತರಾದ ಬಸವರಾಜ ಬಿಜ್ಜೂರ, ಜಗದೀಶ ತೋಟಗಿ, ಸಿದ್ದಪ್ಪ ಪಟ್ಟಣಶೆಟ್ಟಿ, ನಿಂಗಪ್ಪ ಗಡಾದ, ನಾಗಪ್ಪ ಯಮನೂರ, ಬಸವಣ್ಣೆಪ್ಪ ಕಬ್ಬೂರ ಇತರರಿದ್ದರು.