ಸುರಪುರ ಪಾಲಿಟೇಕ್ನಿಕ್ ಕಾಲೇಜು ಆವರಣದಲ್ಲಿ ಪ್ರಯೋಗಾಲ ಕಾಮಗಾರಿಗೆ ಶನಿವಾರ ಶಾಸಕ ರಾಜಾ ವೇಣುಗೋಪಾಲ ನಾಯಕ ಅಡಿಗಲ್ಲು ನೆರವೇರಿಸಿದರು. ವಿಠ್ಠಲ ಯಾದವ, ಪ್ರಕಾಶ ಗುತ್ತೇದಾರ್, ರಾಜಾ ವಾಸುದೇವ ನಾಯಕ, ಅಬುಲ್ ಗಫುರ್ ನಗನೂರಿ ಇತರರಿದ್ದರು. 
ಜಿಲ್ಲೆ

ಕಳಪೆ ಕಾಮಗಾರಿಯಾದರೆ ಸಹಿಸಲ್ಲ

ಸುರಪುರ: ತಾಲೂಕಿನಲ್ಲಿ ನಡೆಯುವ ಪ್ರತಿಯೊಂದು ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಹಾಗೊಂದು ವೇಳೆ ಕಳಪೆಯಾದರೆ ಸಹಿಸುವುದಿಲ್ಲ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.

ನಗರದ ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿ ಶನಿವಾರ ಪ್ರಯೋಗಾಲಯಗಳ ಕಟ್ಟಡ ಕಾಮಗಾರಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ನೆಲ ಮಹಡಿಯಲ್ಲಿ 1.57 ಕೋಟಿ ರೂ. ವೆಚ್ಚದಲ್ಲಿ ಮೂರು ಪ್ರಯೋಗಾಲಯ ನಿರ್ಮಾಣ ಹಾಗೂ ಮೊದಲ ಮಹಡಿಯಲ್ಲಿ 59.54 ಲಕ್ಷ ರೂ. ವೆಚ್ಚದಲ್ಲಿ 2 ಪ್ರಯೋಗಾಲಯ ನಿರ್ಮಿಸಲಾಗುತ್ತಿದ್ದು, ಪ್ರತಿಯೊಂದು ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಎಂದು ಹೇಳಿದರು.

ನಗರದ ಕುಂಬಾರಪೇಟೆ ಕೋಳೂರಪ್ಪ ದೇವಸ್ಥಾನದ ಹತ್ತಿರ ಕನಕ ಭವನ, ರಂಗAಪೇಟೆಯ ಜಿವ್ಹೇಶ್ವರ ಕಲ್ಯಾಣಮಂಟಪದಲ್ಲಿ ಸಮುದಾಯ ಭವನ ಮತ್ತು ತಿಮ್ಮಾಪುರ ಮುಖ್ಯರಸ್ತೆಯಲ್ಲಿ ಸಿಡಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ವಿಠ್ಠಲ್ ಯಾದವ್, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ರಾಜಾ ವಾಸುದೇವ ನಾಯಕ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ಗುತ್ತೇದಾರ್, ಮಲ್ಲಣ್ಣ ಮುಧೋಳ ಸಾಹುಕಾರ, ಸುಗೂರೇಶ ವಾರದ್, ಅಬ್ದುಲ್ ಗಫೂರ್ ನಗನೂರಿ, ಪೌರಾಯುಕ್ತ ಜೀವನ ಕಟ್ಟಿಮನಿ, ಪ್ರಾಚಾರ್ಯ ಶ್ರೀಕಾಂತ ಜಿ.ಕೆ, ರಾಮನಗೌಡ, ಅಪ್ಪರಾವ್ ನಾಯಕ ಇತರರಿದ್ದರು.