ಜೇವರ್ಗಿ: ಪಟ್ಟಣದ ಜನತೆಗೆ ಸಮರ್ಪಕ ಕುಡಿಯುವ ನೀರು ಸರಬರಾಜು ಮಾಡುವ ಉz್ದೆÃಶದಿಂದ 2 ಕೋಟಿ ರೂ. ವೆಚ್ಚದಲ್ಲಿ ಪೈಪ್‌ಲೈನ್ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಇದರಿಂದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಂತಾಗಲಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆದ ಶಾಸಕ ಡಾ.ಅಜಯಸಿಂಗ್ ತಿಳಿಸಿದರು.
ಬಸವೇಶ್ವರ ವೃತ್ತದ ಬಳಿಕ ಕರ್ನಾಟಕ ನಗರ ನೀರು ಸರಬುರಾಜು ಹಾಗೂ ಒಳಚರಂಡಿ ಮಂಡಳಿಯಿAದ 2 ಕೋಟಿ ರೂ. ವೆಚ್ಚದ ಪೈಪ್‌ಲೈನ್ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಮಾತನಾಡಿ, ರz್ದÉÃವಾಡಗಿ ಪೆಟ್ರೋಲ್ ಬಂಕ್‌ನಿAದ ಬಸವೇಶ್ವರ ವೃತ್ತದವರೆಗಿನ ಮುಖ್ಯರಸ್ತೆಯ ಎರಡು ಬದಿಯಲ್ಲಿ ಪೈಪ್‌ಲೈನ್ ಅಳವಡಿಸಲಾಗುವುದು. 2 ತಿಂಗಳ ಅವಧಿಯಲ್ಲಿ ಕೆಲಸ ಪೂರ್ಣಗೊಳಿಸಬೇಕು. ಕಳಪೆ ಕಾಮಗಾರಿ ನಡೆದರೆ ಸಂಬAಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದ ಎಂದು ಎಚ್ಚರಿಕೆ ನೀಡಿದರು.
ಪ್ರಮುಖರಾದ ರಾಜಶೇಖರ ಸೀರಿ, ಕಾಶಿರಾಯಗೌಡ ಯಲಗೋಡ, ಶಾಂತಪ್ಪ ಕೂಡಲಗಿ, ಅಬ್ದುಲ್ ರಹಿಮಾನ್ ಪಟೇಲ್, ಷಣ್ಮುಖಪ್ಪ ಹಿರೇಗೌಡ, ಮಹಿಮೂದ್ ಪಟೇಲ್, ಬಾಪುಗೌಡ ಪಾಟೀಲ್ ಕಲ್ಲಹಂಗರಗಿ, ಮಹಿಬೂಬ್ ಶಾನವಾಲೆ, ಬಶೀರ್ ಸಾಬ್ ಇನಾಮದಾರ್, ತಿಪ್ಪಣ್ಣ ಗುಂಡಗುರ್ತಿ, ಗುರುಲಿಂಗಯ್ಯ ಯನಗುಂಟಿ, ಇಜಾಜ್ ನಮಾಜಿ, ಭೀಮರಾಯ ನಗನೂರ, ಮಲ್ಲಣ್ಣ ಕೊಡಚಿ, ವಿಶಾಲ ಮುಚ್ಚಂಡೆ, ವಸಂತ ನರಿಬೋಳ, ಮಲ್ಲಿಕಾರ್ಜುನ ದಿನ್ನಿ, ಲಕ್ಷö್ಮಣ ಗುಬ್ಯಾಡ, ಮರೆಪ್ಪ ಸರಡಗಿ, ದೇವಿಂದ್ರ ಕಲ್ಲಹಂಗರಗಿ ಇತರರಿದ್ದರು.