ಜಿಲ್ಲೆ

ಕಲ್ಲುಸಂಕ ಅಭಿವೃದ್ಧಿಯ ರೂಪುರೇಷೆ ಚರ್ಚೆ

ವಿಜಯವಾಣಿ ಸುದ್ದಿಜಾಲ ಸಿದ್ದಾಪುರ: ತಾಲೂಕಿನ ಕೋರ್ಲಕೈ ಗ್ರಾಪಂ ವ್ಯಾಪ್ತಿಯ ಮಳವಳ್ಳಿ ಸಮೀಪದ ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಲ್ಲುಸಂಕದ ಸಂರಕ್ಷಣೆ ಹಾಗೂ ಅದರ ಅಭಿವೃದ್ಧಿಗಾಗಿ ಸಹ್ಯಾದ್ರಿ ಪಾರಂಪರಿಕ ತಾಣಗಳ ಅಭಿವೃದ್ಧಿ ನಿಗಮ 20 ಲಕ್ಷ ರೂ. ಅನುದಾನ ಮಂಜೂರಿ ಮಾಡಿದೆ.

ಸಹ್ಯಾದ್ರಿ ಪಾರಂಪರಿಕ ತಾಣಗಳ ಅಭಿವೃದ್ಧಿ ನಿಗಮದ ಕಾರ್ಯದರ್ಶಿ ಪೂರ್ಣಿಮಾ ಅವರು ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಅದರ ಸಂರಕ್ಷಣೆ ಹಾಗೂ ಅಭಿವೃದ್ಧಿಯ ರೂಪುರೇಷಗಳ ಕುರಿತು ಸ್ಥಳೀಯರೊಂದಿಗೆ ಸಮಾಲೋಚಿಸಿದರು. ಪಿಡಿಒ ಶಿವಕುಮಾರ, ಸ್ಥಳೀಯರಾದ ಶ್ರೀನಿವಾಸ ಮಡಿವಾಳ ಹೆಗ್ಗೆಕೊಪ್ಪ, ತಿಮ್ಮಪ್ಪ ಕಟ್ಯನ್ ಜಿಡ್ಡಿ, ಗುರುಮೂರ್ತಿ ಹೆಗಡೆ ಮಳವಳ್ಳಿ, ರಾಜಾರಾಮ ಹೆಗಡೆ ಮಳವಳ್ಳಿ, ಲಕ್ಷ್ಮೀನಾರಾಯಣ ಹೆಗಡೆ ಕಲಗಾರ ಇದ್ದರು.