ಜಿಲ್ಲೆ

ಕಲ್ಲು ಸಾಗಿಸುತ್ತಿದ್ದ ಟಿಪ್ಪರ್ ಬೆಂಕಿಗಾಹುತಿ

ರಾಜಣ್ಣ

ಗುಂಡ್ಲುಪೇಟೆ: ಬೇಗೂರು ಸಮೀಪ ಸೋಮವಾರ ರಾತ್ರಿ ಕ್ರಷರಿಗೆ ಕಲ್ಲು ಕೊಂಡೊಯ್ಯುತ್ತಿದ್ದ ಅಧಿಕ ತೂಕದ ಟಿಪ್ಪರ್ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಭಸ್ಮವಾಗಿದೆ.

ತೆರಕಣಾಂಬಿಯ ಕರಿಕಲ್ಲು ಗಣಿಗಳಿಂದ ನಿರುಪಯುಕ್ತ ಕಲ್ಲನ್ನು ಬೇಗೂರಿಗೆ ಕೊಂಡೊಯ್ಯುವಾಗ ಐಟಿಐ ಕಾಲೇಜು ಸಮೀಪ ಬ್ರೇಕ್ ಲೈನರ್ ಉಜ್ಜಿದ ಪರಿಣಾಮ ಚಕ್ರದಲ್ಲಿ ಕಾಣಿಸಿಕೊಂಡ ಬೆಂಕಿ ಟಿಪ್ಪರ್ ಆವರಿಸಿದೆ.

ಕೂಡಲೇ ಸ್ಥಳಕ್ಕೆ ಆಗಮಿಸಿದ ಬೇಗೂರು ಪೊಲೀಸರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಅಗ್ನಿಶಾಮಕ ದಳದ ಸಿಬ್ಬಂದಿ ಸುಮಾರು ಒಂದು ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದರು. ಘಟನೆಯಲ್ಲಿ ಟಿಪ್ಪರ್‌ನ ಎರಡು ಟೈರುಗಳು ಸಿಡಿದುಹೋಗಿವೆ.