ಜಿಲ್ಲೆ

ಕಲ್ಲಪ್ಪಣ್ಣ ಮಗೆಣ್ಣವರ ಮಾದರಿ ರಾಜಕಾರಣಿ

ಮಾಂಜರಿ: ಕಲುಷಿತ ರಾಜಕಾರಣದಲ್ಲಿ ಸೇವಾ ಮನೋಭಾವ ರೂಢಿಸಿಕೊಂಡು ಕಲ್ಲಪ್ಪಣ್ಣ ಮಗೆಣ್ಣವರ ಸಹಕಾರಿ ಸಂಘ ಮುನ್ನಡೆಸುವುದರ ಜತೆಗೆ ರಾಜಕಾರಣ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಸಮಚಿತ್ತದಿಂದ ನಿಭಾಯಿಸುತ್ತಿದ್ದಾರೆ ಎಂದು ಅಥಣಿ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಹೇಳಿದರು.

ಮಾಂಜರಿ ಗ್ರಾಮದಲ್ಲಿ ಮಾಜಿ ಶಾಸಕ ಕಲ್ಲಪ್ಪಣ್ಣ ಮಗೆಣ್ಣವರ ಜನ್ಮದಿನದ ಅಂಗವಾಗಿ ಮೋಟಗಿಮಠದ ಪ್ರಭು ಚನ್ನಬಸವ ಸ್ವಾಮೀಜಿ ಸನ್ಮಾನಿಸಿದರು.  ಮಾಜಿ ಶಾಸಕ ಮೋಹನ್ ಶಹಾ, ಎಸ್.ಟಿ. ಮುನವಳ್ಳಿ, ಸತೀಶ ಮಗೆಣ್ಣವರ ಇತರರಿದ್ದರು.

ಮಾಂಜರಿ ಗ್ರಾಮದ ಕೆ.ಪಿ. ಮಗೆಣ್ಣವರ ಲಕ್ಷ್ಮೀ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯ ಸಭಾಭವನದಲ್ಲಿ ಸಂಸ್ಥೆಯ ಸಂಸ್ಥಾಪಕ ಹಾಗೂ ಮಾಜಿ ಶಾಸಕ ಕಲ್ಲಪ್ಪಣ್ಣ ಮಗ್ಗೆಣ್ಣವರ 76ನೇ ಜನ್ಮದಿನದ ಅಂಗವಾಗಿ ಬುಧವಾರ ಅಯೋಜಿಸಲಾಗಿದ್ದ ವಿವಿಧ ಸಾಧಕರ ಸನ್ಮಾನ ಸಮಾರಂಭ, ಉಚಿತ ರಕ್ತದಾನ ಶಿಬಿರ, ರೋಗಿಗಳಿಗೆ ಹಣ್ಣು ವಿತರಣೆ ಮತ್ತು ಜನ್ಮದಿನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಕಾಗವಾಡ ಮಾಜಿ ಶಾಸಕ ಮೋಹನ ಶಹಾ, ಎಸ್.ಟಿ.ಮುನ್ನೊಳ್ಳಿ, ಜೆ.ಎ.ಮೆಕ್ಕಳಕಿ ಸಂಸ್ಥೆ ಅಧ್ಯಕ್ಷ ಸತೀಶ ಮಗೆಣ್ಣವರ, ಉಪಾಧ್ಯಕ್ಷ ಸದಾಶಿವ ಮಿರ್ಜಿ, ಜಿಪಂ ಮಾಜಿ ಸದಸ್ಯ ಪಾಂಡುರಂಗ ಮಾನೆ, ಸಾಗರ ಮಂಗಸೂಳಿ,
ಪ್ರದೀಪ ಮಗ್ಗೆಣ್ಣವರ ಇತರರಿದ್ದರು. ಡಾಕ್ಟರೇಟ್ ಪಡೆದ ಸೋಮಶೇಖರ ಚೌಗುಲೆ, ಸಿಎ ಪದವಿ ಪಡೆದ ಪವನ ಕದಂ, ರಾಜ್ಯ ಹಾಗೂ ಜಿಲ್ಲಾಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದ ಪಾಂಡುರಂಗ ಕಾಮತ ಹಾಗೂ ಅಮಾನುಲ್ಲಾ ಕಿಲ್ಲೇದಾರ ಅವರನ್ನು ಸನ್ಮಾನಿಸಲಾಯಿತು.

ಚಿಕ್ಕೋಡಿ, ಅಥಣಿ, ರಾಯಬಾಗ, ಕಾಗವಾಡ, ಶಿರಗುಪ್ಪಿ, ತೇರದಾಳ, ಜಮಖಂಡಿ, ಬೆಳಗಾವಿ ಜತೆಗೆ ಕೆ.ಪಿ.ಮಗೆಣ್ಣವರ ಸಹಕಾರಿ ನಿರ್ದೇಶಕ ಮಂಡಳಿ ಮತ್ತು ಅವರ ಅಭಿಮಾನಿಗಳು ಭಾಗವಹಿಸಿದ್ದರು. ಶಿಕ್ಷಕಿ ರೇಖಾ ಪಾಟೀಲ ಸ್ವಾಗತಿಸಿದರು. ಶಿಕ್ಷಕ ಎಂ.ಬಿ.ಕೋಳಿ ನಿರೂಪಿಸಿ ವಂದಿಸಿದರು.