ಲಿಂಗದಹಳ್ಳಿ: ಹೋಬಳಿಯಾದ್ಯಂತ ಒಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೆಮ್ಮಣ್ಣುಗುಂಡಿ, ಕಲ್ಲತ್ತಿಗಿರಿ ವ್ಯಾಪ್ತಿಯ ಗಿರಿಶ್ರೇಣಿಗಳಿಂದ ಧುಮ್ಮಿಕ್ಕುವ ಕಲ್ಲತ್ತಿಹಳ್ಳ, ಭೀಮನಹಳ್ಳ, ಹೆಬ್ಬೆ ಫಾಲ್ಸ್, ಕೊಂಡೆಖಾನ್ ಫಾಲ್ಸ್, ಹಳ್ಳಕೊಳ್ಳಗಳಲ್ಲಿ ನೀರಿನ ಅರಿವು ಹೆಚ್ಚಾಗಿರುವ ಕಾರಣ ಸಂಚಾರಕ್ಕೆ ತೊಂದರೆಯಾಗಿದೆ.
ಶ್ರೀಕ್ಷೇತ್ರ ಕಲ್ಲತ್ತಿಗಿರಿ ಜಲಪಾತದ ನೀರು ಅಪಾಯ ಮಟ್ಟ ಮೀರಿ ಹರಿಯುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜಲಪಾತದ ಬಳಿಗೆ ಹೋಗಿ ವೀಕ್ಷಣೆ ಮಾಡುವುದನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಪ್ರವಾಸಿಗರು ಮತ್ತು ಭಕ್ತರು ಜಲಪಾತದ ಸಮೀಪ ಹೋಗುವ ಮೆಟ್ಟಿಲುಗಳ ಬಳಿಯ ಗೇಟ್‌ಗಳಿಗೆ ಬೀಗ ಹಾಕಲಾಗಿದೆ ಎಂದು ಲಿಂಗದಹಳ್ಳಿ ಠಾಣೆ ಎಸ್‌ಐ ಬಿ.ನೇತ್ರಾವತಿ ತಿಳಿಸಿದ್ದಾರೆ.