ಬಸವಕಲ್ಯಾಣ: ಕರ್ನಾಟಕ ಸೌಹಾರ್ದ ವೇದಿಕೆಯಿಂದ ನಗರದಲ್ಲಿ ಬುಧವಾರ ಶರಣ, ಸೂಫಿ, ಸಂತರ ಸಮಾವೇಶ ಹಾಗೂ ಸಾಮರಸ್ಯಕ್ಕಾಗಿ ಸೌಹಾರ್ದತೆ ನಡಿಗೆ ಜರುಗಿತು.
ಗಾಂಧಿ ವೃತ್ತದಿಂದ ಮುಖ್ಯ ರಸ್ತೆ ಮಾರ್ಗವಾಗಿ ಅಂಬೇಡ್ಕರ್ ವೃತ್ತದವರೆಗೆ ಏರ್ಪಡಿಸಿದ್ದ ಸೌಹಾರ್ದ ನಡಿಗೆಯಲ್ಲಿ ಪೂಜ್ಯರು, ವೇದಿಕೆ ಪದಾಧಿಕಾರಿಗಳು ಪ್ರಮುಖರು, ವಿವಿಧ ಸಂಘಟನೆ ಪದಾಧಿಕಾರಿಗಳು ಹೆಜ್ಜೆ ಹಾಕಿ ಸೌಹಾರ್ದ ಸಂದೇಶ ಸಾರಿದರು.
ನಗರದ ಬಸವೇಶ್ವರ ಚೌಕ ಸಮೀಪದ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸಮಾವೇಶ ಉದ್ಘಾಟಿಸಿದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯಾಧ್ಯಕ್ಷೆ ಡಾ.ಮೀನಾಕ್ಷಿ ಬಾಳಿ ಮಾತನಾಡಿ, ಜನರ ಮಧ್ಯ ಜಗಳ ಹಚ್ಚುವ, ಕೂಡಿ ಬಾಳುವ ನಮ್ಮ ಪರಂಪರೆಗೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ. ಇದರ ವಿರುದ್ಧ ಜನರು ಜಾಗೃತರಾಗಬೇಕಿದೆ ಎಂದರು.
ಮಹಾರಾಷ್ಟçದ ಉಸ್ತುರಿಯ ಶ್ರೀ ಕೋರಣೇಶ್ವರ ಸ್ವಾಮೀಜಿ ಮಾತನಾಡಿದರು. ಬೌದ್ಧ ಮಹಾಸಭಾ ರಾಷ್ಟಿçÃಯ ಉಪಾಧ್ಯಕ್ಷ ಮಿಲಿಂದ ಗುರೂಜಿ, ಆರ್‌ಎಲ್‌ಎಚ್‌ಪಿ ನಾಗರಾಜ ಶೀಲವಂತ, ಇಕ್ರಾಮೋದ್ದಿನ್ ಖಾದಿವಾಲೆ ಮಾತನಾಡಿದರು. ಸಂಚಾಲಕ ಮನೋಹರ ಮೈಸೆ ಪ್ರಾಸ್ತಾವಿಕ ಮಾತನಾಡಿ, ಸಮಾಜದಲ್ಲಿ ಸಾಮಸ್ಯ ಗಟ್ಟಿಗೊಳಿಸುವುದೇ ಕಾರ್ಯಕ್ರಮದ ಆಶಯ ಎಂದರು. ಆಕಾಶ ಖಂಡಾಳೆ ಸ್ವಾಗತಿಸಿದರು. ನಗರಸಭೆ ಮಾಜಿ ಸದಸ್ಯ ರವೀಂದ್ರ ಕೊಳಕುರ ನಿರೂಪಣೆ ಮಾಡಿದರು.
ಜಿಯಾಉಲ್ ಹಸನ್ ಜಾಗೀರದಾರ, ರವೀಂದ್ರ ಬೌದ್ಧಾಚಾರ್ಯ, ಪ್ರೊ.ಪ್ರಭು ಖಾನಾಪುರೆ, ಶ್ರೀದೇವಿ ಚಿವಡೆ, ನರಸಿಂಗರೆಡ್ಡಿ ಗದಲೇಗಾಂವ, ಧನರಾಜ ರಾಜೋಳೆ, ನೌಕರರ ಸಂಘದ ಅಧ್ಯಕ್ಷೆ ಜಯಶ್ರೀ ಮೆಂಡೋಳೆ, ಮಾಣಿಕ ರೆಡ್ಡಿ, ಜುಲ್ಫೇಕರ ಚಾಬುಸವಾರ ಅಂಗನವಾಡಿ ಇತರರಿದ್ದರು.