ಬಸವಕಲ್ಯಾಣ: ನಗರದ ಗಾಂಧಿವೃತ್ತದ ಬಳಿ ಶ್ರೀ ನವಶಕ್ತಿ ಯುವಕ ನವರಾತ್ರಿ ಮಹೋತ್ಸವ ಮಂಡಳದಿAದ ನವರಾತ್ರಿ ನಿಮಿತ್ತ ಘಟಸ್ಥಾಪನೆ ಹಾಗೂ ಶ್ರೀ ನವಶಕ್ತಿ ದೇವಿ ಸ್ಥಾಪನೆ ಭಾನುವಾರ ಜರುಗಲಿದ್ದು, ಒಂಬತ್ತು ದಿನ ಪೂಜೆ, ಆರತಿ ಸೇರಿ ವೈವಿಧ್ಯಮ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಗಾಂಧಿ ವೃತ್ತದಲ್ಲಿ ದೇವಿ ಮೂರ್ತಿ ಸ್ಥಾಪನೆಗಾಗಿ ಆಕರ್ಷಕ ಮಂಟಪಪ ಸಿದ್ಧಪಡಿಸಲಾಗಿದೆ. ಸೋಮವಾರ ಪೂಜೆ, ಅಭಿಷೇಕ, ಮಂಗಳವಾರ ಸಂಜೆ ೭ಕ್ಕೆ ಗೊಂದಳ, ಭಕ್ತಿ ಗೀತೆ ಕಾರ್ಯಕ್ರಮ, ಬುಧವಾರ ಬೆಳಗ್ಗೆ ೧೦ಕ್ಕೆ ರಕ್ತದಾನ ಶಿಬಿರ, ಗುರುವಾರ ಬಳೆ, ಮೆಹಂದಿ ವಿತರಣೆ, ಶುಕ್ರವಾರ ಸಂಜೆ ೭.೩೦ಕ್ಕೆ ಹಳದಿ, ಕುಂಕುಮ ಹಾಗೂ ಉಡಿ ತುಂಬುವ ಕಾರ್ಯಕ್ರಮ ನೆರವೇರಲಿದೆ. ಶನಿವಾರ ಮಧ್ಯಾಹ್ನ ೧ರಿಂದ ಸಂಜೆ ೬.೩೦ ರವರೆಗೆ ಮಹಾ ಪ್ರಸಾದ ವಿತರಣೆ, ೨೨ರಂದು ಸಂಜೆ ೬-೩೦ಕ್ಕೆ ದೀಪೋತ್ಸವ ಹಾಗೂ ರಾತ್ರಿ ೧೦ ಹೋಮ ಹವನ, ಪೂಜೆ ಕಾರ್ಯಕ್ರಮ, ೨೩ರಂದು ಮಹಾ ನವಮಿ, ಸಂಜೆ ೬-೩೦ಕ್ಕೆ ಭಕ್ತಿ ಗೀತೆ ಕಾರ್ಯಕ್ರಮ, ೨೪ರಂದು ವಿಜಯದಸಮಿ, ಸೀಮೋಲ್ಲಂಘನ, ಮೆರವಣಿಗೆ ನಡೆಯಲಿದೆ.
ನಗರದ ಪಂಚಕಟ್ಟಾ ಗಾಂಧಿ ಚೌಕನ ಶ್ರೀ ನವಶಕ್ತಿ ನವರಾತ್ರಿ ಮಹೋತ್ಸವ ಮಂಡಳದಿಂದ ೪೫ ವರ್ಷದಿಂದ (೧೯೭೮ರಿಂದ) ಪ್ರತಿ ವರ್ಷ ಗಾಂಧಿ ವೃತ್ತದಲ್ಲಿ ನವರಾತ್ರಿ ಮಹೋತ್ಸವ ಭಕ್ತಿ-ಶ್ರದ್ಧೆಯಿಂದ ಆಯೋಜಿಸುತ್ತಿದ್ದು, ಅದನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ ಎಂದು ಮಂಡಳ ಅಧ್ಯಕ್ಷ ಸಂದೀಪ ಬುಯ್ಯೆ ಮಾಹಿತಿ ನೀಡಿದ್ದಾರೆ.