ಮರಡಿ ಶಿವಾಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮಲ್ಲಿಕಾರ್ಜುನ ಕಲ್ಯಾಣ ಮಂಟಪ ಲೋಕಾರ್ಪಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಮುರುಘರಾಜೇಂದ್ರ ಸ್ವಾಮೀಜಿ, ಡಾ.ಶಿವಾನಂದ ಭಾರತಿ ಸ್ವಾಮೀಜಿ, ರಾಹುಲ್ ಜಾರಕಿಹೊಳಿ ಇತರರಿದ್ದರು. 
ಜಿಲ್ಲೆ

ಕಲ್ಯಾಣ ಮಂಟಪ ನಿರ್ಮಾಣ ಕಾರ್ಯ ಶ್ಲಾಘನೀಯ

ಗೋಕಾಕ: ಗ್ರಾಮೀಣ ಭಾಗದ ಬಡ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಲ್ಯಾಣ ಮಂಟಪ ನಿರ್ಮಿಸಿದ್ದು, ಸದುಪಯೋಗ ಪಡೆದುಕೊಳ್ಳಬೇಕು ಎಂದು ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ತಾಲೂಕಿನ ಮರಡಿಶಿವಾಪುರ ಗ್ರಾಮದಲ್ಲಿ ಈಚೆಗೆ ಪತ್ರಕರ್ತ ಚಂದ್ರಶೇಖರ್ ಕೊಣ್ಣೂರ ಅವರು ಧರ್ಮಪತ್ನಿ ದಿ.ಜಯಶ್ರೀ ಕೊಣ್ಣೂರ ಸ್ಮರಣಾರ್ಥ ನಿರ್ಮಿಸಿರುವ ಮಲ್ಲಿಕಾರ್ಜುನ ಕಲ್ಯಾಣ ಮಂಟಪ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೊಣ್ಣೂರ ಕುಟುಂಬದವರು ಕಲ್ಯಾಣ ಮಂಟಪ ಕಟ್ಟಿ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಹಸ್ತಾಂತರಿಸಿರುವುದು ಮಾದರಿ ಎಂದರು.

ಯುವ ನಾಯಕ ರಾಹುಲ್ ಜಾರಕಿಹೊಳಿ ನೂತನ ಕಲ್ಯಾಣ ಮಂಟಪ ಲೋಕಾರ್ಪಣೆಗೊಳಿಸಿದರು. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಇಂಚಲದ ಡಾ.ಶಿವಾನಂದ ಭಾರತಿ ಸ್ವಾಮೀಜಿ ಅವರಿಗೆ ತುಲಾಭಾರ ನೆರವೇರಿಸಲಾಯಿತು.

ಅರಳಿಕಟ್ಟಿ ಬ್ರಹ್ಮ ವಿದ್ಯಾಶ್ರಮದ ನಿಜಗುಣ ಸ್ವಾಮೀಜಿ, ಮಮದಾಪುರದ ಚರಮೂರ್ತೇಶ್ವರ ಸ್ವಾಮೀಜಿ, ಮರಡಿ ಶಿವಾಪುರದ ಗಂಗಯ್ಯ ಹಿರೇಮಠ ಸ್ವಾಮೀಜಿ, ಅಭಿಷೇಕ ಕಂಬಿ, ಮುಖಂಡ ಸರ್ವೋತ್ತಮ ಜಾರಕಿಹೊಳಿ, ಸಿದ್ದಲಿಂಗ ದಳವಾಯಿ, ರಾಜು ಮುನ್ನವಳಿ, ಶ್ಯಾಮಾನಂದ ಪೂಜಾರಿ ,ಚಂದ್ರಶೇಖರ ಕೊಣ್ಣೂರ, ಸ್ನೇಹ ಮತ್ತು ಆನಂದ ಕೊಣ್ಣೂರ, ಶೃತಿ ಮತ್ತು ಓಂಪ್ರಕಾಶ್ ಬೆಟಗೇರಿ ಇತರರು ಇದ್ದರು.