ಬೆಂಗಳೂರಿನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಪಿಎಂ ಸ್ವ-ನಿಧಿ ಅನುಷ್ಠಾನದಲ್ಲಿ ಉತ್ತಮ ಪ್ರಗತಿ ಸಾಧಿಸಿದ ಬಸವಕಲ್ಯಾಣ ನಗರಸಭೆಗೆ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಸಚಿವ ಡಾ.ಶರಣಪ್ರಕಾಶ ಪಾಟೀಲ್ ಪ್ರದಾನ ಮಾಡಿದರು. ಪೌರಾಯುಕ್ತ ರಾಜು ಡಿ.ಬಣಕಾರ, ಸಿಆರ್‌ಪಿಗಳಾದ ಜ್ಯೋತಿ, ರಾಣಿಮಾ, ಫಲಾನುಭವಿ ಆಶಾ ಇತರರಿದ್ದರು. 
ಜಿಲ್ಲೆ

ಕಲ್ಯಾಣ ನಗರಸಭೆಗೆ ರಾಜ್ಯ ಪ್ರಶಸ್ತಿ ಗರಿ

ಬಸವಕಲ್ಯಾಣ: ಪ್ರಧಾನಮಂತ್ರಿ ಸ್ವ-ನಿಧಿ ಅನುಷ್ಠಾನದಲ್ಲಿ ಉತ್ತಮ ಪ್ರಗತಿ ಸಾಧಿಸಿದ ಬಸವಕಲ್ಯಾಣ ನಗರಸಭೆ ರಾಜ್ಯ ಮಟ್ಟದ ಪ್ರಶಸ್ತಿಗೆ ಭಾಜನವಾಗಿದೆ. ಬೆಂಗಳೂರಿನ ವಿಕಾಸ ಸೌಧದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಪ್ರಶಸ್ತಿ ಪ್ರದಾನ ಮಾಡಿದರು.

ನಗರಸಭೆ ಪೌರಾಯುಕ್ತ ರಾಜು ಡಿ.ಬಣಕಾರ, ಸಿಆರ್‌ಪಿಗಳಾದ ಜ್ಯೋತಿ, ರಾಣಿಮಾ ಹಾಗೂ ಫಲಾನುಭವಿ ಆಶಾ ಪ್ರಶಸ್ತಿ ಸ್ವೀಕರಿಸಿದರು. ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಆಯುಕ್ತೆ ಉಮಾ ಮಹಾದೇವ, ಮಿಷನ್ ನಿರ್ದೇಶಕಿ ವಿದ್ಯಾ ಇತರರಿದ್ದರು.

ರಾಷ್ಟಿçÃಯ ಜೀವನೋಪಾಯ ಅಭಿಯಾನ ಪ್ರಧಾನಮಂತ್ರಿ ಬೀದಿಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ(ಪಿಎಂ ಸ್ವ-ನಿಧಿ) ಯೋಜನೆ ಅನುಷ್ಠಾನಗೊಳಿಸುವಲ್ಲಿ ಮಾಡಿದ ಉತ್ತಮ ಸಾಧನೆ ಗುರುತಿಸಿ ನಗರಸಭೆಗೆ ಬೆಸ್ಟ್ ಪರಫಾರ್ಮಿಂಗ್ ಯುಎಲ್‌ಬಿ-ಇನ್ ಲೋನ್ ಪರಫಾರ್ಮೆನ್ಸ್ ಆಟ್ ಸ್ಟೇಟ್ ಲೆವಲ್ ಅವಾರ್ಡ್ (ABest performing ULB-in Loan performance at state level) ಲಭಿಸಿದೆ.