ಭಾಲ್ಕಿ: ಶರಣರು ಕೊಟ್ಟ ಸಂದೇಶ ಮರಣವೇ ಮಹಾನವಮಿ ಮತ್ತು ಕಲ್ಯಾಣ ಕ್ರಾಂತಿ ವಿಜಯೋತ್ಸವ ಇಡೀ ಜಗತ್ತಿನ ಉತ್ಸವವಾಗಬೇಕು ಎಂದು ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟz್ದÉÃವರು ನುಡಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಮಂಗಳವಾರ ಕರೆದಿದ್ದ ಮರಣವೇ ಮಹಾನವಮಿ ಹಾಗೂ ಕಲ್ಯಾಣ ಕ್ರಾಂತಿ ವಿಜಯೋತ್ಸವ ಹಬ್ಬದ ಪೂರ್ವಭಾವಿ ಸಭೆಯಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, 12ನೇ ಶತಮಾನದಲ್ಲಿ ತತ್ವಕ್ಕಾಗಿ ಅನೇಕ ಶರಣರು ಬಲಿದಾನ ಮಾಡಿದ್ದಾರೆ. ಇದನ್ನು ಜಗತ್ತಿಗೆ ತಿಳಿಸುವ ಕಾರ್ಯವಾಗಬೇಕು ಎಂದರು.
ಒಬ್ಬರು ತಮ್ಮ ಧರ್ಮದ ತತ್ವಕ್ಕಾಗಿ ಸಿಲುಬೆಗೆ ಏರಿದ್ದನ್ನು ನೋಡಿದ ಜನತೆ ದೇವರೆಂದು ಒಪ್ಪಿಕೊಂಡಿದ್ದಾರೆ. ಆದರೆ 12ನೇ ಶತಮಾನದಲ್ಲಿ ನೂರಾರು ಶರಣರು ತತ್ವಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದರೂ ಮಾಹಿತಿ ಕೊರತೆಯಿಂದ ಜನಮಾನಸಕ್ಕೆ ಮುಟ್ಟಿಸಲು ಆಗಿಲ್ಲ. ಶರಣ ತತ್ವ ಮರಣವೇ ಮಹಾನವಮಿ ಮತ್ತು ತತ್ವಕ್ಕಾಗಿ ನಡೆದ ಜಯ ಕಲ್ಯಾಣ ಕ್ರಾಂತಿ ವಿಜಯೋತ್ಸವ ಜಗತ್ತಿನ ಹಬ್ಬವಾಗಿ ಪರಿಗಣಿಸಬೇಕು. ಭಾಲ್ಕಿಯಿಂದ ಪ್ರಾರಂಭವಾದ ಕಲ್ಯಾಣ ಕ್ರಾಂತಿ ವಿಜಯೋತ್ಸವ ಹಬ್ಬ ರಾಷ್ಟçದಾದ್ಯಂತ ಎಲ್ಲರೂ ಆಚರಿಸುವಂತಾಗಬೇಕು ಎಂದು ಆಶಿಸಿದರು.
ಸಂಸ್ಥಾನ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟz್ದÉÃವರು ಮಾತನಾಡಿ, ಬಸವಾದಿ ಶರಣರ ಹಿನ್ನೆö್ನಲೆಯ ಉತ್ಸವ ಮರಣವೇ ಮಹಾನವಮಿ ಮತ್ತು ಕಲ್ಯಾಣ ಕ್ರಾಂತಿ ವಿಜಯೋತ್ಸವ ನಾಳೆಯಿಂದ 12ರವರೆಗೆ ಚನ್ನಬಸವಾಶ್ರಮದಲ್ಲಿ ಜರುಗಲಿದೆ. ಚಂದ್ರಕಲಾ ಪ್ರಭು ಡಿಗ್ಗೆ ಅಧ್ಯಕ್ಷತೆಯಲ್ಲಿ ಪ್ರತಿನಿತ್ಯ ಕಾರ್ಯಕ್ರಮಗಳು ನಡೆಯುತ್ತವೆ. ಅಲ್ಲದೆ ಕದಳಿ ವೇದಿಕೆ ಅಧ್ಯಕ್ಷೆ ಮಲ್ಲಮ್ಮ ನಾಗನಕೆರೆ ಅವರಿಂದ 11ರವರೆಗೆ ಪ್ರತಿನಿತ್ಯ ಬೆಳಗ್ಗೆ 5ಕ್ಕೆ ಶಿವಯೋಗ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಚಂದ್ರಕಲಾ ಪ್ರಭು ಡಿಗ್ಗೆ ಮಾತನಾಡಿ, ನಾಡಿನ ಶಿವಶರಣರೆಲ್ಲರೂ ಸೇರಿ ಮರಣವೇ ಮಹಾನವಮಿ ಮತ್ತು ಕಲ್ಯಾಣ ಕ್ರಾಂತಿ ವಿಜಯೋತ್ಸವ ನಡೆಸುತ್ತಿರುವುದು ಸಂತಸದ ವಿಷಯ. ಪ್ರತಿನಿತ್ಯ ವಿದ್ಯಾರ್ಥಿನಿಯರಿಂದ ವಿಶೇಷ ಉಪನ್ಯಾಸ ಏರ್ಪಡಿಸಲಾಗುವುದು ಎಂದು ಹೇಳಿದರು.
ಹಿರೇಮಠ ಸಂಸ್ಥಾನದ ಕಾರ್ಯದರ್ಶಿ ಶ್ರೀ ಮಹಾಲಿಂಗ ಸ್ವಾಮೀಜಿ, ಪ್ರಭು ಡಿಗ್ಗೆ, ಮಲ್ಲಮ್ಮ ನಾಗನಕೇರೆ ಇತರರಿದ್ದರು. ವೀರಣ್ಣ ಕುಂಬಾರ ನಿರೂಪಣೆ ಮಾಡಿದರು. ರಾಜು ಜುಬರೆ ವಂದಿಸಿದರು. ವೀರಣ್ಣ ಕುಂಬಾರ ವಚನ ಗಾಯನ ನಡೆಸಿಕೊಟ್ಟರು.