ಜಿಲ್ಲೆ

ಕಲ್ಯಾಣ ಕೋಟೆ ಸ್ವಚ್ಛತಾ ಕಾರ್ಯ

ಬಸವಕಲ್ಯಾಣ: ನಗರದ ಚಾರಿತ್ರಿಕ ಕೋಟೆಯಲ್ಲಿ ಶನಿವಾರ ಜಿಲ್ಲಾಧಿಕಾರಿ ಗೋವಿಂದರಡ್ಡಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರಬಾಬು ನೇತೃತ್ವದಲ್ಲಿ ನಾಲ್ಕನೇ ಸುತ್ತಿನ ಸ್ವಚ್ಛತಾ ಅಭಿಯಾನ ಜರುಗಿತು.

ಕೋಟೆ ಪರಿಸರದಲ್ಲಿ ವಿವಿಧೆಡೆ ಬೆಳೆದಿದ್ದ ಹುಲ್ಲು-ಮುಳ್ಳು ಕಂಟಿ-ಕಸ ತೆಗೆದು ಸ್ವಚ್ಛಗೊಳಿಸಲಾಯಿತು. ಎಲ್ಲ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ, ಪೌರ ಕಾಮರ್ಿಕರು, ಎನ್ಎಸ್ಎಸ್, ಎನ್ಸಿಸಿ, ಕಾಲೇಜಿನ ವಿದ್ಯಾಥರ್ಿಗಳು ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸಿದರು.

ಸ್ವಾತಂತ್ರೃದ ಅಮೃತ ಮಹೋತ್ಸವ ನಿಮಿತ್ತ ಭಾನುವಾರ ಮತ್ತು ಸೋಮವಾರ ಕೋಟೆಗೆ ದೀಪಾಲಂಕಾರ ಹಾಗೂ ಸೋಮವಾರ ಸಂಜೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜತೆಗೆ ವಿಶೇಷ ರಸಮಂಜರಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಡಿಸಿ ತಿಳಿಸಿದರು.

ಸಹಾಯಕ ಆಯುಕ್ತ ರಮೇಶ ಕೋಲಾರ, ತಹಸೀಲ್ದಾರ್ ಸಾವಿತ್ರಿ ಸಲಗರ, ಪೌರಾಯುಕ್ತ ಶಿವಕುಮಾರ, ಗ್ರೇಡ್-2 ತಹಸೀಲ್ದಾರ್ ಪಲ್ಲವಿ ಬೆಳಕೆರೆ, ತಾಪಂ ಇಒ ಕಿರಣ ಪಾಟೀಲ್, ಬಿಇಒ ಸಿ.ಜಿ.ಹಳ್ಳದ, ಸಿಪಿಐ ರಘುವೀರಸಿಂಗ್ ಠಾಕೂರ್, ತಾಪಂ ಎಡಿ ಅರುಣಕುಮಾರ ಪಾಟೀಲ್, ಪಿಎಸ್ಐ ಅಮರ ಕುಲಕಣರ್ಿ, ಮಹಾದೇವ ಜುಮ್ಮಾ ಭಾಗವಹಿಸಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮ ನಾಳೆ: ಸ್ವಾತಂತೊ್ರೃತ್ಸವ ನಿಮಿತ್ತ ತಾಲೂಕು ಆಡಳಿತ ಸೋಮವಾರ ಬೆಳಗ್ಗೆ 9ಕ್ಕೆ ರಥ ಮೈದಾನದ ಸಭಾಭವನದಲ್ಲಿ ಧ್ವಜಾರೋಹಣ, ನಗರಸಭೆ ಮತ್ತು ಬಿಕೆಡಿಬಿ ಸಹಯೋಗದಡಿ ಸಂಜೆ 5ಕ್ಕೆ ಕೋಟೆ ಮುಂಭಾಗದಲ್ಲಿ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿಶೇಷ ರಸಮಂಜರಿ ಆಯೋಜಿಸಲಾಗಿದೆ. ಕೋಟೆಗೆ ಎರಡು ದಿನ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದೆ ಎಂದು ತಹಸೀಲ್ದಾರ್ ಸಾವಿತ್ರಿ ಸಲಗರ ತಿಳಿಸಿದ್ದಾರೆ.