ಜಿಲ್ಲೆ

ಕಲ್ಯಾಣ ಕರ್ನಾಟಕ ಪ್ರಗತಿಗೆ ಶ್ರಮಿಸುವೆ

ಯಾದಗಿರಿ: ಕಲ್ಯಾಣ ಕರ್ನಾಟಕದ ಪ್ರಗತಿಗೆ ಪ್ರಾಮಾಣಿಕವಾಗಿ ಶ್ರಮಿಸುವೆ ಎಂದು ವಿಧಾನ ಪರಿಷತ್ ಈಶಾನ್ಯ ಪದವೀಧರ ಚುನಾವಣಾ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ಹೇಳಿದರು.

ನಗರದ ರಾಚೋಟ್ಟಿ ವೀರಣ್ಣ ದೇವಸ್ಥಾನ ಬಳಿ ಇರುವ ನಿವೇದಿತಾ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳ ಭರ್ತಿ, ಶಿಕ್ಷಣ ಮತ್ತು ಶಿಕ್ಷಕರ ಏಳಿಗೆಗಾಗಿ ಪ್ರಾಮಾಣಿಕವಾಗಿ ದುಡಿಯುವುದಾಗಿ ಪಾಟೀಲ್ ಭರವಸೆ ನಿಡಿದರು.

ಮುಖ್ಯಮಂತ್ರಿಗಳು ಕಲ್ಯಾಣ ಕರ್ನಾಟಕ ಭಾಗಕ್ಕೆ ಮಲತಾಯಿ ಧೋರಣೆ ತೋರಿದರೆ. ಈ ಹಿಂದೆ ನನಗೆ ಸಿಕ್ಕ ಅವಕಾಶ ಸದ್ಬಳಕೆಮಾಡಿಕೊಂಡು ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸುವ ಜತೆಗೆ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಹೀಗಾಗಿ ನನಗೆ ಮೊದಲ ಪ್ರಾಶಸ್ತ್ಯದ ಮತ ನೀಡುವ ಮೂಲಕ ಮತ್ತೊಮ್ಮೆ ಸೇವೆ ಸಲ್ಲಿಸಲು ಅನುವು ಮಾಡಿಕೊಡಬೇಕು ಎಂದು ಅವರು ಮನವಿ ಮಾಡಿದರು.

ನಿವೇದಿತಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಖಂಡಪ್ಪ ದಾಸನ ಮಾತನಾಡಿ, ಅಮರನಾಥ ಪಾಟೀಲ್​ ಅವರು ೩೭೧ಜೆ ಸಲುವಾಗಿ ವಿಧಾನ ಪರಿಷತ್‌ನಲ್ಲಿ ಸಾಕಷ್ಟು ಹೋರಾಟ ಮಾಡಿದ್ದರೆ. ಅಭಿವೃದ್ಧಿಗಾಗಿ ಸರ್ಕಾರದ ಗಮನಕ್ಕೆ ತಂದಿದರೆ. ಪದವೀಧರರ ಪ್ರೀತಿಗೆ ಪಾತ್ರರಾದ ಪಾಟೀಲ್​ ಅವರು ಸರಳ ಸಜ್ಜನಿಕೆಯ ಪ್ರತೀಕವಾಗಿದ್ರೆದಾರೆ ಎಂದರು.

ಕಲ್ಯಾಣ ಕರ್ನಾಟಕ ಭಾಗದ ಪ್ರಬುದ್ಧ ಮತದಾರರು ಈ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಗೆಲ್ಲಿಸಿ ಪಾಟೀಲ್​ ಅವರನ್ನು ವಿಧಾನ ಪರಿಷತ್‌ಗೆ ಕಳುಹಿಸಿಕೊಡಬೇಕು. ಜಿಲ್ಲೆಯ ಮಹಾಜನತೆ ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅಪೂರ್ವ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದರು
ಮಹೇಶಗೌಡ ಮುದ್ನಾಳ್, ದೇವಿಂದ್ರನಾಥ ನಾದ, ವೆಂಕಟರಡ್ಡಿ ಅಬ್ಬೆತುಮಕೂರು, ಲಿಂಗಪ್ಪ ಹತ್ತಿಮನಿ, ಭೀಮಣ್ಣಗೌಡ ಕ್ಯಾತನಾಳ, ಪ್ರಭುಗೌಡ, ರಾಜಶೇಖರ ಉಪ್ಪಿನ, ಹಣಮಂತ ಇಟಗಿ, ರಮೇಶ ದೊಡ್ಮನಿ, ಕಾರ್ಯದರ್ಶಿ ಮಧುಸುಧನ ದಾಸನ್ ಇತರರಿದ್ದರು.


ನನ್ನ ಹಿಂದಿನ ಕೆಲಸ ನೋಡಿ ಮತ ನೀಡಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ಹಿಂದೆ ವಿಧಾನ ಪರಿಷತ್ ಸದಸ್ಯನಾಗಿದ್ದಾಗ ಮಾಡಿದ ಕೆಲಸ ನೋಡಿ ಮತ ನೀಡಬೇಕು ಎಂದು ಈಶಾನ್ಯ ಪದವೀಧರರ ಚುನಾವಣೆ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ಮನವಿ ಮಾಡಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಈ ಹಿಂದೆ ಎಂಎಲ್ಸಿ​ಯಾಗಿ ಈ ಭಾಗದ ನೂರಾರು ಸಮಸ್ಯೆಯನ್ನು ಪರಿಷತ್‌ನಲ್ಲಿ ಧ್ವನಿ ಎತ್ತುವ ಮೂಲಕ ಅವುಗಳಿಗೆ ಪರಿಹಾರಕ್ಕೆ ಪ್ರಯತ್ನಿಸಿದ್ದೆನೆ. ಎಚ್‌ಕೆಆರ್‌ಡಿಬಿ ಅಧ್ಯಕ್ಷನಾಗಿ ಅನೇಕ ಸಮಸ್ಯೆಗಳ ಇತ್ಯರ್ಥ ಮಾಡಲಾಗಿದೆ. ಇದಲ್ಲದೇ ಬಿಜೆಪಿ ಅವಿಭಜಿತ ಜಿಲ್ಲಾಧ್ಯಾಕ್ಷನಾಗಿ ಸೇವೆ ಸಲ್ಲಿಸಿದ್ದು, ತಮ್ಮ ಇಡೀ ಜೀವನ ಸುದೀರ್ಘ ಜನಸೇವೆಯನ್ನು ಪರಿಗಣಿಸಿ ನನಗೆ ಈ ಬಾರಿ ಮತ್ತೊಮ್ಮೆ ಅವಕಾಶ ಮಾಡಿಕೊಡಬೇಕು ಎಂದು ಕೋರಿದರ

೩೭೧ಜೆ ರದ್ದಿಗೆ ಕಾಂಗ್ರೆಸ್ ಹುನ್ನಾರ: ನಮ್ಮ ಭಾಗಕ್ಕೆ ದೊರಕಿರುವ ೩೭೧ಜೆ ಸೌಲಭ್ಯವನ್ನು ತಡೆಯಲು ಸಚಿವ ಎಚ್.ಕೆ.ಪಾಟೀಲ್ ಮುಖ್ಯಮಂತ್ರಿಗೆ ಪತ್ರ ಬರೆದಿರುವುದು ದುರ್ಧೈವ. ಈ ಸೌಲಭ್ಯದಿಂದಾಗಿ ಉಳಿದ ಭಾಗದವರಿಗೆ ಅನ್ಯಾಯವಾಗುತ್ತಿದೆ ಎಂದು ಪತ್ರ ಬರೆದಿದ್ದರೆ. ಆದರೆ ನಮ್ಮ ಭಾಗಕ್ಕೆ ಆದ ಅನ್ಯಾಯ ಉಳಿದ ಭಾಗಕ್ಕೆ ಆಗಿಲ್ಲ ಎಂಬುದು ಅವರಿಗೆ ಗೊತ್ತಿದ್ದರೂ ಇಂತಹ ಹುನ್ನಾರ ನಡೆಸಿದ್ದಾರೆ ಎಂದು ಅವರು ಆರೋಪಿಸಿದರು. ೩೭೧ಜೆ ತಡೆಯಲು ಹಸಿರು ಪ್ರತಿಷ್ಠಾನದಿಂದ ಕುತಂತ್ರ ಮಾಡಿದೆ. ಈ ಪ್ರತಿಷ್ಠಾನಕ್ಕೆ ಕೈ ಪಕ್ಷದ ಕುಮ್ಮಕ್ಕು ಇದೆ ಎಂದ ಅಮರನಾಥ ಆರೋಪಿಸಿದರು.

ಚುನಾವಣೆಯಲ್ಲಿ ಗೋಲ್ ಮಾಲ್​: ಈಶಾನ್ಯ ಪದವೀಧರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಸ್ಪಷ್ಟತೆ ಎಂಬುದು ಇಲ್ಲ. ಈ ಬಗ್ಗೆ ಸರಿಯಾದ ಮಾಹಿತಿ ಪದವೀಧರರಿಗೆ ಜಿಲ್ಲಾಡಳಿತ ನೀಡುತ್ತಿಲ್ಲ ಎಂದು ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ಆರೋಪಿಸಿದರು. ಈ ಚುನಾವಣೆಯಲ್ಲಿ ಅಧಿಕಾರಿಗಳು ಆಡಳಿತಾರೂಢ ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಮತದಾರರ ಪಟ್ಟಿಯಲ್ಲಿ ಪದವೀಧರರ ಎಲ್ಲ ವಿವರ ಮತ್ತೊ ಮೊಬೈಲ್ ನಂ. ಸಂಗ್ರಹಿಸಲಾಗಿದೆ ಆದರೆ ಈ ವಿವರ ಬಿಜೆಪಿಯವರಿಗೆ ಸಿಗುತ್ತಿಲ್ಲ. ಈ ರೀತಿಯ ತಾರತಮ್ಯ ಜಿಲ್ಲಾ ಚುನಾವಣೆ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ದೂರಿದರು. ಇದುವರೆಗೆ ಮತಗಟ್ಟೆ ವಿವರ ನೀಡಿಲ್ಲ. ಯಾವುದೇ ಕಾರ್ಯಾಗಾರ ಮಾಡಿಲ್ಲ. ಮತದಾರರ ಪಟ್ಟಿಯಲ್ಲಿರುವ ಅದ್ವಾನ ಸರಿಪಡಿಸಿ ಎಂದು ಒತ್ತಾಯಿಸಿದರೂ ಕ್ಯಾರೆ ಎನ್ನುತ್ತಿಲ್ಲ. ಆದರೆ ಇನ್ನೂ ಅವಕಾಶವಿದ್ದು, ಕೂಡಲೇ ಚುನಾವಣಾಧಿಕಾರಿಗಳು ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು ಎಂದು ಅವರು ಒತ್ತಾಯಿಸಿದರು. ರಾಜ್ಯ ಕರ‍್ಯದರ್ಶಿ ಲಲಿತಾ ಅನಪುರ,ಯುವ ಮುಖಂಡ ಮಹೇಶರಡ್ಡಿ ಮುದ್ನಾಳ್, ದೇವಿಂದ್ರನಾಥ ನಾದ,ನಗರಸಭೆ ಸದಸ್ಯ ವಿಲಾಸ ಪಾಟೀಲï, ಹಣಮಂತ ಇಟಗಿ, ವೀಣಾ ಮೋದಿ, ನಗರ ಮಂಡಲ ಅಧ್ಯP್ಷÀ ಲಿಂಗಪ್ಪ ಹತ್ತಿಮನಿ, ಭೀಮಣ್ಣಗೌಡ ಖ್ಯಾತನಾಳ, ಜಿಲ್ಲಾ ಮಾಧ್ಯಮ ಸಂಚಾಲಕ ವಿರುಪಾಕ್ಷಯ್ಯ ಸ್ವಾಮಿ ಸುದ್ದಿಗೋಷ್ಠಿಯಲ್ಲಿದ್ದರು.

ಯಾದಗಿರಿ ನಗರದ ನಿವೇದಿತಾ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ಹಮ್ಮಿಕೊಂಡ ಈಶಾನ್ಯ ಪದವೀಧರರ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ಖಂಡಪ್ಪ ದಾಸನ, ಮಹೇಶಗೌಡ ಮುದ್ನಾಳ್, ದೇವಿಂದ್ರನಾಥ ನಾದ, ವೆಂಕಟರಡ್ಡಿ ಅಬ್ಬೆತುಮಕೂರು, ಲಿಂಗಪ್ಪ ಹತ್ತಿಮನಿ, ಭೀಮಣ್ಣಗೌಡ ಕ್ಯಾತನಾಳ, ಪ್ರಭುಗೌಡ, ರಾಜಶೇಖರ ಉಪ್ಪಿನ, ಹಣಮಂತ ಇಟಗಿ ಇತರರಿದ್ದರು.